ವೀರಾಜಪೇಟೆ, ಆ. 2: ಕಟ್ಟಡ ಕಾರ್ಮಿಕರು ಸಂಘಟಿತರಾಗಿ ತಮಗೆ ಸಿಗುವ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು ಎಂದು ಹಿರಿಯ ಕಾರ್ಮಿಕರ ಮುಖಂಡ ಡಾ. ಐ.ಆರ್. ದುರ್ಗಾಪ್ರಸಾದ್ ಹೇಳಿದರು. ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ನಗರ ಸಮಿತಿಯಿಂದ ಪಟ್ಟಣದ ದೊಡ್ಡಟ್ಟಿ ಚೌಕಿಯಲ್ಲಿ ಕಾರ್ಮಿಕರ ಸದಸ್ಯತ್ವ ನೋಂದಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ದೇಶದಲ್ಲಿ ಲಕ್ಷಾಂತರ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಯಾವದೇ ಭದ್ರತೆ ಇಲ್ಲದೆ ಇಂದಿಗೂ ದುಡಿಯುತ್ತಿದ್ದಾರೆ ಈ ಎಲ್ಲಾ ರಂಗದ ಕಾರ್ಮಿಕರನ್ನು ಸಂಘಟಿಸುವ ಕೆಲಸವನ್ನು ಸಿ.ಐ.ಟಿ.ಯು. ಸಂಘಟನೆ ಮಡುತ್ತಿದೆ ಎಂದರು.ಕಟ್ಟಡ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಜಿಲ್ಲಾ ಸಮಿತಿಯ ಎ.ಸಿ. ಸಾಬು ಮಾತನಾಡಿ, ಬಡ ಕಾರ್ಮಿಕರ ವರ್ಗಕ್ಕೆ ವಾಸಿಸಲು ಮನೆ ಇಲ್ಲದಂತಾಗಿದೆ. ದೇಶದ ಬೆನ್ನೆಲುಬು ಅಗಿರುವ ಕಾರ್ಮಿಕರ ಬಗ್ಗೆ ಸರ್ಕಾರ ಗಮನಹರಿಸಿ ಸಿಗುವ ಸೌಲಭ್ಯಗಳನ್ನು ಕಾರ್ಮಿಕರಿಗೆ ಒದಗಿಸಿ ಕೊಡಬೇಕಾಗಿದೆ ದಿನನಿತ್ಯ ಉಪಯೋಗಿಸುವ ಪದಾರ್ಥಗಳ ಬೆಲೆ ಗಗನಕ್ಕೇರಿದ್ದು. ಕಾರ್ಮಿಕರು ಕೆಲಸ ಮಾಡಲು ಮರಳಿನ ಕೊರತೆ ಇದೆ ಮುಂದಿನ ದಿನದಲ್ಲಿ ಸಂಘಟನೆಯನ್ನು ಬಲಪಡಿಸಿ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಸಂಘಟನೆಯ ನಗರ ಸಮಿತಿ ಅಧ್ಯಕ್ಷ ಹೇಮಂತ್, ಕಾರ್ಯದರ್ಶಿ ಕೆ.ಎಸ್. ರತೀಶ್, ಖಾಸೀಂ, ಆರ್. ನಾರಾಯಣ, ಎಸ್. ಚಂದ್ರಶೇಖರ್, ಮರಿಸ್ವಾಮಿ, ಎಂ. ಸುಬ್ರಮಣಿ, ಹರಿದಾಸ್, ಇತರ ಕಾರ್ಮಿಕರುಗಳಿದ್ದರು.