ಗುಡ್ಡೆಹೊಸೂರು, ಜೂ. 22: ಕನ್ನಡ ನಾಡಿನ ಧಾರ್ಮಿಕ ಇತಿಹಾಸದಲ್ಲಿ ಸಾವಿರ ವರ್ಷಗಳಿಗೂ ಹೆಚ್ಚಿನ ಸುದೀರ್ಘ ಪರಂಪರೆಯನ್ನು ಹೊಂದಿರುವ ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಠವು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳಿಂದ ಸ್ಥಾಪಿತವಾಗಿದೆ. ಶ್ರೀ ಮಠದ ಗುರುಪರಂಪರೆಯಲ್ಲಿನ ತಪಶ್ಯಕ್ತಿ, ಕ್ರಿಯಾಶಕ್ತಿ, ಜ್ಞಾನ ಶಕ್ತಿಗಳೆಲ್ಲವನ್ನು ಆವಿರ್ಭವಿಸಿದವರು ಇವರೆ 23ನೇ ಜಗದ್ಗುರುಗಳಾದ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಈ ಜ್ಯೋತಿ ಯಾತ್ರೆ ಗುಡ್ಡೆಹೊಸೂರಿಗೆ ಆಗಮಿಸಿದ್ದು, ಈ ಸಂದರ್ಭ ರಸ್ತೆ ಬದಿಯಲ್ಲಿ ಹಸಿರು ತೋರಣ ಕಟ್ಟಿ ಶೃಂಗಾರ ಮಾಡಲಾಗಿತ್ತು. ಅಲ್ಲದೆ ಗ್ರಾಮದ ಮಹಿಳೆಯರು ರಥಕ್ಕೆ ಮಹಾಆರತಿ ಮಾಡಿದರು. ಜನವರಿ 2ನೇ 2016 ರಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಶ್ರೀಗಳ ಜನ್ಮಶತಮಾನೋತ್ಸವ ಉದ್ಘಾಟನೆ ನೆರವೇರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.

ಗುಡ್ಡೆಹೊಸೂರಿಗೆ ಆಗಮಿಸಿದ ಸಂದರ್ಭ ಸ್ಥಳೀಯರಾದ ಮಲ್ಲಿಕಾರ್ಜುನ, ಬಿ.ಎಸ್. ಚಂದ್ರಶೇಖರ್, ಮಹೇಶ್, ಶುಭಶೇಖರ್, ಪ್ರದಿ, ದಿನೇಶ್, ಬಿ.ಟಿ. ಪ್ರಸನ್ನ, ಯೋಗೇಶ್, ಸೋಮಣ್ಣ, ಪಾಪಣ್ಣ ಮುಂತಾದವರು ಹಾಜರಿದ್ದು, ಸ್ವಾಗತಿಸಿದರು.