ಮಡಿಕೇರಿ, ಜೂ. 28: ಪ್ರಸ್ತುತ ಬಿ.ಎಸ್.ಎನ್.ಎಲ್. ತನ್ನ 3ಜಿ ಹೆಚ್ + ನೆಟ್‍ವರ್ಕ್‍ಗಳನ್ನು ಕೊಡಗು ಜಿಲ್ಲೆಯಲ್ಲಿ ವಿಸ್ತರಿಸುತ್ತಿದ್ದು, ಇದರಿಂದ ಹೈಸ್ಪೀಡ್ ಇಂಟರ್‍ನೆಟ್ ದೊರೆ ಯಲಿದೆ. ಗ್ರಾಹಕರು ಈ ಸೇವೆಯನ್ನು ಪಡೆಯುವ ನಿಟ್ಟಿನಲ್ಲಿ ಜುಲೈ 1 ರಂದು ಮಡಿಕೇರಿಯ ಬಿ.ಎಸ್.ಎನ್.ಎಲ್. ಗ್ರಾಹಕ ಕೇಂದ್ರದ ಎದುರು ಉಚಿತ ಸಿಮ್ ಮೇಳವನ್ನು ಆಯೋಜಿಸಲಾಗಿದೆ.

ಆಸಕ್ತ ಗ್ರಾಹಕರು ಇತ್ತೀಚಿನ 1 ಪಾಸ್ ಪೊರ್ಟ್ ಸೈಜ್ ಫೋಟೋ, ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಜೆರಾಕ್ಸ್ ಪ್ರತಿಯನ್ನು ಫುಲ್ ಪೇಜಿನಲ್ಲಿ ತಂದು ಉಚಿತ ಸಿಮಾ ಕಾರ್ಡ್ ಪಡೆಯಬಹುದು. ಅಲ್ಲದೇ ಇತರ ಕಂಪೆನಿಯ ಮೊಬೈಲ್ ನಂಬರನ್ನು ಬಿ.ಎಸ್.ಎನ್.ಎಲ್. ಸೇವೆಗೆ ಬದಲಾಯಿಸಿ ಕೊಡಲಾಗುವದು ಎಂದು ದೂರ ಸಂಪರ್ಕ ಜಿಲ್ಲಾ ಪ್ರಬಂಧಕರಾದ ಶ್ಯಾಮಲಾ ಭಟ್ ತಿಳಿಸಿದ್ದಾರೆ.