ಚೆಟ್ಟಳ್ಳಿ, ಜೂ. 18: ಬಾಳೆಗಿಡದಲ್ಲಿ ಹಲವೆಡೆ ವಿಚಿತ್ರ ಬಾಳೆಗೊನೆಗಳು ಮೂಡಿ ಆಶ್ಚರ್ಯ ವೆಸಗಿರುವ ಬಗ್ಗೆ ಕೇಳಿದ್ದೇವೆ. ಹಾಗೆಯೇ ಮಡಿಕೇರಿ ಹತ್ತಿರದ ಚೆಟ್ಟಳ್ಳಿಯ ಪುತ್ತರಿರ ಲತಾ ಜೋಯಪ್ಪ ಅವರು ಬೆಳೆದ ಪಚ್ಚೆಬಾಳೆ ಗಿಡದ ನಡುವಿನಲ್ಲಿ ವಿಶಿಷ್ಟ ರೀತಿಯ ಬಾಳೆಗೊನೆ ಬೆಳೆಯುತ್ತಿದೆ.

ಲತಾ ಜೋಯಪ್ಪ ಅವರು ತಮ್ಮ ಮನೆಯ ಬದಿಯಿರುವ ಜಾಗದಲ್ಲಿ ಪಚ್ಚೆ ಬಾಳೆಗಿಡ ಸಸಿಯನ್ನು ನೆಟ್ಟು ಪೋಷಿಸುತ್ತಿದ್ದರಂತೆ ಅದು ಹುಲುಸಾಗಿ ಬೆಳೆಯತೊಡಗಿ ಇನ್ನೇನು ಕಾಯಿಬಿಡುವ ಸಮಯದಲ್ಲಿ ಬಾಳೆಗಿಡದ ನಡುವಿನಲ್ಲಿ ಉಬ್ಬಿದಂತೆ ಕಾಣತೊಡಗಿ ಅದು ಒಡೆದು ಸಣ್ಣದಾದ ಬಾಳೆಗೊನೆ ನಡುವಿಂದಲೇ ಬೆಳೆಯತೊಡಗಿದೆ. ನೋಡಲು ಹಂಸ ಹಕ್ಕಿಯ ರೂಪದಂತೆ ಕಾಣತೊಡಗಿ ವಿಶೇಷ ರೀತಿಯಿಂದ ಕೂಡಿದೆ. -ಕರುಣ್ ಕಾಳಯ್ಯ