ಮಡಿಕೇರಿ: ಭಾರತ ಸರಕಾರ, ನೆಹರೂ ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ, ಮಡಿಕೇರಿ ಜಿಲ್ಲಾ ಕಾರಾಗೃಹ ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ತಾಲೂಕು ಮಟ್ಟದ ಅಂತರರಾಪ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾ ಖೈದಿಗಳಿಗೆ ಭಾರತೀಯ ವಿದ್ಯಾಭವನ ಯೋಗ ಗುರು ಮಹೇಶ್ ಹಾಗೂ ಸಹಪಾಠಿಗಳು ಯೋಗದ ಬಗ್ಗೆ ಮಾಹಿತಿ ಹಾಗೂ ಯೋಗಭ್ಯಾಸವನ್ನು ನಡೆಸಿಕೊಟ್ಟರು.

ಈ ಸಂದರ್ಭ ಜಿಲ್ಲಾ ಕಾರಗೃಹದ ಅಧೀಕ್ಷಕ ಮಹದೇವ ನಾಯಕ್, ನೆಹರೂ ಯುವ ಕೇಂದ್ರದ ಕಚೇರಿ ಸಹಾಯಕ ಫ್ರಾನ್ಸಿಸ್, ಜಿಲ್ಲಾ ಯುವ ಒಕ್ಕೂಟದ ಆಧ್ಯಕ್ಷ ಯಂ.ಬಿ. ಜೋಯಪ್ಪ, ತಾಲೂಕು ಯುವ ಒಕ್ಕೂಟದ ಉಪಾಧ್ಯಕ್ಷ ನವೀನ್ ದೇರಳ, ರಾಷ್ಟ್ರೀಯ ಸ್ವಯಂ ಸೇವಕರಾದ ಶ್ರೀಹರಿ ಮತ್ತು ಗುಣಶೇಖರ್ ಉಪಸ್ಥಿತರಿದ್ದರು.

ಈ ಸಂದರ್ಭ ಯೋಗ ಗುರು ಮಹೇಶ್ ಅವರನ್ನು ಸನ್ಮಾನಿಸಲಾಯಿತು.

ಸಿದ್ದಾಪುರ: ಪೊಲೀಸ್ ಠಾಣಾ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸ್ಥಳೀಯ ಚರ್ಚ್ ಹಾಲ್ ಸಭಾಂಗಣದಲ್ಲಿ ನಡೆಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಮಣಿ, ಠಾಣಾಧಿಕಾರಿ ಬಿ.ಜಿ. ಕುಮಾರ್ ಹಾಗೂ ಯೋಗ ತರಬೇತುದಾರ ಮನು ಸೇರಿದಂತೆ ಮತ್ತಿತರರು ಇದ್ದರು.*ಗೋಣಿಕೊಪ್ಪಲು: ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಹಾಗೂ ಸರಕಾರಿ ಪದವಿಪೂರ್ವ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಇಲ್ಲಿನ ಮೈದಾನದಲ್ಲಿ ವಿದ್ಯಾರ್ಥಿಗಳು ಯೋಗ ಗುರು ಡಾ. ಮುಕುಂದ ಮಾರ್ಗದರ್ಶನದಲ್ಲಿ ಯೋಗಾಸನ ಮಾಡಿದರು. ಬೆಳಿಗ್ಗೆ 9 ರಿಂದ 10.30 ರತನಕ ಯೋಗಾಸನ ಕಾರ್ಯಕ್ರಮ ಜರುಗಿತು. ರೋಗಗಳನ್ನು ನಿಯಂತ್ರಿಸಲು ಯೋಗ ಪ್ರಕೃತಿ ಚಿಕಿತ್ಸೆ ಉತ್ತಮವಾಗಿದೆ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬೆಳೆಯಲು ಯೋಗ ಅಭ್ಯಾಸ ಮಾಡಬೇಕು ಎಂದು ಆಶ್ರಮದ ಅಧ್ಯಕ್ಷ ಬೋಧ ಸ್ವರೂಪಾನಂದ ತಿಳಿಸಿದರು. ಆಶ್ರಮದ ಹಿರಿಯ ಸನ್ಯಾಸಿ ಮುಕ್ತಿನಂದ ಸ್ವಾಮಿ, ಕಾಲೇಜು ಪ್ರಾಂಶುಪಾಲೆ ಎ.ಕೆ. ಪಾರ್ವತಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಕೆ. ಅಂಬುಜಾ, ಗೋಣಿಕೊಪ್ಪಲು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರತೀಶ್, ಕ್ರೀಡಾ ತರಬೇತುದಾರ ಡ್ಯಾನಿ ಈರಪ್ಪ, ಎನ್.ಸಿ.ಸಿ. ಶಿಕ್ಷಕ ಮಂಜುನಾಥ್ ಹಾಜರಿದ್ದರು.ಮೂರ್ನಾಡು: ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಎನ್.ಸಿ.ಸಿ. ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗಳು ಯೋಗ ಪ್ರದರ್ಶಿಸಿದರು.

ಮಡಿಕೇರಿ ಎನ್.ಸಿ.ಸಿ. ಅಧಿಕಾರಿ ಮೊನೇಶ್, ಪ್ರೌಢಶಾಲಾ ಎನ್.ಸಿ.ಸಿ. ಅಧಿಕಾರಿ ಎ.ಜಿ. ಗಣೇಶ್, ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಪಿ.ಎಂ. ಕಾವೇರಪ್ಪ, ಪ್ರೌಢಶಾಲಾ ವೃತ್ತಿ ಶಿಕ್ಷಕ ಕೃಷ್ಣಪ್ಪ ಹಾಜರಿದ್ದರು.ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಿಜಯವಾಣಿ ಮಾಧ್ಯಮ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಜರುಗಿತು.

ಮಡಿಕೇರಿಯ ಭಾರತೀಯ ವಿದ್ಯಾಭವನದ ಯೋಗ ಕೇಂದ್ರದ ಪ್ರಮುಖರು ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ತಿಳಿಸಿಕೊಟ್ಟರು. ಸಂಸ್ಥೆಯ ಯೋಗ ಶಿಕ್ಷಕ ಕೆ.ಎಂ. ಮಹೇಶ್ ನೇತೃತ್ವದಲ್ಲಿ ಸದಸ್ಯರಾದ ಮಲ್ಲಿಗೆ ಅಪ್ಪುರಾವ್, ಪೂಜಾರಿರ ಕೃಪಾ ದೇವರಾಜ್, ಲೋಕೇಶ್, ರಮೇಶ್, ಸವಿತಾ ನವೀನ್, ಬಿ.ಎಸ್. ಜನಾರ್ದನ ಯೋಗಾಸನದ ವಿವಿಧ ಪ್ರಾಕಾರಗಳ ಪ್ರಾತ್ಯಕ್ಷಿಕೆ ನೀಡಿದರು. ಪ್ರತಿನಿತ್ಯ ಯೋಗ ಮಾಡುವದರಿಂದಾಗುವ ವಿವಿಧ ಅನುಕೂಲಗಳ ಬಗ್ಗೆ ಮಹೇಶ್ ವಿವರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಮುಕ್ಕಾಟಿರ ಪೊನ್ನಮ್ಮ, ಯೋಗದಿನದಂದು ಮಾತ್ರ ಯೋಗಾಸನ ಮಾಡುವದು ಸೀಮಿತವಾಗಬಾರದು. ಪ್ರತಿ ದಿನವೂ ಯೋಗಾಭ್ಯಾಸ ಮಾಡುವದನ್ನು ರೂಢಿಸಿಕೊಳ್ಳಬೇಕು ಎಂದರು.

ವಿಜಯವಾಣಿ ಹಿರಿಯ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಯೋಗಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಕ್ಕಿರುವದು ಒಳ್ಳೆಯ ಬೆಳವಣಿಗೆ. ಮನುಷ್ಯನ ಸೋಮಾರಿತನವನ್ನು ಯೋಗ ದೂರ ಮಾಡುತ್ತದೆ ಎಂದರು.

ಪ್ರಾಂಶುಪಾಲೆ ಕಲ್ಲುಮಾಡಂಡ ಸರಸ್ವತಿ, ವಿದ್ಯಾಸಂಸ್ಥೆ ಪ್ರತಿನಿಧಿ ಮಣವಟ್ಟಿರ ಚಿಣ್ಣಪ್ಪ, ಮಡಿಕೇರಿ ಕೊಡವ ಸಮಾಜ ನಿರ್ದೇಶಕ ಬೊಳ್ಳಜಿರ ಅಯ್ಯಪ್ಪ, ಶಾಲೆಯ ಶಿಕ್ಷಕರು ಇದ್ದರು. ಪಿ.ಎ. ಪುಣ್ಯ ಪೊನ್ನಮ್ಮ ಸ್ವಾಗತಿಸಿ, ಎ. ಅಕ್ಷತಾ ದೇವಿ ನಿರೂಪಿಸಿದರೆ, ಪಿ.ವೈ. ರಿಷಿಕ ವಂದಿಸಿದರು.