ಗೋಣಿಕೊಪ್ಪಲು, ಆ. 27: ಇಲ್ಲಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಕೊಡಗು ಫ್ಲೋರ್‍ಬಾಲ್ ಅಸೋಸಿಯೇಷನ್ ವತಿಯಿಂದ ಆರಂಭವಾಗಿರುವ ಎರಡನೇ ವರ್ಷದ ರಾಜ್ಯಮಟ್ಟದ ಫ್ಲೋರ್‍ಬಾಲ್ ಕ್ರೀಡಾಕೂಟವನ್ನು ಕಾವೇರಿ ಕಾಲೇಜು ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ. ಎ ಸಿ ಗಣಪತಿ ಚಾಲನೆ ನೀಡಿದರು.
ನಂತರ ಮಾತನಾಡಿ, ಕ್ರೀಡಾ ಜಿಲ್ಲೆಯಲ್ಲಿ ಫ್ಲೋರ್‍ಬಾಲ್ ಕ್ರೀಡೆಯನ್ನು ಆರಂಭಿಸಿರುವದು ಕ್ರೀಡಾ ಕ್ಷೇತ್ರದ ಉತ್ತಮ ಬೆಳವಣಿಗೆ ಎಂದರು.
ಕೊಡಗು ಫ್ಲೋರ್ ಬಾಲ್ ಅಸೋಸಿಯೇಷನ್ ಲಾಂಛನ ಡಿಸೈನರ್ ರಚನ್ ಪೂವಣ್ಣ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಫ್ಲೋರ್‍ಬಾಲ್ ಅಸೋಸಿಯೇಷನ್ ರಾಜ್ಯಧ್ಯಕ್ಷ ಶುಭಕರ್ ಭುವನೇಶ ರಾವ್, ಜಿಲ್ಲಾಧ್ಯಕ್ಷ ಮಿನ್ನಂಡ ಜೋಯಪ್ಪ, ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್ ಎಸ್ ಮಾದಯ್ಯ, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಗೌರಿಶಂಕರ್, ಕಾವೇರಿ ಕಾಲೇಜು ವಿದ್ಯಾ ಸಂಸ್ಥೆ ಕಾರ್ಯದರ್ಶಿ ಕೆ ಜಿ ಉತ್ತಪ್ಪ, ಸಿಇಒ ಮೊಣ್ಣಪ್ಪ ಉಪಸ್ಥಿತರಿದ್ದರು. ಡಾ. ದೇಚಮ್ಮ ಸ್ವಾಗತಿಸಿದರು. ಈ ಸಂದರ್ಭ ನಡೆದ ಚೆಕ್ಕೇರ ಮುತ್ತಣ್ಣ ಹಾಗೂ ಚಿರಿಯಪಂಡ ಪೂವಣ್ಣ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಚೆಕ್ಕೇರ ಮುತ್ತಣ್ಣ ತಂಡ 3-0 ಗೋಲುಗಳಿಂದ ಜಯ ಸಾಧಿಸಿತು.
ಫಲಿತಾಂಶ : ಪುರುಷರ ವಿಭಾಗದಲ್ಲಿ ಕೊಡಗು ಎ ತಂಡವು ಬೆಳಗಾಂ ತಂಡವನ್ನು 12-0 ಗೋಲುಗಳಿಂದ ಮಣಿಸಿತು. ಬೆಂಗಳೂರು ತಂಡ ತುಮಕೂರು ತಂಡವನ್ನು 6-1 ಗೋಲುಗಳಿಂದ ಸೋಲಿಸಿತು. ಬಾಗಲಕೋಟೆ ಹಾಗೂ ಮೈಸೂರು ಬಿ ತಂಡಗಳ ನಡುವಿನ ಪಂದ್ಯ ಟೈ ಫಲಿತಾಂಶ ಪಡೆಯಿತು. ಕೊಡಗು ಬಿ ತಂಡವು ಮೈಸೂರು ಎ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ರೋವರ್ಸ್ ಬೆಂಗಳೂರು ತಂಡವು 9-0 ಗೋಲುಗಳಿಂದ ಕೊಪ್ಪಳ ತಂಡವನ್ನು ಮಣಿಸಿತು. ಮಂಡ್ಯ ತಂಡವು ಕೊಡಗು ಸಿ ತಂಡವನ್ನು 1-0 ಗೋಲುಗಳ ಅಂತದಲ್ಲಿ ಮಣಿಸಿತು. ಬಾಗಲಕೋಟೆ ತಂಡ ಕೊಪ್ಪಳ ತಂಡದ ವಿರುದ್ಧ 3-2 ಗೋಲುಗಳಿಂದ ಗೆಲುವು ಪಡೆಯಿತು. ಬೆಂಗಳೂರು ತಂಡವು ಕೊಡಗು ಬಿ ತಂಡವನ್ನು 1-0 ಅಂತರದಲ್ಲಿ ಸೋಲಿಸಿತು. ರೋವರ್ ಹೆಚ್‍ಸಿ ಹಾಗೂ ಮೈಸೂರು ತಂಡಗಳ ನಡುವಿನ ಪಂದ್ಯ 1-1 ಗೋಲುಗಳಿಂದ ಡ್ರಾ ಸಾಧಿಸಿತು.
ಮಹಿಳಾ ವಿಭಾಗ: ಕೊಡಗು ಎ ತಂಡ ತುಮಕೂರು ತಂಡದ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಬೆಂಗಳೂರು ತಂಡವು 3-0 ಅಂತರದಲ್ಲಿ ಕೊಡಗು ಬಿ ವಿರುದ್ಧ ಜಯ ಸಾಧಿಸಿತು. ತಾಂತ್ರಿಕ ನಿರ್ದೇಶಕರುಗಳಾಗಿ ಮಿನ್ನಂಡ ಜೋಯಪ್ಪ ಹಾಗೂ ಮಲ್ಲಮಾಡ ಸಂತೋಷ್ ಕಾರ್ಯನಿರ್ವಹಿಸಿದರು. ತಾಂತ್ರಿಕ ವರ್ಗದಲ್ಲಿ ಮಹೇಶ್, ವರ್ಷಿತಾ, ಜಯಂತ್, ಅನಿರುದ್ಧ್, ರೇವತಿ, ಮಹಂತೇಶ್, ಧೀರಜ್, ರೆಫ್ರಿಗಳಾಗಿ ಜಯಂತ್, ಮಹಂತೇಶ್, ನಿಖಿಲ್, ವಿನೋದ್ ಕುಮಾರ್, ಮದನ್, ಪ್ರೀತಿ, ಧನಂಜಯ್, ಜನೀಶ್, ಧೀರಜ್, ಪೂಜಾ, ಶಶಿ ಹಾಗೂ ಗಂಗಾಧರ್ ಕಾರ್ಯನಿರ್ವಹಿಸಿದರು.