ಸೋಮವಾರಪೇಟೆ, ಸೆ. 24: ಇಲ್ಲಿನ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 2.70 ಲಕ್ಷ ರೂ. ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು.

ಇಲ್ಲಿನ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ 2015-16ನೇ ಸಾಲಿನ ವಾರ್ಷಿಕ ಮಹಾಸಭೆಯು ಸ್ಥಳೀಯ ಮಾನಸ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘವು 1371 ಸದಸ್ಯರನ್ನು ಹೊಂದಿದ್ದು, 16.19 ಲಕ್ಷ ಪಾಲು ಬಂಡವಾಳ ಹೊಂದಿದೆ. ಸದಸ್ಯರಿಂದ ವಿವಿಧ ಠೇವಣಿಗಳಿಂದ ಒಟ್ಟು 2,03,157 ಲಕ್ಷ ಠೇವಣಿಗಳನ್ನು ಸಂಗ್ರಹಿಸಲಾಗಿದೆ. ಪಿಗ್ಮಿ ಓವರ್ ಡ್ರಾಫ್ಟ್ಟ್ ಆಭರಣ ಸಾಲ, ಜಾಮೀನು ಸಾಲ ನೀಡಲಾಗಿದ್ದು ವಸೂಲಾತಿ ಪ್ರಗತಿಯಲ್ಲಿದೆ ಎಂದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಜಲಜಾ ಶೇಖರ್, ನಿರ್ದೇಶಕರುಗಳಾದ ಜಯಂತಿ ಶಿವಕುಮಾರ್, ವಸಂತಿ ರಮೇಶ್, ಉಷಾ ತೇಜಸ್ವಿ, ನಳಿನಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.