ನಾಪೆÉÇೀಕ್ಲು, ನ. 26: ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವವರನ್ನು ಫೋಕ್ಸೋ ಕಾಯ್ದೆಯಡಿ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ ಎಂದು ನ್ಯಾಯವಾದಿ, ಜಿಲ್ಲಾ ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಎಚ್ಚರಿಸಿದ್ದಾರೆ.

ಎಮ್ಮೆಮಾಡು ಸರಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಸೇವಾ ಪ್ರಾಧಿಕಾರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಫೋಕ್ಸೋ ಕಾಯ್ದೆ ಬಗ್ಗೆ ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮತನಾಡಿದರು. ಮಕ್ಕಳ ಮೇಲಿನ ದೌರ್ಜನ್ಯ ಸಮಾಜಕ್ಕೆ ಅಂಟಿಕೊಂಡಿರುವ ಬಹುದೊಡ್ಡ ಕಾಯಿಲೆ. ಇದನ್ನು ನಿರ್ನಾಮ ಮಾಡಲು ಇಡೀ ಸಮಾಜವೇ ಕಟಿ ಬದ್ಧವಾಗಿ ನಿಲ್ಲುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ದೇವರ ಸಮಾನ ಎಂದು ನೆನಪಿಸಿ ಕೊಂಡರೆ ಯಾರೂ ಇಂತಹ ಹೀನ ಕೃತ್ಯಕ್ಕೆ ಕೈ ಹಾಕುವದಿಲ್ಲ. ಹಾಗೊಂದು ವೇಳೆ ಮೃಗೀಯ ವ್ಯಕ್ತಿಗಳಿಂದ ದೌರ್ಜನ್ಯ ನಡೆದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವದು. ಮಕ್ಕಳನ್ನು ಕಾರ್ಮಿಕರಾಗಿ ದುಡಿಸುತ್ತಿರುವದೂ ಕೂಡ ಮಹಾ ಅಪರಾಧ ಎಂದರು.

ಅಥಿತಿಯಾಗಿ ಆಗಮಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಸಣ್ಣುವಂಡ ಅನಿತ ಕಾವೇರಪ್ಪ ಮಾತನಾಡಿ, ಫೋಕ್ಸೊ ಕಾಯ್ದೆಗೆ ವ್ಯಕ್ತಿ ಒಳಪಟ್ಟರೆ ಆತನ ಭವಿಷ್ಯದ ಜೀವನ ನಶಿಸಿ ಹೋಗುತ್ತದೆ. ಆದುದರಿಂದ ಅಪರಾಧಿ ಕೃತ್ಯದ ಬಗ್ಗೆ ಆಲೋಚಿಸದೇ ಸಮಾಜವಾಹಿನಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರಲ್ಲದೆ, ಫೋಕ್ಸೋ ಕಾಯ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕ ಯತ್ನಟ್ಟಿ, ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಪಿ.ಆರ್. ಅಯ್ಯಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷÀ ಅಬೂಬಕ್ಕರ್, ಸದಸ್ಯರಾದ ಎಂ.ಎ.ಮೋಹಿದ್, ಪಿ.ಎಂ.ಅಬ್ದುಲ್ಲಾ, ಸವಿತ, ಸಿ.ಹೆಚ್.ಮೋಹಿದ್, ನಜೀರ್, ಸಂಯೋಜಕ ಶಿರಾಜ್ ಅಹಮ್ಮದ್, ಆಪ್ತ ಸಮಾಲೋಚಕ ನವೀನ್ ಕುಮಾರ್, ಕಾರ್ಯಕರ್ತರಾದ ಶೋಭ ಲಕ್ಷ್ಮಿ, ಕುಮಾರಿ, ದೀಪ, ಕುಸುಮ, ಪ್ರಸಾದ್ ಕುಮಾರ್, ಪ್ರವೀಣ್ ಕುಮಾರ್ ಮತ್ತಿತರರು ಇದ್ದರು.