ಕೂಡಿಗೆ, ಆ. 31: ಕೊಡಗಿನ ಗಡಿಭಾಗ ಶಿರಂಗಾಲದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಮುಂಗಾರು ಸಂಪದ ಸಾಹಿತ್ಯ ಲೋಕಕ್ಕೆ ಅನ್ನದಾತರ ಕೊಡುಗೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ಬಿ.ಎಸ್. ಲೋಕೇಶ್‍ಸಾಗರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಯುವ ಬರಹಗಾರರಿಂದ ಉತ್ತಮವಾದ ಪ್ರಬಂಧ ಹಾಗೂ ಲೇಖನಗಳು ಬರೆಯಲ್ಪಟ್ಟಿವೆ. ನಶಿಸುತ್ತಿರುವ ಗ್ರಾಮೀಣ ಕ್ರೀಡೆ ಹಾಗೂ ಕೃಷಿ ಜನಪದ ಸಾಂಸ್ಕøತಿಕ ವಿಚಾರಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದಂತಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೂಡ್ಲೂರು ಗ್ರಾಮದ ಗುತ್ತಿಗೆದಾರರು ಪವನ್‍ಕುಮಾರ್ ಮಾತನಾಡುತ್ತಾ, ಮುಂಗಾರು ಸಂಪದ ಕಾರ್ಯಕ್ರಮದ ಮೂಲಕ ಗ್ರಾಮೀಣ ಮೂಲ ಕ್ರೀಡೆಗಳ ನೆನಪು ಬಂದಂತಾಗಿದೆ. ಜನಪದದ ಮೂಲ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳ ಸಾಹಿತ್ಯ ಪ್ರದರ್ಶಿಸಿದಂತಾಗಿದೆ. ಮುಂದಿನ ಯುವ ಪೀಳಿಗೆಗೆ ಇದನ್ನು ನೆನಪಿಸು ವಂತಹ ಕಾರ್ಯ ಶ್ಲಾಘನೀಯ. ಆಧುನಿಕ ಯುಗದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ತುಂಬಿದಂತಾಗಿದೆ ಎಂದರು.

ಇನ್ನೋರ್ವ ಮುಖ್ಯಅತಿಥಿ ಸಿದ್ದಲಿಂಗಪುರದ ಪ್ರಗತಿಪರ ರೈತರಾದ ರಾಮಣ್ಣ ಮಾತನಾಡುತ್ತಾ, ಗ್ರಾಮೀಣ ಸಾಹಿತ್ಯದ ಲೋಕಕ್ಕೆ ತನ್ನದೆ ಆದ ಹಿನ್ನೆಲೆಯಿರುವದರಿಂದ ಸಾಹಿತ್ಯ ಹಾಗೂ ಜನಪದ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಮುಂದಿನ ಯುವ ಬರಹಗಾರರಿಗೆ ಪೂರಕವಾಗುತ್ತದೆ ಎಂದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಕಸಾಪ ಕುಶಾಲನಗರ ಹೋಬಳಿ ಘಟಕದ ಗೌ.ಕಾರ್ಯದರ್ಶಿ ಹಂಡ್ರಂಗಿ ನಾಗರಾಜ್, ಜಿಲ್ಲಾ ಕಸಾಪ ಮಾಧ್ಯಮ ಕಾರ್ಯದರ್ಶಿ ಅಶ್ವಥ್‍ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯಅತಿಥಿಗಳಾಗಿ ಸಿದ್ಧಲಿಂಗಪುರದ ಶುಂಠಿ ಬೆಳೆಗಾರರಾದ ಬೇಬಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜವರ, ಶಿರಂಗಾಲ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಸೋಮಯ್ಯ, ದೇವಾಲಯ ಸಮಿತಿಯ ಅಧ್ಯಕ್ಷ ಚಂದ್ರಶೇಖರ್, ತಾ.ಪಂ ಸದಸ್ಯರಾದ ಜಯಣ್ಣ, ತೊರೆನೂರು ಗ್ರಾಪಂ ಅಧ್ಯಕ್ಷ ದೇವರಾಜ್, ತೊರೆನೂರು ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ರಮೇಶ್, ಕೃಷ್ಣೇಗೌಡ, ಶಿರಂಗಾಲ ಗ್ರಾ.ಪಂ. ಸದಸ್ಯರು, ಗ್ರಾಮದ ದೇವಾಲಯ ಸಮಿತಿಯ ನಿರ್ದೇಶಕರು ಹಾಗೂ ಶಿರಂಗಾಲ ಮಂಟಿಗಮ್ಮ ದೇವಾಲಯ ಕಾರ್ಯದರ್ಶಿ ಲೋಕೇಶ್, ಕೆಎಸ್‍ಆರ್‍ಟಿಸಿ ಉದ್ಯೋಗಿ ದನುಕುಮಾರ್, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಪದಾಧಿಕಾರಿಗಳಾದ ಫಿಲಿಪ್‍ವಾಸ್, ನಂಜುಂಡಸ್ವಾಮಿ, ಕೆ.ಕೆ.ನಾಗರಾಜಶೆಟ್ಟಿ ಸೇರಿದಂತೆ ಹೋಬಳಿ ಘಟಕದ ಪದಾಧಿಕಾರಿಗಳು ಹಾಜರಿದ್ದರು.

ವಿಶೇಷವಾಗಿ ಶಿರಂಗಾಲ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಸಾಹಿತ್ಯಾಭಿಮಾನಿಗಳಿಗೆ ಹಳ್ಳಿಯ ಭೋಜನಗಳಾದ ರಾಗಿ ಮುದ್ದೆ, ಹುರುಳಿಕಾಳು ಸಾರು, ಬೆಣ್ಣೆ ಬಡಿಸಿದರು.

ಈ ಸಂದರ್ಭ ಮುಂಗಾರು ಸಂಪದ ಕಾರ್ಯಕ್ರಮದ ಗ್ರಾಮೀಣ ಕ್ರೀಡೆಗಳಾದ ಲಗೋರಿ, ಬುಗುರಿ, ಅಳಗುಳಿ ಮನೆ, ಕಟ್ಟೆಮಣೆ, ಕುಂಟೆಬಿಲ್ಲೆ, ರಂಗೋಲಿ, ಆನೆಕಲ್ಲು ಆಟಗಳಲ್ಲಿ ವಿಜೇತರಾದವರಿಗೆ ಹಾಗೂ ಕೃಷಿ ಜನಪದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.