ಗೋಣಿಕೊಪ್ಪಲು, ಸೆ. 25: ಶ್ರೀ ನಾರಾಯಣ ಗುರು ಅವರ 162 ನೇ ಜನ್ಮದಿನಾಚರಣೆ ಅಂಗವಾಗಿ ಗೋಣಿಕೊಪ್ಪಲು ಪರಿಮಳ ಮಂಗಳಾ ವಿಹಾರ ಆವರಣದಲ್ಲಿ ಹೂವಿನ ರಂಗವಲ್ಲಿ (ಪೂಕಳಂ) ಸ್ಪರ್ಧೆಯನ್ನು ಏರ್ಪಡಿಸಿರುವದಾಗಿ ನಗರದ ಎಸ್.ಎನ್.ಡಿ.ಪಿ.ಶಾಖಾ ಯೋಗಂ ಘಟಕ ಹಾಗೂ ಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ ಪ್ರಮುಖರು ತಿಳಿಸಿದ್ದಾರೆ.

ಗೋಣಿಕೊಪ್ಪಲು ಪ್ರೆಸ್ ಕ್ಲಬ್ ನಲ್ಲಿ ಮಾಹಿತಿ ನೀಡಿದ ಆಚರಣಾ ಸಮಿತಿ ಅಧ್ಯಕ್ಷ ಟಿ.ಕೆ. ಪುರುಷೋತ್ತಮ ಅವರು, ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯ ಜನ್ಮದಿನವಾದ ಅ.2 ರಂದು ಶ್ರೀ ನಾರಾಯಣ ಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಿಗ್ಗೆ 6 ರಿಂದ ಪೂಕಳಂ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಮೊದಲ 20 ಮಂದಿಗೆ ಸ್ಪರ್ಧೆಯಲ್ಲಿ ಅವಕಾಶ ನೀಡಲಾಗುವದು. ತಾ.28ಕ್ಕೂ ಮುನ್ನ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.

ಎಸ್.ಎನ್.ಡಿ.ಪಿ.ಗೋಣಿಕೊಪ್ಪಲು ಘಟಕದಲ್ಲಿ 400ಕ್ಕೂ ಅಧಿಕ ಸದಸ್ಯರಿದ್ದು, ಸದಸ್ಯರ ಮಕ್ಕಳಿಗೆ ಕಳೆದ 2015-16 ರಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದವರನ್ನು ಗುರುತಿಸಿ ಸನ್ಮಾನಿಸಲಾಗುವದು. ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳು ತಾ. 28 ಕ್ಕೂ ಮುನ್ನ ತಮ್ಮ ಅಂಕಪಟ್ಟಿಯನ್ನು ನೀಡಿ ಹೆಸರು ನೋಂದಾಯಿಸಿಕೊಳ್ಳಲು ತಿಳಿಸಿದ್ದಾರೆ.

ಗೋಣಿಕೊಪ್ಪಲು ಪಟೇಲ್ ನಗರದಲ್ಲಿ ಘಟಕದ ಕಚೇರಿಗೆ ನಿವೇಶನ ಗುರುತಿಸಲಾಗಿದ್ದು, ಗುರು ಮಂದಿರ ಹಾಗೂ ಸುಮಾರು ರೂ. 70 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಉದ್ದೇಶವಿದ್ದು ಅನುದಾನಕ್ಕಾಗಿ ರಾಜ್ಯ ಸರ್ಕಾರಕ್ಕೂ ಮನವಿ ಮಾಡಲಿರುವದಾಗಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಸುಬ್ರಮಣಿ ತಿಳಿಸಿದ್ದಾರೆ.

ಹೆಸರು ನೋಂದಾಯಿಸುವವರು 9481431825 (ಪೂಕಳಂ) ಹಾಗೂ 9480448777 (ಪ್ರತಿಭಾ ಪುರಸ್ಕಾರ) ಸಂಖ್ಯೆಗೆ ಕರೆಮಾಡಲು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಆಚರಣಾ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ರಮಾವತಿ, ಅಧ್ಯಕ್ಷ ಟಿ.ಕೆ. ಪುರುಷೋತ್ತಮ್, ಉಪಾಧ್ಯಕ್ಷ ಪಿ.ಜಿ. ರಾಜಶೇಖರ್, ಎಸ್.ಎನ್.ಡಿ.ಪಿ. ಉಪಾಧ್ಯಕ್ಷ ಸಿ.ಕೆ. ರಾಜೇಂದ್ರನ್ ಹಾಗೂ ಕಾರ್ಯದರ್ಶಿ ಪಿ.ಸಿ. ಜಿತೇಂದ್ರ ಇದ್ದರು.