ಮಡಿಕೇರಿ ಅ.6 : ಮಡಿಕೇರಿ ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಮಹಿಳಾ ದಸರಾ ಅ.7 ಶುಕ್ರವಾರ ನಡೆಯಲಿದ್ದು, ಮಹಿಳೆಯರಿಗೋಸ್ಕರ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮಗಳು, ಮಹಿಳೆಯರಿಂದಲೇ ಸಾಂಸ್ಕøತಿಕ ಕಾರ್ಯ ಕ್ರಮಗಳು ನಡೆಯುತ್ತಿರುವದು ಮಹಿಳಾ ದಸರಾದ ವಿಶೇಷಗಳಾಗಿದೆ.

ಮಹಿಳಾ ದಸರಾ ಸ್ಪರ್ಧೆಗಳನ್ನು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಉದ್ಘಾಟಿಸಲಿದ್ದು, ಸಭಾ ಕಾರ್ಯಕ್ರಮವನ್ನು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಉದ್ಘಾಟಿಸಲಿದ್ದಾರೆ. ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಮಡಿಕೇರಿ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಿಳಾ ದಸರಾ ಅಂಗವಾಗಿ ಸಿರಿಧಾನ್ಯ ಮೇಳ, ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆ, ಮೆಹಂದಿ ಹಾಕುವ ಸ್ಪರ್ಧೆ, ಏಕ ಪಾತ್ರಾಭಿನಯ ಸ್ಪರ್ಧೆ, ಮಹಿಳಾ ಸಂಘಗಳಿಗೆ ಉತ್ಪನ್ನಗಳ ಪ್ರದರ್ಶನ ಸ್ಪರ್ಧೆ, ಸೀರೆಯ ನಿಖರ ಬೆಲೆ ಹೇಳುವದು ಸೇರಿದಂತೆ ವೈವಿಧ್ಯಮಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಡಿಕೇರಿ ನಗರಸಭೆ ಪೌರಾಯುಕ್ತೆ ಬಿ.ಬಿ.ಪುಷ್ಪ್ಪಾವತಿ ಮತ್ತು ಮಹಿಳಾ ಸದಸ್ಯೆಯರು ಸ್ಪರ್ಧೆಗಳನ್ನು ನಿರ್ವಹಿಸಲಿದ್ದಾರೆ.

ಸಂಜೆ 6 ಗಂಟೆಗೆ ಮಹಿಳಾ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯೆ

(ಮೊದಲ ಪುಟದಿಂದ) ಶಾಂತೆಯಂಡ ವೀಣಾ ಅಚ್ಚಯ್ಯ ಉದ್ಘಾಟಿಸಲಿದ್ದು, ಪ್ರಿನ್ಸಿಪಲ್ ಸಿವಿಲ್ (ಜ್ಯೂನಿಯರ್ ಡಿವಿಷನ್) ಜೆಎಂಎಫ್‍ಸಿ ನ್ಯಾಯಾಧೀಶೆ ಅನ್ನಪೂರ್ಣೇಶ್ವರಿ, ಮಾಜಿ ಸಚಿವೆ ಸುಮಾವಸಂತ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ನಗರಸಭೆ ಮಾಜಿ ಅಧ್ಯಕ್ಷೆಯರಾದ ಜುಲೇಕಾಬಿ, ಶ್ರೀಮತಿ ಬಂಗೇರಾ, ಮಡಿಕೇರಿ ತಾಲೂಕು ತಹಶೀಲ್ದಾರ್ ಕುಸುಮ, ಕೆ.ಎಸ್.ಆರ್.ಟಿ.ಸಿ. ಡಿಪೆÇೀ ಮ್ಯಾನೇಜರ್ ಗೀತಾ, ಮೀನುಗಾರಿಕೆ ಇಲಾಖೆಯ ಅಧಿಕಾರಿ ದರ್ಶನ್, ತೋಟಗಾರಿಕಾ ಇಲಾಖಾಧಿಕಾರಿ ದೇವಕಿ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಗಲಗಲಿ, ಯುವಜನ ಕ್ರೀಡಾ ಇಲಾಖಾಧಿಕಾರಿ ಜಯಲಕ್ಷ್ಮೀ ಬಾಯಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಮಹಿಳಾ ಕಲಾ ತಂಡಗಳಿಂದಲೇ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿತವಾಗಿದೆ.

ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ನಾಡಿನ ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಗಾಯನ ಕಾರ್ಯಕ್ರಮ ಮಡಿಕೇರಿಯ ಮಹಿಳಾ ದಸರಾದಲ್ಲಿ ನಡೆಯುತ್ತಿರುವದು ಈ ಬಾರಿಯ ಮಹಿಳಾ ದಸರಾದ ಪ್ರಮುಖ ಆಕರ್ಷಣೆಯಾಗಿದೆ. ಮಡಿಕೇರಿಯ ನಾಯರ್ಸ್ ಸೊಸೈಟಿ ವತಿಯಿಂದ ತಿರುವಾದಿರ ನೃತ್ಯ, ಮಡಿಕೇರಿಯ ಸ್ಪಂದನ ಮಹಿಳಾ ತಂಡದಿಂದ ನೃತ್ಯ ಸಂಭ್ರಮ, ಮಾಲ್ದಾರೆಯ ಶ್ರೀಮುತ್ತಪ್ಪನ್ ಚಂಡೆ ಮೇಳದ ಮಹಿಳಾ ತಂಡದಿಂದ ಸಿಂಗಾರಿ ಮೇಳ, ಮೈಸೂರಿನ ತಾಂಡವಂ ತಂಡದ ಮಹಿಳಾ ಕಲಾವಿದೆಯರಿಂದ ವ್ಯಾಘ್ರ ನೃತ್ಯ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ವಿದ್ಯಾರ್ಥಿನಿಯರಿಂದ ಡೇರ್ ಟು ಡ್ಯಾನ್ಸ್ ಕಾರ್ಯಕ್ರಮವನ್ನು ಮಹಿಳಾ ದಸರಾದಂದು ಆಯೋಜಿಸಲಾಗಿದೆ.