ವೀರಾಜಪೇಟೆ, ಸೆ. 12: ಗ್ರಾಮೀಣ ಪ್ರದೇಶಗಳಲ್ಲಿ ಎಲೆಮರೆಯ ಕಾಯಿಯಂತೆ ಅನೇಕ ಪ್ರತಿಭೆಗಳಿದ್ದು ಅಂತವರನ್ನು ಗುರುತಿಸಿ ಗ್ರಾಮೀಣ ಕಲೆಗಾರರಿಗೆ ಗೌರವ ದೊರಕುವಂತಾಗಬೇಕು ಎಂದು ಬೆಳೆಗಾರರು ಜೆ.ಡಿ.ಎಸ್.ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಬಿಪ್ರಾಯಪಟ್ಟಿದ್ದಾರೆಗೌರಿ-ಗಣೇಶೋತ್ಸವದ ಪ್ರಯುಕ್ತ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಎನ್.ವೆಂಕಟೇಶ್ ಕಾಮತ್ ಟ್ರಸ್ಟ್ ಸಹಯೋಗದಲ್ಲಿ ಎರಡನೇ ವರ್ಷದ ‘ವಾಯ್ಸ್ ಆಫ್ ವೀರಾಜಪೇಟೆ 2016’ ಸಂಗೀತ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡುತ್ತ ಗ್ರಾಮೀಣ ಪ್ರದೇಶದಲ್ಲಿರುವವರಿಗೆ ತಮ್ಮ ಪ್ರತಿಭೆ ತೋರಿಸಲು ಅವಕಾಶ ಮತ್ತು ವೇದಿಕೆಯ ಕೊರತೆ ಇದ್ದ ಸಂದರ್ಭ ಹಿರಿಯ ವಕೀಲ ಎನ್. ರವೀಂದ್ರ ಕಾಮತ್ ಅವರು ಪ್ರತಿಯೊಬ್ಬರಿಗೂ ತಮ್ಮ ಪ್ರತಿಭೆಯನ್ನು ತೋರಲು ವೇದಿಕೆ ಹಾಗೂ ಅವಕಾಶವನ್ನು ಮಾಡಿಕೊಟ್ಟಿರುವದು ಉತ್ತಮ ಕಾರ್ಯ ಎಂದರು. ಇಲ್ಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸುವಂತಾಗಬೇಕು ಎಂದರು.
ಬಸವೇಶ್ವರ ದೇವಾಲಯದ ಅಧ್ಯಕ್ಷ ಎನ್.ಗೋಪಾಲಕೃಷ್ಣ ಕಾಮತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪುಷ್ಪರಾಜ್, ಶಿವಮೊಗ್ಗದ ಜಯಶೀಲನ್ ಮಾತನಾಡಿದರು. ಹಿರಿಯ ವಕೀಲ ಎನ್.ರವೀಂದ್ರ ಕಾಮತ್ ಸ್ವಾಗತಿಸಿ, ನಿರೂಪಿಸಿದರು.