ಮಡಿಕೇರಿ, ಸೆ. 26: ಮಡಿಕೇರಿ ದಸರಾ ಜನೋತ್ಸವದ ಸಾಂಸ್ಕøತಿಕ ಸಮಿತಿ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಅ. 3 ರಿಂದ 11 ರವರೆಗೆ ನಗರದ ಗಾಂಧಿ ಮೈದಾನದ ವರ್ಣರಂಜಿತ ಕಲಾಸಂಭ್ರಮ ವೇದಿಕೆಯಲ್ಲಿ ನಡೆಯಲಿವೆ ಎಂದು ಸಮಿತಿಯ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಈ ಬಾರಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಲಕ್ಷ್ಮೀ ಪ್ರಸಾದ್ ಪೆರ್ಲ, ಸಂಗೀತ ಪ್ರಸನ್ನ, ಸವಿತಾ ರಾಕೇಶ್, ವೀಣಾಕ್ಷಿ, ಶ್ರೀಧರ ಹೂವಲ್ಲಿ, ಮಣಜೂರು ಮಂಜುನಾಥ್ ನೇತೃತ್ವದ ಸಮಿತಿಯು ಆಯ್ಕೆ ಮಾಡಿದೆ ಎಂದು ಹೇಳಿದರು.

ಒಂಭತ್ತು ದಿನಗಳ ಕಾರ್ಯ ಕ್ರಮಕ್ಕಾಗಿ ಸುಮಾರು 46 ತಂಡಗಳನ್ನು ಆಯ್ಕೆ ಮಾಡಲಾಗಿದ್ದು, 7 ಲಕ್ಷ ರೂ. ಗಳನ್ನು ಖರ್ಚು ಮಾಡಲಾಗುತ್ತಿದೆ. ಸುಮಾರು 10 ಲಕ್ಷ ರೂ.ಗಳ ಅಗತ್ಯ ವಿತ್ತಾದರೂ ಇಂದಿನ ಪರಿಸ್ಥಿತಿಗನು ಗುಣವಾಗಿ ಇತಿ-ಮಿತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಅನಿಲ್ ಎಚ್.ಟಿ. ಹೇಳಿದರು. ತಾ. 27 ರಂದು ಮುಖ್ಯಮಂತ್ರಿಗಳ ಬಳಿಗೆ ದಸರಾ ಸಮಿತಿಯ ನಿಯೋಗ ತೆರಳುತ್ತಿದ್ದು, ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭ ಸಾಂಸ್ಕøತಿಕ ಕಾರ್ಯಕ್ರಮಗಳ ಕರೆಯೋಲೆಯನ್ನು ಬಿಡುಗಡೆ ಮಾಡಿದ ಅವರು 9 ದಿನಗಳ ಕಾಲ ನಡೆಯುವ ವರ್ಣರಂಜಿತ ಸಾಂಸ್ಕøತಿಕ ವೈವಿಧ್ಯದ ಕುರಿತು ಮಾಹಿತಿ ನೀಡಿದರು.

ಅ. 3 ರಂದು ಮಡಿಕೇರಿ ಗ್ರೀನ್ ಮೌಂಟೇನ್ ಕಾಲೇಜು ತಂಡದÀ ನೃತ್ಯ ವೈವಿಧ್ಯ, ವೀರಾಜಪೇಟೆ ನಾಟ್ಯ ಮಯೂರಿ ನೃತ್ಯ ಶಾಲಾ ತಂಡದಿಂದ ನಡೆಯುವ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಆಕರ್ಷಿಸಲಿವೆ. ಮಡಿಕೇರಿಯ ವಿಕಾಸ್ ವಿಶೇಷ ಚೇತನ ಸಂಸ್ಥೆಯಿಂದ ಮನೋರಂಜನಾ ಕಾರ್ಯಕ್ರಮಗಳು, ಕುಶಾಲನಗರದ ಶಾರದಾ ಕಲಾ ಕೇಂದ್ರದಿಂದ ಕರಗಾಟ, ಮಡಿಕೇರಿಯ ಗೌಡ ಮಹಿಳಾ ಒಕ್ಕೂಟದಿಂದ ನೃತ್ಯ ಪ್ರದರ್ಶನ, ಬೆಂಗಳೂರಿನ ಬೈರವಿ ಡ್ಯಾನ್ಸ್ ಗ್ರೂಪ್‍ನಿಂದ ಆಕರ್ಷಕ ನೃತ್ಯಗಳು ಮೊದಲ ದಿನ ಗಮನ ಸೆಳೆಯಲಿವೆ.

ಅ. 4 ರಂದು ವೀರಾಜಪೇಟೆ ಜಗನ್ಮೋಹನ ನಾಟ್ಯಾಲಯ ತಂಡದಿಂದ ಮೋಹಿನಿ ಆಟಂ, ಕೂಚುಪುಡಿ ನೃತ್ಯ, ಮಂಗಳೂರಿನ ಹೆಜ್ಜೆನಾದ ತಂಡದ ಯುವ ನೃತ್ಯಪಟು ಜ್ಞಾನ ಐತಾಳ್ ಮತ್ತು ತಂಡದಿಂದ ಸಂಗೀತ, ನೃತ್ಯ ವೈವಿಧ್ಯ, ಮಡಿಕೇರಿ ನೆಲ್ಲಕ್ಕಿ ಯುವತಿ ಮಂಡಳಿ ತಂಡದಿಂದ ಅರೆಭಾಷೆ ಸಂಸ್ಕøತಿಯ ವೈವಿಧ್ಯ, ಬಿರುನಾಣಿ ಶ್ರೀನಿವಾಸ್ ಮತ್ತು ತಂಡದಿಂದ ಗೋಲ್ಡನ್ ಸಾಂಗ್ಸ್ ಗಾನ ಸಂಭ್ರಮ ನಡೆಯಲಿದೆ.

ಅ. 5 ರಂದು ಮೂರು ಮುತ್ತು ಖ್ಯಾತಿಯ ಕುಂದಾಪುರದ ಸತೀಶ್ ಪೈ ಮತ್ತು ತಂಡದಿಂದ ಹಾಸ್ಯ ಲಹರಿ, ಕುಶಾಲನಗರದ ಕಾವೇರಿ ಕಲಾ ಪರಿಷತ್‍ನಿಂದ ನೃತ್ಯ ವೈವಿಧ್ಯ, ಕುಶಾಲನಗರದ ಟೀಮ್ ಆ್ಯಟಿಟ್ಯೂಡ್ ತಂಡದಿಂದ ನೃತ್ಯ, ಕಡಗದಾಳುವಿನ ಬೊಟ್ಲಪ್ಪ ಯುವಕ ಸಂಘದಿಂದ ವರ್ಣ ರಂಜಿತ ನೃತ್ಯ ವೈವಿಧ್ಯ ಕಲಾಭಿಮಾನಿಗಳ ಗಮನ ಸೆಳೆಯಲಿದೆ.

ಅ. 6 ರಂದು ಮಡಿಕೇರಿಯ ಕೂರ್ಗ್ ಟೆಕ್ವಾಂಡೋ ಕೇಂದ್ರದಿಂದ ಟೆಕ್ವಾಂಡೋ ಸಾಹಸ ಡ್ಯಾನ್ಸ್, ಮಡಿಕೇರಿಯ ರಿ ಬಾರ್ನ್ ಡ್ಯಾನ್ಸ್ ಸ್ಕೂಲ್ ತಂಡದಿಂದ ವೈವಿಧ್ಯಮಯ ನೃತ್ಯ, ಮಡಿಕೇರಿಯ ಸ್ನೇಹಸಂಗಮ ತಂಡದಿಂದ ಭಾವಸಂಗಮ, ಮಡಿಕೇರಿಯ ಗೋವಿಂದರಾಜು, ಕುಶಾಲನಗರದ ಭರಮಣ್ಣ ಬೆಟ್ಟಗೇರಿ ತಂಡದಿಂದ ಗಾನ ಲಹರಿ, ಕುಶಾಲನಗರದ ಕಾವೇರಿ ಆರ್ಟ್ ಸ್ಕೂಲ್ ತಂಡದಿಂದ ನೃತ್ಯ ವೈವಿಧ್ಯ, ಮಂಗಳೂರಿನ ಟೀಮ್ ಸುಮಿತ್ ತಂಡದಿಂದ ಡ್ಯಾನ್ಸ್ ಧಮಾಕ, ಕುಶಾಲನಗರದ ಮಂಜು ಭಾರ್ಗವಿ ತಂಡದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಹಿಳಾ ದಸರಾ ಆಕರ್ಷಣೆ

ಅ. 7 ರಂದು ಮಹಿಳಾ ದಸರಾ ನಡೆಯಲಿದ್ದು, ಮಹಿಳಾ ಸಮೂಹದಿಂದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಮಹಿಳಾ ಸಂಘಗಳÀ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ, ಸಿರಿಧಾನ್ಯ ಮೇಳ, ಗ್ರಾಮೀಣ ಖಾದ್ಯಗಳ ವೈವಿಧ್ಯ ಬಿಂಬಿಸುವ ಸ್ಪರ್ಧೆ ಮತ್ತು ಪ್ರದರ್ಶನ, ಮೆಹಂದಿ ಹಾಕುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆ, ಭಾರತೀಯ ಸಾಂಪ್ರದಾಯಿಕ ಉಡುಗೆ-ತೊಡುಗೆ ಸ್ಪರ್ಧೆ, ಏಕಪಾತ್ರಾಭಿನಯ ಸ್ಪರ್ಧೆಗಳಲ್ಲಿ ಮಹಿಳೆಯರು ಮಿಂಚಲಿದ್ದಾರೆ.

ಸಂಜೆ 6 ಗಂಟೆಯಿಂದ ಮಹಿಳೆಯರಿಂದಲೇ ಸಾಂಸ್ಕøತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ. ಮಡಿಕೇರಿಯ ನಾಯರ್ಸ್ ಸೊಸೈಟಿ ವತಿಯಿಂದ ತಿರುವಾದಿರ ನೃತ್ಯ, ಮಡಿಕೇರಿಯ ಸ್ಪಂದನ ಮಹಿಳಾ ತಂಡದಿಂದ ನೃತ್ಯ ಸಂಭ್ರಮ, ಮಾಲ್ದಾರೆಯ ಶ್ರೀ ಮುತ್ತಪ್ಪನ್ ಚಂಡೆಮೇಳದ ಮಹಿಳಾ ತಂಡದಿಂದ ಸಿಂಗಾರಿ ಮೇಳ, ಮೈಸೂರಿನ ತಾಂಡವಂ ತಂಡದ ಮಹಿಳಾ ಕಲಾವಿದೆಯರಿಂದ ವ್ಯಾಘ್ರ ನೃತ್ಯ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ವಿದ್ಯಾರ್ಥಿನಿಯರಿಂದ ಡೇರ್ ಟು ಡ್ಯಾನ್ಸ್ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ನಾಡಿನ ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಅವರಿಂದ ಭಾವ ಲಹರಿ ಕಾರ್ಯಕ್ರಮ ಮಹಿಳಾ ದಸರಾದ ವಿಶೇಷವಾಗಿದೆ.

ಅ. 8 ರಂದು ಯುವ ದಸರಾ ನಡೆಯಲಿದ್ದು, ಯುವ ಸಮೂಹವನ್ನು ಆಕರ್ಷಿಸಲಿದೆ.

ಮಕ್ಕಳ ದಸರಾ ಸಂಭ್ರಮ

ಅ. 9 ರಂದು ಮಕ್ಕಳ ದಸರಾ ನಡೆಯಲಿದ್ದು, ಗಾಂಧಿ ಮೈದಾನದಲ್ಲಿ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲಿದೆ. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಕ್ಕಳ ಸಂತೆ, ಮಕ್ಕಳ ಮಂಟಪ, ಛದ್ಮವೇಷ ಸ್ಪರ್ಧೆ, ಕ್ಲೇ ಮಾಡೆಲಿಂಗ್, ಸೈನ್ಸ್ ಮಾಡೆಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಕಾರ್ಯಕ್ರಮವನ್ನು ನಿರ್ವಹಿಸಲಿದೆ.

ಜನಪದ ಕ್ರೀಡೆಗಳಾದ ಚನ್ನಮಣೆ, ಕುಂಟೆಬಿಲ್ಲೆ, ಬುಗುರಿ, ಗೋಲಿಯಾಟ, ಕಲ್ಲಾಟ, ಚೌಕಬಾರ, ಬಳೆಯಾಟದ ಸ್ಪರ್ಧೆಗಳು ನಡೆಯಲಿದ್ದು, ಕೊಡಗು ಜಿಲ್ಲಾ ಜನಪದ ಪರಿಷತ್ ಈ ಕಾರ್ಯಕ್ರಮವನ್ನು ನಿರ್ವಹಿಸಲಿದೆ.

ಸಂಜೆ 6 ಗಂಟೆಯಿಂದ ಕಲಾಸಂಭ್ರಮ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಮಂಗಳೂರಿನ ಪುಟಾಣಿ ಕಲಾವಿದೆ ಪೂರ್ವಿ ರಾವ್ ಪ್ರಸ್ತುತ ಪಡಿಸುವ ಟಾಲೆಂಟ್ ಶೋ, ಸುಂಟಿಕೊಪ್ಪದ ಸ್ವಸ್ಥ ಶಾಲೆಯ ವಿಶೇಷ ಮಕ್ಕಳ ತಂಡದಿಂದ ಜನಪದ ಸಂಭ್ರಮ, ಅರೆಭಾಷೆ ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಲವಿನ್ ಮತ್ತು ರಕ್ಷಾ ಅವರಿಂದ ಯಕ್ಷ ಪ್ರತಿಭಾ ದರ್ಶನ, ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಮತ್ತು ಲಿಟ್ಲ್ ಫ್ಲವರ್ ಶಾಲಾ ಮಕ್ಕಳಿಂದ ವೈವಿಧ್ಯಮಯ ನೃತ್ಯಗಳು, ಕುಶಾಲನಗರದ ಏಂಜಲ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ಪ್ರಸ್ತುತಿ ಲೈಟಿಂಗ್ ಡಾನ್ಸ್ ಮತ್ತಿತರ ಆಕರ್ಷಕ ನೃತ್ಯ ಆಕರ್ಷಿಸಲಿವೆ. ಕುಶಾಲನಗರದ ವಿಶಾಲ್ ಮತ್ತು ತಂಡದಿಂದ ವೀರಗಾಸೆ ನೃತ್ಯ, ಮೈಸೂರಿನ ರಿದಮ್ ಮೇಕರ್ಸ್ ಮಕ್ಕಳ ತಂಡದಿಂದ ರಾಯಲ್ ರಿದಮ್ಸ್, ಮೈಸೂರಿನ ನಿರಂತರ ಕಲಾ ಕೇಂದ್ರದ ಜಗ್ಗು ಜಾದೂಗಾರ್ ತಂಡದಿಂದ ಜಾದು ಪ್ರದರ್ಶನ ಮತ್ತು “ಮಾತನಾಡುವ ಮಂಗ” ಕಾರ್ಯಕ್ರಮ ಮಕ್ಕಳನ್ನು ಆಕರ್ಷಿಸಲಿದೆ.

ಅ. 10 ರಂದು ಆಯುಧಪೂಜಾ ಕಾರ್ಯಕ್ರಮಗಳ ಪ್ರಯುಕ್ತ ಕೊಡಗು ಗೌಡ ಯುವವೇದಿಕೆ ಪ್ರಸ್ತುತಿ ಪಡಿಸುವ ಸಾಂಸ್ಕøತಿಕ ವೈವಿಧ್ಯ ಗಮನ ಸೆಳೆಯಲಿದೆ.

ಮಡಿಕೇರಿಯ ನಿಸರ್ಗ ಡ್ಯಾನ್ಸಿಂಗ್ ಸ್ಟಾರ್ಸ್ ತಂಡದಿಂದ ನೃತ್ಯ ವೈವಿಧ್ಯ, ಮಡಿಕೇರಿಯ ಸೌರಭ ಕಲಾ ಪರಿಷತ್ ವತಿಯಿಂದ ಕೃಷ್ಣಾರ್ಪಣಂ ನೃತ್ಯ ರೂಪಕ, ಮಡಿಕೇರಿಯ ನಾಟ್ಯ ನಿಕೇತನ ತಂಡದಿಂದ ಶ್ರೀ ಕಾವೇರಿ ವೈಭವ ನೃತ್ಯ ರೂಪಕ, ಮಡಿಕೇರಿಯ ಡಿ ಕಂಪೆನಿ ಅರ್ಪಿಸುವ ಡಾನ್ಸ್ .. ಡಾನ್ಸ್..-2016, ಮಡಿಕೇರಿಯ ಅಲ್ಟಿಮೇಟ್ ವೇವ್ಸ್ ಸಮರ್ಪಿಸುವ ನೃತ್ಯ ವೈವಿಧ್ಯ ನಡೆಯಲಿದೆ.

ಅ. 11 ರಂದು ವಿಜಯದಶಮಿಯಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಬೆಕ್ಕೆ ಸೊಡ್ಲೂರಿನ ಮಂದತ್ತವ್ವ ಕೊಡವ ಸಾಂಸ್ಕøತಿಕ ಟ್ರಸ್ಟ್‍ನ ನಿರ್ದೇಶಕಿ ಸುಳ್ಳಿಮಾಡ ಗೌರು ನೇತೃತ್ವದಲ್ಲಿ ಕೊಡವ ಸಾಂಸ್ಕøತಿಕ ಕಾರ್ಯಕ್ರಮ, ಕರ್ನಾಟಕ ಅರೆಭಾಷಾ ಸಾಹಿತ್ಯ, ಸಾಂಸ್ಕøತಿಕ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಅರೆಭಾಷಾ ಸಂಸ್ಕøತಿ ವೈಭವ, ಮಡಿಕೇರಿಯ ತಾಂಡವಂ ಡ್ಯಾನ್ಸ್ ಸ್ಕೂಲ್ ತಂಡದಿಂದ ನೃತ್ಯ ವೈವಿಧ್ಯ, ಕೊಡಗು ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ತಂಡದಿಂದ ಸ್ಕೇಟಿಂಗ್ ಡಾನ್ಸ್, ಉಡುಪಿಯ ಭಾರ್ಗವಿ ತಂಡದಿಂದ ಅನೇಕ ವಿಶೇಷತೆಗಳ ಆಕರ್ಷಕ ಡ್ಯಾನ್ಸ್ ಮೇಳ ಜರುಗಲಿದ್ದು, ಅದೇ ದಿನ ರಾತ್ರಿ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕನ್ನಡನಾಡಿನ ಹಿರಿಮೆ ಬಿಂಬಿಸುವ ಲೇಸರ್ ಮತ್ತು ಬೀಮ್ ಶೋ ಪ್ರದರ್ಶನಗೊಳ್ಳಲಿದೆ.

ಮಕ್ಕಳ ದಸರಾದ ನಿರ್ವಹಣೆಯನ್ನು ರೋಟರಿ ಮಿಸ್ಟಿ ಹಿಲ್ಸ್‍ನ ನಿರ್ದೇಶಕಿ ಕಲ್ಮಾಡಂಡ ಶಶಿಮೊಣ್ಣಪ್ಪ ನಿರ್ವಹಿಸಿದರೆ ಮಹಿಳಾ ದಸರಾ ಸಂದರ್ಭದ ಸಿರಿಧಾನ್ಯ ಮೇಳವನ್ನು ಚೆಪ್ಪುಡಿರ ಸರು ಸತೀಶ್ ನಿರ್ವಹಿಸುತ್ತಿದ್ದಾರೆ. ಮಹಿಳಾ ದಸರಾದ ಒಟ್ಟು ಕಾರ್ಯಕ್ರಮವನ್ನು ನಗರಸಭೆಯ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ಮತ್ತು ನಗರಸಭೆಯ ಮಹಿಳಾ ಸದಸ್ಯರು, ಅಧಿಕಾರಿ ವೃಂದ ನಿರ್ವಹಿಸುತ್ತಿದೆ.

ಜಿಲ್ಲೆಯ ವಿವಿಧ ಮಹಿಳಾ ಸಂಘ-ಸಂಸ್ಥೆಗಳÀ ಪ್ರಮುಖರು ಮಹಿಳಾ ದಸರಾಕ್ಕೆ ಮೆರುಗು ನೀಡಲಿದ್ದಾರೆ. ಜಿಲ್ಲಾಡಳಿತದ ಸಲಹಾ ಸಮಿತಿ ಸದಸ್ಯರಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಸತೀಶ್ ಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪನಿರ್ದೇಶಕ ಎಲ್.ಎನ್. ಕುಳ್ಳಯ್ಯ, ಪೌರಾಯುಕ್ತೆÀ ಬಿ.ಬಿ. ಪುಷ್ಪಾವತಿ ಸಹಕಾರ ನೀಡಿದ್ದಾರೆ ಎಂದು ಸಾಂಸ್ಕøತಿಕ ಸಮಿತಿಯ ಅಧ್ಯಕ್ಷ ಅನಿಲ್ ಎಚ್.ಟಿ. ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಲಕ್ಷ್ಮೀ ಪ್ರಸಾದ್ ಪೆರ್ಲ, ಸಂಗೀತ ಪ್ರಸನ್ನ, ಸವಿತಾ ರಾಕೇಶ್, ವೀಣಾಕ್ಷಿ ಹಾಗೂ ಶ್ರೀಧರ ಹೂವಲ್ಲಿ ಉಪಸ್ಥಿತರಿದ್ದರು.