ವೀರಾಜಪೇಟೆ, ಜು. 10: ರಾಜ್ಯದಲ್ಲಿ ಅರಾಜಕತೆ ತಾಂಡವಾಡುತ್ತಿದೆ, ಪ್ರಾಮಾಣಿಕ ಅಧಿಕಾರಿಗಳಿಗೆ ಕರ್ತವ್ಯ ನಿಭಾಯಿಸಲು ಸರಕಾರ ಬಿಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಆರೋಪಿಸಿದ್ದಾರೆ. ವೀರಾಜಪೇಟೆಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆಯ ಸಭಾಂಗಣದಲ್ಲಿ ಭಾರತಿಯ ಜನತಾ ಪಾರ್ಟಿಯ ಕೊಡಗು ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಮೊದಲ ಸಭೆಯಲ್ಲಿ ವೀಕ್ಷಕರಾಗಿ ಭಾಗವಹಿಸಿ ಅವರು ಮಾತನಾಡಿದರು. ಡಿ.ಕೆ. ರವಿ ಪ್ರಕರಣ ಸೇರಿದಂತೆ ಇಲ್ಲಿಯವರೆÀಗೆ ನಡೆದಿರುವ ಅಧಿಕಾರಿಗಳ ಸಾವಿನ ರಹಸ್ಯ ಇನ್ನೂ ಬಯಲಾಗಿಲ್ಲ. ಮೈಸೂರು ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಬಂಟ ಬೆದರಿಕೆ ಹಾಕಿದರೆ ಮುಖ್ಯಮಂತ್ರಿ ರಾಜಿ ಸಂಧಾನ ಮಾಡಲು ತಿಳಿಸುತ್ತಾರೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿಯುತ್ತಿದೆ. ಭ್ರಷ್ಟಾಚಾರದÀ ಆಡಳಿತ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದರು. ಸಮಾಜದ ಒಗ್ಗಟ್ಟನ್ನೇ ಒಡೆದು ಮತ ಬ್ಯಾಂಕ್‍ಗಾಗಿ ಟಿಪ್ಪು ಜಯಂತಿ ತಂದರು. ರಾಜ್ಯ ಸರಕಾರ ಶಾದಿ ಭಾಗ್ಯದಂತಹ ಜಾತಿ ಆಧಾರಿತ ಯೋಜನೆ ತಂದಿದ್ದಾರೆ ಎಂದು ಅರೋಪಿಸಿದರಲ್ಲದೆ ಕೊಡಗಿನಲ್ಲಿ ಕಾರ್ಮಿಕರ ಕೊರತೆ ಹಿನ್ನೆಲೆ ಅಸ್ಸಾಮಿ ಗಳೆಂದು ಬಂದು ನೆಲೆಸುತ್ತಿರುವ ಬಾಂಗ್ಲ ದೇಶಿಯರ ವಲಸೆ ಕಾರ್ಮಿಕರ ಬಗ್ಗೆ ತೀವ್ರ ನಿಗಾ ವಹಿಸದಿದ್ದರೆ ಮುಂದೆ ಗಂಡಾಂತರ ವಿದೆ. ಕೊಡಗಿನ ಸಂಸ್ಕøತಿ ಅಚಾರ - ವಿಚಾರಗಳನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ದೇಶದಲ್ಲೇ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆಯನ್ನು ತೆರೆಯುವ ಮೂಲಕ ಬಡ ಜನರಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. 68 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಮಾಡದ ಜನಪರ ಯೋಜನೆಗಳನ್ನು ಮೋದಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಸರ್ವರಿಗೂ ಅನುಕೂಲವಾಗುವಂತಹÀ ಜನ್‍ಧನ್, ಜೀವವೀಮೆ, ಅಟಲ್ ಪಿಂಚಣಿ ಯೋಜನೆ ಸೇರಿದಂತೆ ಸ್ವ- ಉದ್ಯೋಗಗಳಿಗೆ ಸಾಲ ಸೌಲಭ್ಯ ಮುಂತಾದ ಅನೇಕ ಉತ್ತಮ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು, ಪ್ರಜಾಪ್ರಭುತ್ವಕ್ಕೆ ಬಿ.ಜೆ.ಪಿ. ಒತ್ತು ನೀಡಿದೆ ಎಂದರು.

ಶಾಸಕ ಕೆ.ಜಿ. ಬೋಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಕೊಡಗಿನಲ್ಲಿ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಎಲ್ಲಾ ಕಡೆ ಬಿಜೆಪಿ ಅಧಿಕಾರದಲ್ಲಿದೆ. ಮುಂದೆಯೂ ಉತ್ತಮವಾಗಿ ಪಕ್ಷ ಸಂಘಟನೆ ಮಾಡಬೇಕು. ಮುಂದೆ ಸವಾಲಿನ ದಿನಗಳಿವೆ. ಯಡಿಯೂರಪ್ಪ ಅವರ ಸಾರಥ್ಯದಲ್ಲಿ ಗೆದ್ದೆ ಗೆಲ್ಲುವ ವಿಶ್ವಾಸವಿದ್ದರೂ, ಕಾರ್ಯಕರ್ತ ರೊಡಗೂಡಿ, ಪಕ್ಷ ಸಂಘಟನೆಗೆ ಒತ್ತು ನೀಡಬೇಕಿದೆ. ಕೊಡಗನ್ನು ರಾಜ್ಯ ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಕೊಡಗಿನಲ್ಲಿ ಮಳೆಯಿಂದ ಇತರರಿಗೆ ಒಳಿತಾಗಲಿ, ಆದರೆ ಕೊಡಗಿಗೆ ಇದರಿಂದ ಉಂಟಾಗುವ ಹಾನಿಯ ಬಗ್ಗೆ ಕಾಳಜಿ ವಹಿಸಬೇಕು. ಕಾಡಾನೆ ಹಾವಳಿಗೆ 16 ಜನ ಪ್ರಾಣ ಕಳೆದುಕೊಂಡರೂ ಸರಕಾರ ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಅತ್ಯಂತ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಎಂ.ಕೆ. ಗಣಪತಿ ಅವರಿಗೆ ಸಚಿವ ಜಾರ್ಜ್ 2008 ರ ಧಾಳಿಯ ಪ್ರಕರಣದಲ್ಲಿ ಹಿಂಸೆ ನೀಡಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿದ್ದಾರೆಂದು ಆರೋಪಿಸಿದರು.

ಸಭೆಯಲ್ಲಿ 3 ಪ್ರಮುಖ ನಿರ್ಣಯ ಕೈಗೊಂಡಿದ್ದು, ಇದನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮಂಡಿಸಿದ್ದರು.

ಪೊಲೀಸ್ ಅಧಿಕಾರಿ ಗಣಪತಿ ಸಾವಿಗೆ ಮುಂಚೆ ನೀಡಿರುವ ಹೇಳಿಕೆಯಂತೆ, ಬೆಂಗಳೂರು ನಗರಾಭಿವೃದ್ಧಿ ಸಚಿವ ಜಾರ್ಜ್ ಅವರ ರಾಜಿನಾಮೆ ಪಡೆದು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಅವರ ಮೇಲೆ ಪ್ರÀಕರಣ ದಾಖಲಿಸಬೇಕು. ಅದೇ ರೀತಿ ಉನ್ನತ ಪೊಲೀಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್ ಹಾಗೂ ಪ್ರಣಬ್ ಮೋಹಂತಿ ಅವರನ್ನು ಅಮಾನತು ಪಡಿಸಬೇಕು ಹಾಗೂ ಅವರ ಮೇಲೆ ಪ್ರಕರಣ ದಾಖಲಿಸಬೇಕು.

ಹಿಂದೆ ಬಿ.ಜೆ.ಪಿ ಸರಕಾರ ಇದ್ದಾಗ ಕಾಫಿ ಬೆಳೆಗಾರರಿಗೆ ಸೇರಿದಂತೆ ರಾಜ್ಯದ ಎಲ್ಲಾ ಬೆಳೆಗಾರರಿಗೆ ಸೂಕ್ತ ಬೆಳೆ ಹಾನಿ ಪರಿಹಾರ ದೊರೆಯುತ್ತಿದ್ದು, ಅದೇ ರೀತಿ ಈಗಿನ ಸರಕಾರ ಸಹ ಸೂಕ್ತ ಬೆಳೆ ಹಾನಿ ಪರಿಹಾರ ನೀಡಬೇಕು.

ಕೊಡಗಿನಲ್ಲಿ ವ್ಯಾಪಕವಾಗಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, 16 ಜನ ಈ ಸಾಲಿನಲ್ಲಿ ಪ್ರಾಣ ಕಳೆದುಕೊಂಡಿದ್ದು, ಇತರ ಪ್ರಾಣಿಗಳಿಂದ ರೈತರಿಗೆ ಹಾನಿಯಾಗು ತ್ತಿದೆ. ಆದ್ದರಿಂದ ಇವುಗಳ ನಿಯಂತ್ರಣ ಕ್ಕೆ ಸರಕಾರ ಆಗತ್ಯ ಕ್ರಮವನ್ನು ಕೂಡಲೆ ಕೈಗೊಳ್ಳಬೇಕು. ಎಂಬ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ವಹಿಸಿದ್ದರು, ವೇದಿಕೆಯಲ್ಲಿ, ಶಾಸಕ ಅಪ್ಪಚ್ಚು ರಂಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ, ಜಿ. ಪಂ. ಅಧ್ಯಕ್ಷ ಹರೀಶ್, ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ರೀನಾ ಪ್ರಕಾಶ್, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಮಡಿಕೇರಿ ತಾಲೂಕು ಅಧ್ಯಕ್ಷ ಕಿಶೋರ್ ಕುಮಾರ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕುಮಾರಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಅರುಣ್ ಭಿಮಯ್ಯ ಸೇರಿದಂತೆ ವಿವಿಧ ಮೋರ್ಚಾಗಳ, ವಲಯಗಳ ಪ್ರಮುಖರು, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.