*ಗೋಣಿಕೊಪ್ಪಲು, ಸೆ. 9: ಶಿಕ್ಷಕರು ಬೋಧನೆಯೊಂದಿಗೆ ಇಲಾಖೆಯ ಇತರ ಕೆಲಸಗಳನ್ನು ಮಾಡಬೇಕಾಗಿರುವದರಿಂದ ಬಹಳ ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಕೊಂಡಿದ್ದಾರೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯಿತಿ ಮತ್ತು ಕಂದಾಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ. ಎಸ್. ರಾಧಾಕೃಷ್ಣ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಮಕ್ಕಳ ಅನುಪಾತಕ್ಕೆ ಶಿಕ್ಷಕರು ಕಾರ್ಯ ನಿರ್ವಹಿಸುವದು ತುಂಬಾ ಕಷ್ಟಕರವಾಗಿದೆ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುತ್ತಿರುವದರ ಫಲವಾಗಿ ಪ್ರತಿಭಾ ಕಾರಂಜಿ, ಕಲೋತ್ಸವ, ವಿಜ್ಞಾನ ವಸ್ತು ಪ್ರದರ್ಶನ ಇವುಗಳಲ್ಲಿ ಮಕ್ಕಳು ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸು ವಂತಾಗಿದೆ. ಇಂತಹ ಕೆಲಸ ಶ್ಲಾಘನೀಯ ಎಂದು ಹೇಳಿದರು.

ಪ್ರಧಾನ ಭಾಷಣಕಾರ ಬಿ.ಎಸ್. ಪ್ರಭು ಮಾತನಾಡಿ, ಶಿಕ್ಷಕರು ಪ್ರತಿನಿತ್ಯ ಬೋಧನೆಯಲ್ಲಿ ತೊಡಗಿರುತ್ತಿದ್ದು, ಶಿಕ್ಷಕರು ವರ್ಷದಲ್ಲಿ ಒಂದು ದಿನವಾದರೂ ಒಂದೆಡೆ ಸೇರುವಂತಾಗಿರುವದು ಸಂತೋಷದ ಸಂಗತಿ. ರಾಧಾಕೃಷ್ಣ ಅವರ ಮಾದರಿಯಲ್ಲಿಯೇ ಎಲ್ಲ ಶಿಕ್ಷಕರು ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಳೆದ ಮೂರು ವರ್ಷಗಳಿಂದ ಸಿಆರ್‍ಪಿಯಾಗಿ ಕಾರ್ಯ ನಿರ್ವಹಿಸಿದ ಲೀಲಾವತಿ, ಶಿವರಾಂ, ಕಾಂಡೆರ ಕುಶಾಲಪ್ಪ, ಅಶ್ರಫ್, ಮಾದಪ್ಪ, ರುಕ್ಮಿಣಿ, ಲಲಿತ ಅವÀನ್ನು ಸನ್ಮಾನಿಸಲಾಯಿತು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧಕ್ಷ ನೆಲ್ಲಿರ ಚಲನ್ ಕುಮಾರ್, ಸದಸ್ಯರಾದ ಮೂಕಳೆರ ಆಶಾ ಪೂಣಚ್ಚ, ಶೋಭಾ, ಅಪ್ಪಂಡೇರಂಡ ಭವ್ಯ, ಪಿ.ಆರ್. ಪಂಕಜಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುನಿತಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಶಾಜಿ ಅಚ್ಚುತನ್, ತಾಲೂಕು ಪಂಚಾಯಿತಿ ಇಒ ಕೆ.ಆರ್. ಫಡ್ನೇಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು, ಬಯವಂಡ ಉತ್ತಪ್ಪ ಇದ್ದರು.

- ಎನ್.ಎನ್. ದಿನೇಶ್