ನಾಪೋಕ್ಲು, ಜೂ. 8: ಸಮೀಪದ ಎಮ್ಮೆಮಾಡಿನ ಎಸ್‍ಎಸ್‍ಎಫ್ ಶಾಖಾ ವತಿಯಿಂದ ರಂಜಾನ್ ತಿಂಗಳ ಅಂಗವಾಗಿ 75 ಕುಟುಂಬಗಳಿಗೆ ರಂಜಾನ್ ಕಿಟ್‍ನ್ನು ವಿತರಿಸಲಾಯಿತು. ಶಿಯಾಬ್ ತಂಞಳ್ ಅಲ್ ಹೈದ್ರುಸಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‍ಎಸ್‍ಎಫ್ ಜಿಲ್ಲಾಧ್ಯಕ್ಷ ರಫೀಕ್ ಸಖಾಫಿ, ಕೂರ್ಗ್ ಜಮಾಯತ್ ಉಲಮಿ ಕೋಶಾಧಿಕಾರಿ ಹುಸೇನ್ ಸಖಾಫಿ, ತಾಜುಲ್ ಇಸ್ಲಾಂ ಮುಸ್ಲಿಂ ಜಮಾಯತ್ ಅಧ್ಯಕ್ಷ ಉಸ್ಮಾನ್ ಹಾಜಿ, ಎಸ್‍ಎಸ್‍ಎಫ್ ನಾಪೋಕ್ಲು ವಿಭಾಗ ಅಧ್ಯಕ್ಷ ಫೈಜಲ್ ಜಾಹರಿ ಇಲಿಯಾಸ್ ತಂಙಳ್, ಅಲ್ ಹೈದ್ರುಸಿ ಹಾಗೂ ನಜೀರ್ ಬಾಖವಿ ಪಾಲ್ಗೊಂಡಿದ್ದರು.