ಮಡಿಕೇರಿ, ಅ. 5: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ವೀರಾಜಪೇಟೆ ಸಮೀಪದ ಬಾಳುಗೋಡುವಿನಲ್ಲಿ ಮುಂದಿನ ನÀ. 4 ರಿಂದ 6 ರವರೆಗೆ ನಾಲ್ಕನೇ ವರ್ಷದ ‘ಕೊಡವ ನಮ್ಮೆ’ ಕಾರ್ಯಕ್ರಮವನ್ನು ಆಯೋಜಿ ಸಲಾಗಿದೆ ಎಂದು ಸಾಂಸ್ಕøತಿಕ ಸಮಿತಿಯ ಅಧ್ಯಕ್ಷ ನಾಪಂಡ ಕಾಳಪ್ಪ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಹಾಗೂ ಹೊರ ಜಿಲ್ಲೆಯ ಕೊಡವ ಸಮುದಾಯ ಬಾಂಧವರನ್ನು ಒಂದೆಡೆ ಸೇರಿಸುವ ಮೂಲಕ ಒಗ್ಗಟ್ಟನ್ನು ಕಂಡುಕೊಳ್ಳುವ ಮತ್ತು ಕೊಡವ ಸಂಸ್ಕøತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಉದ್ದೇಶದಿಂದ ಕೊಡವ ನಮ್ಮೆಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು. ಪ್ರಸಕ್ತ ಸಾಲಿನ ಕೊಡವ ನಮ್ಮೆಗೆ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ನೇತೃತ್ವದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಮೂರು ದಿನಗಳ ಕೊಡವ ನಮ್ಮೆಯಲ್ಲಿ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕೆಗಳನ್ನು ನಡೆಸುವz Àರೊಂದಿಗೆ ‘ಹುತಾತ್ಮ ವೀರರ ಸ್ಮಾರಕ’ ಉದ್ಘಾಟನೆಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಲು ವಿವಿಧ ಉಪ ಸಮಿತಿಗಳನ್ನು ರಚಿಸಿಕೊಳ್ಳಲಾಗಿದೆ. ಕೊಡವ ನಮ್ಮೆಯ ಪ್ರಯುಕ್ತ ನ. 6 ರಂದು ರಾಜ್ಯಮಟ್ಟದ ಅಂತರ ಕೊಡವ ಸಮಾಜಗಳ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಾಂಸ್ಕøತಿಕ ಸಮಿತಿಯ ಸಂಚಾಲಕರಾದ ಕಾಳಿಮಾಡ ಮೋಟಯ್ಯ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ನ. 6 ರಂದು ಬೆಳಗ್ಗೆ ರಾಜ್ಯ 9.30 ಗಂಟೆಗೆ ರಾಜ್ಯ ಮಟ್ಟದ ಕೊಡವ ಸಾಂಸ್ಕøತಿಕ ಸ್ಪರ್ಧೆಗಳು ಆರಂಭಗೊಳ್ಳಲಿದೆ. ಇದರಲ್ಲಿ ಕೊಡವ ಸಮಾಜದ ಒಕ್ಕೂಟದಲ್ಲಿ ನೋಂದಣಿಯಾಗಿರುವ ಜಿಲ್ಲೆ ಹಾಗೂ ಹೊರ ಜಿಲ್ಲೆಯ 34 ಕೊಡವ ಸಮಾಜಗಳಿಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಆಹ್ವಾನವನ್ನು ನೀಡಲಾಗಿದೆ. ಪ್ರತಿ ಸ್ಪರ್ಧೆಗೆ ಕೊಡವ ಸಮಾಜಗಳ ಒಂದೊಂದು ತಂಡಗಳು ಪಾಲ್ಗೊಳ್ಳಬಹುದಾಗಿದ್ದು, ತಾ 15 ರೊಳಗಾಗಿ ಆಸಕ್ತ ಕೊಡವ ಸಮಾಜಗಳು ಸ್ಪರ್ಧೆಗೆ ಹೆಸರನ್ನು ‘ಕಾಳಿಮಾಡ ಎಂ. ಮೋಟಯ್ಯ, ಸಾಂಸ್ಕøತಿಕ ಸಮಿತಿಯ ಮುಖ್ಯ ಸಂಚಾಲಕರು, ಕೊಡವ ಸಮಾಜ, ಪೆÇನ್ನಂಪೇಟೆ’ ಈ ವಿಳಾಸಕ್ಕೆ ಕಳುಹಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೋಲಾಟ್, ಬೊಳಕಾಟ್, ಕತ್ತಿಯಾಟ್, ಉಮ್ಮತ್ತಾಟ್, ಪರಿಯಕಳಿ, ಸಮ್ಮಂಧ ಅಡುಕುವ, ಬಾಳೋಪಾಟ್, ತಾಲಿಪಾಟ್, ಕಪ್ಪೆಯಾಟ್ ಸ್ಪರ್ಧೆಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9845308228ನ್ನು ಸಂಪರ್ಕಿಸುವಂತೆ ತಿಳಿಸಿದರು.

ಗೋಷ್ಠಿಯಲ್ಲಿ ಸಾಂಸ್ಕøತಿಕ ಸಮಿತಿಯ ಸಹ ಸಂಚಾಲಕ ಹಂಚೆಟ್ಟಿರ ಮನು ಮುದ್ದಪ್ಪ ಉಪಸ್ಥಿತರಿದ್ದರು.