ಕುಶಾಲನಗರ, ಜು. 13: ಸಿಐಡಿ ತ&divound;ಖೆಯಿಂದ ನ್ಯಾಯ ದೊರಕುತ್ತಿಲ್ಲ. ಅದು ಸರಕಾರದ ಪರವಾಗಿ ವರದಿ ಮಾಡಿದೆ. ತಮಗೆ ನ್ಯಾಯಾಂಗ ತನಿಖೆ ಮೇಲೆ ನಂಬಿಕೆ ಇಲ್ಲ ಎಂದು ಆತ್ಮಹತ್ಯೆಗೆ ಶರಣಾದ ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಪತ್ನಿ ಪಾವನ ಗಣಪತಿ ಪ್ರತಿಕ್ರಿಯಿಸಿದ್ದಾರೆ. ಈ ಹಿನೆÀ್ನಲೆಯಲ್ಲಿ ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲು ಸಿದ್ಧಳಾಗಿದ್ದೇನೆ ಎಂದು ಬುಧವಾರ ರಂಗಸಮುದ್ರದ ಗಣಪತಿ ಅವರ ತಂದೆಯ &divound;ವಾಸದಲ್ಲಿ ಸುದ್ದಿಗಾರರೊಂದಿಗೆ ಪಾವನ ಅವರು ಹೇಳಿದ್ದಾರೆ.

ತನ್ನ ಪತಿ ಸಾವಿಗೆ ಮುನ್ನ ಮಡಿಕೇರಿಯಲ್ಲಿ ಹೇಳಿಕೆ &divound;ೀಡಿದ ಸಂದರ್ಭ ಆರೋಪಿಸಿರುವ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯದ ಸಚಿವ ಕೆ.ಜೆ.ಜಾರ್ಜ್ ಅವರ ಮೇಲೆ ಕಾನೂನು ಕ್ರಮಕ್ಕಾಗಿ ದೂರು ಸಲ್ಲಿಸಿದ್ದೇನೆ. ಆದರೆ ವಿಧಾನಸಭೆಯಲ್ಲಿ ತನಗೆ ಅವಮಾನ ಮಾಡಿದ ಸರಕಾರ ನ್ಯಾಯಾಂಗ ತನಿಖೆಗಾಗಿ ಆದೇಶ ಮಾಡಿ ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಕರಣವನ್ನು ತಕ್ಷಣ ಸಿಬಿಐಗೆ ವಹಿಸಿ ತನಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದು ಪಾವನ ರಂಗಸಮುದ್ರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ. ಈ ಸಂದರ್ಭ ಗಣಪತಿ ಅವರ ಪುತ್ರರಾದ ನೇಹಲ್ ಮತ್ತು ಸಾಹಿಲ್ ಇದ್ದರು.