ಶ್ರೀಮಂಗಲ, ಸೆ. 17: ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವಾಲಯದ ಅಧೀನದಲ್ಲಿ, ನವೋದಯ ಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾಗುವ ರಾಷ್ಟ್ರೀಯ ಯುವ ಪಾರ್ಲಿಮೆಂಟ್ ಸ್ಪರ್ಧೆಯ 2015 -16 ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಮಡಿಕೇರಿಯ ನವೋದಯ ಶಾಲೆಯ ವಿದ್ಯಾರ್ಥಿನಿ ತೀತಮಾಡ ಚಾನ್ವಿ ಮಾದಪ್ಪ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವದರ ಮೂಲಕ ಮಡಿಕೇರಿ ನವೋದಯ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.ದೆಹಲಿಯ ಪಾರ್ಲಿಮೆಂಟ್ ಭವನದಲ್ಲಿ ನಡೆದ ಸಮಾರಂಭ ದಲ್ಲಿ, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಮಾಂಟೆಕ್ ಸಿಂಗ್ ಅಹ್ಲುವಾಲಿಯ ರವರು ಚಾನ್ವಿ ಮಾದಪ್ಪಗೆ ಪ್ರಶಸ್ತಿ ಪ್ರದಾನ ಮಾಡಿದರುಈಕೆ 2015-16 ರ ಶೈಕಣಿಕ ವರ್ಷದಲ್ಲಿ ಮಡಿಕೇರಿ ನವೋದಯ ಶಾಲೆಯ 10ನೇ ತರಗತಿ ವಿಧ್ಯಾರ್ಥಿನಿಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಗೋಣಿಕೊಪ್ಪದ ವಿದ್ಯಾನಿಕೇತನ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ.

ಪೊನ್ನಂಪೇಟೆ ಸಮೀಪದ ಕುಂದ ಗ್ರಾಮದ ಕಾಫಿ ಬೆಳೆಗಾರರಾದ ತೀತಮಾಡ ನಿಕ್ಕಿ ಮಾದಪ್ಪ ಹಾಗೂ ನೀರ ಮಾದಪ್ಪ ದಂಪತಿಯ ಪುತ್ರಿಯಾಗಿದ್ದಾಳೆ.. ಈ ಸಂದರ್ಭ ಶಾಲಾ ವಿಭಾಗದಲ್ಲಿ ಮಡಿಕೇರಿ ನವೋದಯ ಶಾಲೆ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಚಾನ್ವಿ ಸೇರಿದಂತೆ ಮಡಿಕೇರಿ ನವೋದಯ ಶಾಲೆಯ ಸಿಂಚನ ಡಿ.ಎಂ., ಬಿಂದು ಟಿ.ಎಸ್., ಬಿಂದು ಜೋಸೆಫ್, ಶರ್ಲಿ ಕೆ.ಎಸ್, ಭೂಮಿಕಾ ಹೆಡ್ಗೆ, ಬಾಳಿಯಡ ಕಾವೇರಿ ಪೊನ್ನಪ್ಪ, ಹಾಗೂ ನಂದೇಟಿರ ತಮನ್ ಪೊನ್ನಣ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.