ಕೂಡಿಗೆ, ಜು. 23: ಕೂಡು ಮಂಗಳೂರು ಗ್ರಾಮ ಪಂಚಾಯಿತಿಗೆ ಒಳಪಡುವ ಕೂಡಿಗೆ ಡೈರಿ ಸರ್ಕಲ್‍ನಲ್ಲಿ ಕಳೆದ 10 ವರ್ಷಗ ಳಿಂದಲೂ ಸಾರ್ವಜನಿಕ ಶೌಚಾಲ ಯವಿಲ್ಲದೆ ಸಾರ್ವಜನಿಕರು ಪರದಾ ಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕೂಡಿಗೆಯ ಕೃಷಿ ಕ್ಷೇತ್ರದ ಆವರಣಕ್ಕೆ ತೆರಳುವ ಮುಖ್ಯ ಕೇಂದ್ರ ಹಾಗೂ ಕೂಡಿಗೆ, ಕೂಡು ಮಂಗಳೂರು, ಕುಶಾಲನಗರಕ್ಕೆ ತೆರಳುವ ಮುಖ್ಯ ರಸ್ತೆಯ ಕೇಂದ್ರ ಸ್ಥಾನವಾಗಿದೆ.

ಜನಬಳಕೆ ಹಾಗೂ ಜಿಲ್ಲೆಯ 22 ಅಧಿಕಾರಿಗಳ ಕಚೇರಿ, ರಾಜ್ಯದ ಪ್ರತಿಷ್ಠಿತ ಕ್ರೀಡಾಶಾಲೆ, ಜಿಲ್ಲೆಯ ಹಿರಿಮೆಯ ಸೈನಿಕ ಶಾಲೆ, ರಾಜ್ಯದಲ್ಲೇ ಪ್ರಪ್ರಥಮವಾಗಿ ಸ್ಥಾಪನೆ ಗೊಂಡ ಡೈರಿ ಘಟಕ, ಅಂತರ ರಾಷ್ಟ್ರೀಯ ಹಸುಗಳ ಸಂವರ್ಧನಾ ಕೇಂದ್ರಕ್ಕೆ ಸಂಬಂಧಿಸಿದಂತೆ ಜರ್ಸಿ ತಳಿ ಸಂವರ್ಧನಾ ಕೇಂದ್ರ, ಇದರ ಜೊತೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಜಿಲ್ಲಾ ಶಿಕ್ಷಕರ ತೆರಬೇತಿ ಸಂಸ್ಥೆ, ಮೊರಾರ್ಜಿ ವಸತಿ ಶಾಲೆ, ಅಂತರರಾಷ್ಟ್ರೀಯ ಕಾಫಿ ಸಂಸ್ಕರಣಾ ಘಟಕ ಸೇರಿದಂತೆ ವಿವಿಧ ಘಟಕಗಳನ್ನು ಒಳಗೊಂಡಿರುವ ಈ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಡೈರಿ ಸರ್ಕಲ್‍ಗೆ ದಿನಂಪ್ರತಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತರಬೇತಿಗೆ ಹಾಗೂ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ವಿವಿಧ ಮೂಲೆಗಳಿಂದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕ, ಶಿಕ್ಷಕಿಯರು ಬರುತ್ತಾರೆ. ಸರ್ಕಲ್ ಸಮೀಪದಲ್ಲಿರುವ ಬಸ್ ತಂಗುದಾಣದಲ್ಲಿ ದಿನಂಪ್ರತಿ ನೂರಾರು ವಾಹನಗಳಲ್ಲಿ ಬರುವ ಮತ್ತು ತೆರಳುವವರು ಇರುತ್ತಾರೆ. ಇಷ್ಟೆಲ್ಲಾ ಇಲಾಖೆಗಳು, ಸಾರ್ವಜನಿ ಕರು ದಿನಂಪ್ರತಿ ವ್ಯವಹಾರಗಳು ನಡೆಯುವ ಕೈಗಾರಿಕ ಘಟಕಗಳ ಮುಖ್ಯ ಕೇಂದ್ರವಾಗಿರುವ ಈ ಸರ್ಕಲ್‍ನಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಸಾರ್ವಜನಿಕರು ದಿನಂಪ್ರತಿ ಪರದಾಡುವಂತಹ ಪ್ರಸಂಗ ಎದುರಾಗುತ್ತಿದೆ. ಗ್ರಾಮ ಪಂಚಾಯಿತಿ ವತಿಯಿಂದ ಮಾಸಿಕ ಸಭೆ ಮತ್ತು ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಈ ಬಗ್ಗೆ ಚರ್ಚಿಸಿದಾಗ ಹಾರಿಕೆಯ ಉತ್ತರಗಳನ್ನು ಸಾರ್ವಜನಿಕರಿಗೆ ನೀಡುತ್ತಾ ಬಂದಿದ್ದಾರೆ. ಆಸ್ಪತ್ರೆ ಮತ್ತು ಡೈರಿಯ ತಡೆಗೋಡೆಯೇ ಸಾರ್ವಜನಿಕರ ಶೌಚಾಲಯವಾಗಿದೆ. ದಿನಂಪ್ರತಿ ಆಗಮಿಸುವ ಸಾರ್ವಜನಿಕರು ಶೌಚಾಲಯವಿಲ್ಲದ ಕಾರಣ ಈ ತಡೆಗೋಡೆಗಳನ್ನೇ ಆಶ್ರಯಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿ ದಂತೆ ಮಾಸಿಕ ಸಭೆಯಲ್ಲಿ ಚರ್ಚಿಸಿ ದರೂ ಅಭಿವೃದ್ಧಿಗೆ ಅಧಿಕಾರಿಯ ಸ್ಪಂದನ ದೊರೆಯುತ್ತಿಲ್ಲ. ಕೆಲವು ಉದ್ದಿಮೆ ಘಟಕದ ಮುಖ್ಯಸ್ಥರು ಹಾಗೂ ಸ್ವಚ್ಛ ಭಾರತ್ ಅಡಿಯಲ್ಲಿ ಮುಂದಾಗಿದ್ದಾರೆ. ಗ್ರಾಮ ಪಂಚಾಯಿತಿ ಸ್ಪಂದಿಸಿ ಕಾರ್ಯೋ ನ್ಮುಖರಾಗಬೇಕೆಂದು ಗ್ರಾ.ಪಂ. ಸದಸ್ಯೆ ಫಿಲೋಮಿನಾ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಯೋಜಯಡಿಯಲ್ಲಿ ವಿವಿಧ ಯೋಜನೆಗಳನ್ನು ಕೈಗೊಂಡರೂ, ಬಯಲು ಮುಕ್ತ ಶೌಚಾಲಯ ಗ್ರಾಮವಾಗಿಸುವ ಯೋಜನೆಗಳು ಜಾರಿಗೆ ಬಂದರೂ ಈ ಗ್ರಾಮ ಪಂಚಾಯಿತಿಗೆ ತಿಳಿದಿದ್ದರೂ ಸಾರ್ವಜನಿಕರಿಗೆ ಅನುಕೂಲ ವಾಗುವ ಈ ಯೋಜನೆಗೆ ಮುಂದಾಗದಿರುವದು ವಿಪರ್ಯಾಸ.

- ಕೆ.ಕೆ. ನಾಗರಾಜ ಶೆಟ್ಟಿ.