ಮಡಿಕೇರಿ, ಅ. 19: ಕೊಡಗಿನ ಲೈನ್‍ಮನೆಗಳಲ್ಲಿ ಜೀವನ ಸಾಗಿಸುತ್ತಿರುವ ಆದಿವಾಸಿಗಳ ಮೇಲೆ ಮಾಲೀಕರುಗಳಿಂದ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ವೈ.ಕೆ. ಗಣೇಶ್, ದೌರ್ಜನ್ಯ ನಡೆಸುತ್ತಿರುವವರ ವಿರುದ್ಧ ಪೆÇಲೀಸ್ ಇಲಾಖೆ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು. ಸೂಕ್ತ ರಕ್ಷಣೆ ನೀಡಲು ಸಾಧ್ಯವಾಗದಿದ್ದಲ್ಲಿ ಎಲ್ಲಾ ಆದಿವಾಸಿಗಳಿಗೆ ಸಾವನ್ನು ನೀಡಲಿ ಎಂದು ಅಸಹಾಯಕತೆ ವ್ಯಕ್ತಪಡಿಸಿ ದರು. ಇತ್ತೀಚೆಗೆ ತಿತಿಮತಿಯ ಎಡ ತೊರೆಯ ನಿವಾಸಿ ಲೈನ್‍ಮನೆಯಲ್ಲಿ ವಾಸವಿದ್ದ ಪಣಿ ಎರವರ ಶೈಲಾ ಎಂಬವರ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಮಾಲೀಕರಿಂದ ಹಲ್ಲೆ ನಡೆದಿದೆ. ಕಾಲು ಹಾಗೂ ಕೈಗಳು ಘಾಸಿಗೊಂಡಿದ್ದರೂ ಪೆÇನ್ನಂಪೇಟೆ ಪೆÇಲೀಸರು ಮಾತ್ರ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದಾರೆ. ದೂರು ಗಂಭೀರವಾಗಿದ್ದರೂ ಪೆÇಲೀಸರು ಮಾಲೀಕರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಗಣೇಶ್ ಆರೋಪಿಸಿದರು. ಶೈಲಾ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇನ್ನಂಪೇಟೆ ಪೆÇಲೀಸ್ ಠಾಣೆಯಲ್ಲಿ ನ್ಯಾಯ ಸಿಗದ ಕಾರಣ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿರುವದಾಗಿ ಅವರು ಹೇಳಿದರು.

ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಸ್ಥಿತಿ ಹೀನಾಯ ವಾಗಿದ್ದು, ಮಾಲೀಕರುಗಳಿಂದ ದೌರ್ಜನ್ಯ ನಿರಂತರವಾಗಿದೆ. ಬೆದರಿಕೆ ಹಾಕಿ ಮತದಾನದ ಗುರುತಿನ ಚೀಟಿ, ಪಡಿತರ ಚೀಟಿಗಳನ್ನು ಕಸಿದುಕೊಳ್ಳುತ್ತಿರುವ ಮಾಲೀಕರು ನ್ಯಾಯ ಬೆಲೆÉ ಅಂಗಡಿಯ ಪಡಿತರ ಸಾಮಗ್ರಿಗಳನ್ನು ಕೂಡ ತಾವೇ ವಶಪಡಿಸಿಕೊಂಡು ಮತ್ತು ದುಬಾರಿ ಬೆಲೆÉಗೆ ಮಾರಾಟ ಮಾಡುತ್ತಿದ್ದಾರೆ. ಪೆÇಲೀಸ್ ಠಾಣೆಗಳಲ್ಲಿ ಆದಿವಾಸಿಗಳು ನೀಡುವ ದೂರುಗಳಿಗೆ ಬೆಲೆಯೇ ಇಲ್ಲದಾಗಿದೆ. ಜಾತಿ ನಿಂದನೆ ದೂರನ್ನು ದಾಖಲಿಸಿದರೆ ಬೆದರಿಕೆಯೊಡ್ಡಿ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ. ತೋಟದ ಮಾಲೀಕರುಗಳು ಆದಿವಾಸಿ ಕಾರ್ಮಿಕರಿಗೆ ಕನಿಷ್ಟ ವೇತನವನ್ನು ನೀಡದೆ ಅತ್ಯಂತ ಕಡಿಮೆ ವೇತನ ನೀಡಿ ವಂಚಿಸುತ್ತಿರುವದಾಗಿ ಗಣೇಶ್ ಆರೋಪಿಸಿದರು. ತಕ್ಷಣ ಜಿಲ್ಲಾಡಳಿತ ಮತ್ತು ಹಿರಿಯ ಅಧಿಕಾರಿಗಳು ಆದಿವಾಸಿಗಳ ಸಮಸ್ಯೆಗಳಿಗೆÀ ಸ್ಪಂದಿಸಿ ಜೀತದಿಂದ ಮುಕ್ತಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಸಹ ಸಂಚಾಲಕಿ ನ್ಯಾನ್ಸಿ ಹಾಗೂ ಹಲ್ಲೆಗೊಳಗಾದ ಶೈಲಾ ಉಪಸ್ಥಿತರಿದ್ದರು.