ನಾಪೆÇೀಕ್ಲು, ಅ. 15: ಭಾರತ ಮೃತ್ಯುಂಜಯ ರಾಷ್ಟ್ರ. ಇದಕ್ಕೆ ಎಂದಿಗೂ ಸಾವಿಲ್ಲ. ಭಾರತದ ಹುಟ್ಟಿನ ಬಗ್ಗೆ ಅಧ್ಯಯನ ಮಾಡಿದ್ದ ಇತಿಹಾಸಕಾರರು ಕೂಡ ಸೋತಿದ್ದಾರೆ ಎಂದು ಯುವ ಬ್ರಿಗೇಡ್‍ನ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಶ್ರೀ ಕೃಷ್ಣ ಉಪಾಧ್ಯಾಯ ಅಭಿಪ್ರಾಯಪಟ್ಟರು.

ನಾಪೆÇೀಕ್ಲು ಭಜರಂಗದಳದ ವತಿಯಿಂದ ಹಳೇ ತಾಲೂಕು ಶ್ರೀ ಭಗವತಿ ದೇವಳದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿಗೆ ವಿದ್ಯಾದಾನ ಮಾಡಿದ ಖ್ಯಾತಿ ನಮ್ಮ ದೇಶಕ್ಕಿದೆ. ಮಾನವೀಯ ಮೌಲ್ಯಗಳೊಂದಿಗೆ ಮನುಷ್ಯ ಜೀವನದ ಸಾರ್ಥಕತೆಯನ್ನು ಅರಿತುಕೊಳ್ಳಬೇಕು ಎಂದರು. ಇಡೀ ಜಗತ್ತು ಭಾರತದ ಸಂಸ್ಕøತಿಯ ಬಗ್ಗೆ ನಂಬಿಕೆ, ಭರವಸೆಯನ್ನಿರಿಸಿಕೊಂಡಿದೆ ಎಂದ ಅವರು ಅಮೇರಿಕಾದ ‘ನಾಸ’ದಲ್ಲಿ ಶೇ. 30 ಭಾರತೀಯ ಇಂಜಿನಿಯರ್‍ಗಳು ಇದ್ದಾರೆ. ಅಲ್ಲಿ ಶೇ. 30 ವೈದ್ಯರು, ಶೇ. 13 ವಿಜ್ಞಾನಿಗಳಿದ್ದಾರೆ ಎಂದು ಮಾಹಿತಿ ನೀಡಿದರು.

ಭಾರತದ ಯುವಕರು ಜಗತ್ತಿನ ಮಾನವ ಸಂಪನ್ಮೂಲಗಳಾಗಿ ತಯಾರಾಗುತ್ತಿದ್ದಾರೆ ಎಂದು ಹೇಳಿದ ಅವರು ಪಾಕಿಸ್ತಾನದ ಯುವಕರು ವಿದ್ಯೆಯಿಂದ ವಿಮುಖರಾಗಿ ಭಯೋತ್ಪಾದಕರಾಗಿ ಜಗತ್ತಿಗೆ ಸಂಕಷ್ಟ ಉಂಟು ಮಾಡಲು ತಯಾರಾಗು ತ್ತಿರುವದು ದುರದೃಷ್ಟಕರ ಎಂದರು.

ವಾಲ್ಮೀಕಿ ಜಯಂತಿ ಬಗ್ಗೆ ಮಾತನಾಡಿದ ಅವರು ದೇಶದ ಋಷಿಗಳು ಸರ್ವ ಶ್ರೇಷ್ಟರಾಗಿದ್ದಾರೆ. ತಪಸ್ಸು ಎಂದರೆ ಕಷ್ಟ ಪಡುವದು ಎಂದರ್ಥ. ಇಷ್ಟಪಟ್ಟು ಕಷ್ಟವನ್ನು ಸ್ವೀಕರಿಸಿದವರು ನಮ್ಮ ಋಷಿಗಳು. ಇವರು ದೇಶದ ಜನರ ಒಳಿತನ್ನು ಬಯಸಿದವರಾಗಿದ್ದಾರೆ. ಋಷಿಗಳು ಭಗವತ್ಸಾಕ್ಷಾತ್ಕಾರದೊಂದಿಗೆ ತಪಸ್ಸಿನಿಂದ ದೊರೆತ ಪುಣ್ಯವನ್ನು ಇಡೀ ಜಗತ್ತಿಗೆ ನೀಡಿದ್ದಾರೆ. ಋಷಿಗಳು ಜಗತ್ತಿಗೋಸ್ಕರ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ್ದಾರೆ ಎಂದರು. ರಾಮಾಯಣ ಎನ್ನುವ ಮರದ ಕವಿತೆಗಳಲ್ಲಿ ವಾಲ್ಮೀಕಿ ಎನ್ನುವ ಕೋಗಿಲೆ ‘ರಾಮ ರಾಮ’ ಎಂದು ಕೂಗುತ್ತಿದೆ. ರಾಮ ನಾಮವನ್ನು ಹೃದಯದಲ್ಲಿ ಸಾಕ್ಷಾತ್ಕಾರ ಮಾಡಿಕೊಂಡ ವಾಲ್ಮೀಕಿ ಮಹರ್ಷಿ ಸರ್ವ ಶ್ರೇಷ್ಟ ಎಂಬ ಪದವಿ ಗಳಿಸಿದ್ದಾರೆ ಎಂದು ಹೇಳಿದರು.

ಮಾನವ ಸಂಸ್ಕಾರದಲ್ಲಿ ಮಾತ್ರ ಉನ್ನತ ಸ್ಥಾನ, ಗೌರವ ಪಡೆಯಲು ಸಾಧ್ಯ. ಜಾತಿ, ಹಣ, ಅಂತಸ್ತು, ಸಂಪತ್ತು, ಅಧಿಕಾರದಿಂದ ಮಾನವ ಗೌರವ ಪಡೆಯಲು ಸಾಧ್ಯವಿಲ್ಲ. ಅಧ್ಯಾತ್ಮದ ಅಲೆಗಳಿಂದಾಗಿ ಗೌರವ ಲಭಿಸುತ್ತದೆ. ವಾಲ್ಮೀಕಿಯನ್ನು ಮರೆತರೆ ರಾಮನನ್ನು ಮರೆತ ಹಾಗೆ ಎಂದರು.

ಭಾರತವನ್ನು ಪ್ರೀತಿಸುವ ಶಿಕ್ಷಣ ಬೇಕು. ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ತನ್ನ ಮಹತ್ವವನ್ನು ಕಳೆದು ಕೊಳ್ಳುವ ಭೀತಿ ಉಂಟಾಗಿದೆ. ಉತ್ತಮ ಶಿಕ್ಷಣವನ್ನು ನೀಡಿದ ಮಹರ್ಷಿ ವಾಲ್ಮೀಕಿಯನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು. ಈ ಕಾರ್ಯಕ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ವರ್ಷ ಪೂರ್ತಿ ನಮ್ಮ ಮಹಾನ್ ಗ್ರಂಥವಾದ ‘ರಾಮಾಯಣ’ವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರನ್ನು ನಮ್ಮ ಹೃದಯ ಕಮಲದಲ್ಲಿಟ್ಟು ಪೂಜಿಸುವ ಕಾರ್ಯವಾಗಬೇಕಾಗಿದೆ ಎಂದರು. ರಾಮಾಯಣದ ಕೃತಿಗಳು ಕಾರ್ಟೂನ್ ರೂಪದಲ್ಲಿ ಈಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದ್ದು, ಇದನ್ನು ಪುಟ್ಟ ಮಕ್ಕಳಿಗೆ ಪರಿಚಯಿಸಬೇಕು. ಹಾಗೆಯೇ ಎಳೆಯರ ರಾಮಾಯಣ ಹಾಗೂ ಮಕ್ಕಳ ಕಾಲೇಜು ಹಂತದಲ್ಲಿ ಸಂಪೂರ್ಣ ರಾಮಾಯಣವನ್ನು ಮಕ್ಕಳಿಗೆ ಪರಿಚರಿಸುವ ಜವಾಬ್ದಾರಿ ಪೆÇೀಷಕರ ಮೇಲಿದೆ ಎಂದು ಕಿವಿಮಾತು ಹೇಳಿದರು. ಕಾರ್ಯ ಕ್ರಮದಲ್ಲಿ ಜಿಲ್ಲಾ ಭಜರಂಗದಳದ ಅಧ್ಯಕ್ಷ ಅಜಿತ್ ಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ನಾಪೆÇೀಕ್ಲು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕುಲ್ಲೇಟಿರ ಸಾಬು ನಾಣಯ್ಯ ವಹಿಸಿದ್ದರು. ಈ ಸಂದರ್ಭ ನಾಪೆÇೀಕ್ಲು ಭಜರಂಗದಳದ ಅಧ್ಯಕ್ಷ ಬಿ.ಎಂ. ಪ್ರತೀಪ್, ಹರೀಶ್ ಮತ್ತಿತರರು ಹಾಜರಿದ್ದರು.