ಮಡಿಕೇರಿ, ಸೆ. 21: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹದಿನೈದು ಅಕಾಡೆಮಿಗಳು ಹಾಗೂ ಎರಡು ಪ್ರಾಧಿಕಾರಗಳ ಸಮ್ಮಿಲನ ‘ಸಂಗಮ-ಸಂಭ್ರಮ- 2016’ ಎಂಬ ಸಾಂಸ್ಕøತಿಕ ಸಾಮರಸ್ಯ ಕಾರ್ಯಕ್ರಮ ಏರ್ಪಾಡು ಮಾಡಲಾಗಿತ್ತು. ತಾ. 24 ರಿಂದ ಆರಂಭಗೊಂಡು ತಾ. 28ರವರೆಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಎಲ್ಲಾ ಪೂರ್ವ ತಯಾರಿ ಮಾಡಿಕೊಳ್ಳಲಾಗಿತ್ತು. ತಾ. 24 ರಂದು ಚಿತ್ರಕಲಾ ಶಿಬಿರದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲು ತೀರ್ಮಾನಿಸಲಾಗಿತ್ತು. ತಾ. 27 ಹಾಗೂ 28ರಂದು ಉದ್ಘಾಟನೆ, ಸಭಾ ಕಾರ್ಯಕ್ರಮ, ವಸ್ತು- ಪುಸ್ತಕ ಪ್ರದರ್ಶನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು.

ಅದರೆ, ಇದೀಗ ರಾಜ್ಯದಲ್ಲಿ ಕಾವೇರಿ ವಿವಾದ ಇರುವದರಿಂದ ಇಂತಹ ಪರಿಸ್ಥಿತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವದು ಸೂಕ್ತವಲ್ಲ ಎಂಬ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರ ನಿರ್ದೇಶನದ ಮೇರೆಗೆ ಹಾಗೂ ಎಲ್ಲ್ಲಾ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಸಲಹೆ ಮೇರೆಗೆ ಕಾರ್ಯಕ್ರಮವನ್ನು ಮುಂದೂಡುವಂತೆ ತೀರ್ಮಾನಿಸಲಾಗಿದೆ.

ಉಭಯ ಅಕಾಡೆಮಿಗಳ ಅಧ್ಯಕ್ಷರುಗಳಾದ ಬಿದ್ದಾಟಂಡ ತಮ್ಮಯ್ಯ ಹಾಗೂ ಕೊಲ್ಯದ ಗಿರೀಶ್ ಅವರುಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಡಾ. ಮೇಚಿರ ಸುಭಾಷ್ ನಾಣಯ್ಯ, ಪಡಿಞರಂಡ ಅಯ್ಯಪ್ಪ, ಕುಡಿಯರ ಬೋಪಯ್ಯ, ಮಾದೇಟಿರ ಬೆಳ್ಯಪ್ಪ, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಮಂದ್ರಿರ ಮೋಹನ್‍ದಾಸ್, ಮದುವೆಗದ್ದೆ ಬೋಜಪ್ಪ, ಬಾಕಿಲನ ವಸಂತ, ಪುಂಡಿಗದ್ದೆ ಕಾರ್ಯಪ್ಪ, ಸದಾನಂದ ಮಾವಾಜಿ, ಯಶವಂತ ಕುಡೆಕಲ್, ಕುಡೆಕಲ್ ಸಂತೋಷ್ ಪಾಲ್ಗೊಂಡಿದ್ದರು ಎಂದು ಪ್ರಚಾರ ಸಮಿತಿ ಸಂಚಾಲಕರುಗಳಾದ ಮಾದೇಟಿರ ಬೆಳ್ಯಪ್ಪ, ಕುಡೆಕಲ್ ಸಂತೋಷ್ ಅವರುಗಳು ತಿಳಿಸಿದ್ದಾರೆ.