ನಾಪೋಕ್ಲು, ಅ. 21: ಪಟ್ಟಣದಲ್ಲಿ ಹದಗೆಟ್ಟ ರಸ್ತೆ ವ್ಯೆವಸ್ಥೆಯನ್ನು ಖಂಡಿಸಿ ನಾಪೋಕ್ಲು ಬಿ.ಜೆ.ಪಿ. ಸ್ಥಾನೀಯ ಸಮಿತಿ ವತಿಯಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಮುಖ್ಯ ರಸ್ತೆಯಲ್ಲಿಯೇ ಪ್ರತಿಭಟನಾಕಾರರು ಕುಳಿತು ಪ್ರತಿಭಟಿಸಿದರು. ಈ ಸಂದರ್ಭ ಮಾತನಾಡಿದ ಬಿ.ಜೆ.ಪಿ. ಮುಖಂಡ ಡಿ.ಸಿ.ಸಿ. ಉಪಾಧÀ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಮತನಾಡಿ, ಕಳೆದ ಕೆಲವು ತಿಂಗಳಿಂದ ನಾಪೋಕ್ಲು ಮಾರುಕಟ್ಟೆ ಬಳಿಯಿಂದ ಸುಮಾರು 2 ಕೀ.ಮೀ. ರಸ್ತೆ ತೀರ ಹದಗೆÀಟ್ಟ ಸಂದರ್ಭ ರಸ್ತೆ ತಡೆ ನಡೆಸಿ ಪ್ರತಿಭಟನೆ ಸಲ್ಲಿಸಲಾಗಿ ಜನರ ಕಣ್ಣೊರೆಸುವಂತೆ ಗುಂಡಿಗಳಿಗೆ ಮಣ್ಣು, ಕಲ್ಲು ಹಾಕಿ ಮುಚ್ಚಲಾಗಿದ್ದರೂ ಮಳೆಯಿಂದಾಗಿ ರಸ್ತೆಯು ಯಥಾ ಸ್ಥಿತಿ ತಲಪಿದ್ದು, ಈ ರಸ್ತೆಯನ್ನು 10 ದಿನದ ಒಳಗೆ ದುರಸ್ತಿ ಗೊಳಿಸದಿದ್ದರೆ ಈ ವಿಭಾಗದ ಎಲ್ಲಾ ಸಾರ್ವಜನಿಕರು ಮತ್ತು ಸಂಘ -ಸಂಸ್ಥೆಗಳೊಂದಿಗೆ ಮತ್ತು ಬಿ.ಜೆ.ಪಿ. ಕಾರ್ಯಕರ್ತರೊಂದಿಗೆ ಉಗ್ರ ಹೋರಾಟ ಪ್ರತಿಭಟನೆಯನ್ನು ಕೈಗೊಳ್ಳಲಾಗುವದು ಎಂದು ಅವರು ಎಚ್ಚರಿಸಿದ್ದಾರೆ.

ಈ ಸಂದರ್ಭ ಬಿ.ಜೆ.ಪಿ.ಯ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಬಿ.ಜೆ.ಪಿ. ಅಲ್ಪ ಸಂಖ್ಯಾಂತ ಘಟಕದ ಅಧ್ಯಕ್ಷ ಎಂ.ಜಿ. ಜಾಹೀರ್ ಗ್ರಾಮ ಪಂಚಾಯತ್ ಸದಸ್ಯ ಶಿವಚಾಳಿಯಂಡ ಜಗದೀಶ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಉಪಾಧÀ್ಯಕ್ಷ ಅರೆಯಡ ಅಶೋಕ, ಭಜರಂಗ ದಳದ ಅಧ್ಯಕ್ಷ ಬಿ.ಎಂ. ಪ್ರತೀಪ್, ಅರೆಯಡ ರತ್ನ ಪೆಮ್ಮಯ್ಯ, ಸುದಿ ತಿಮ್ಮಯ್ಯ, ಮಾಜಿ ಅಧ್ಯಕ್ಷ ರಮೇಶ್ ಮುದ್ದಯ್ಯ, ಚೋಕಿರ ಸಜೀತ್, ಕೊಡವ ಸಮಾಜದ ಕಾರ್ಯದರ್ಶಿ ಮಂಡೀರ ರಾಜಪ್ಪ ಚಂಗಪ್ಪ. ಕೃತಿ ಇದ್ದರು.