ಮಡಿಕೇರಿ, ಸೆ. 16: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮರಗೋಡು ಗೌಡ ಸಮಾಜದ ಸಹಯೋಗ ದೊಂದಿಗೆ ತಾ. 13 ರಿಂದ ಹಮ್ಮಿಕೊಳ್ಳ ಲಾಗಿರುವ ಅರೆಭಾಷೆ ಸಂಸ್ಕøತಿಯಲ್ಲಿ ಸಾಂಪ್ರದಾಯಿಕ ಅಡುಗೆ ತರಬೇತಿ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ತಾ. 18 ರಂದು ಬೆಳಿಗ್ಗೆ 10.30 ಗಂಟೆಗೆ ಮರಗೋಡು ಗೌಡ ಸಮಾಜದಲ್ಲಿ ನಡೆಯಲಿದೆ.
ಶಾಸಕ ಕೊಂಬಾರನ ಬೋಪಯ್ಯ ಉದ್ಘಾಟನೆ ಮಾಡುವರು. ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕರಾದ ಮಂಡೇಪಂಡ ಅಪ್ಪಚ್ಚು ರಂಜನ್, ಶಾಂತೆಯಂಡ ವೀಣಾ ಅಚ್ಚಯ್ಯ, ಮಂಡೇಪಂಡ ಸುನಿಲ್ ಸುಬ್ರಮಣಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿರುವರು. ಸಾಂಪ್ರದಾಯಿಕ ಅಡುಗೆ ನಾಳೆ ಸಮಾರೋಪ ಈ ಸಂಬಂಧ ಬೆಳಿಗ್ಗೆ 9.30ಕ್ಕೆ ಸಾಂಪ್ರದಾಯಿಕ ಮೆರವಣಿಗೆ ಏರ್ಪಡಿಸಿದ್ದು, ಗೌಡ ಸಮಾಜದ ಅಧ್ಯಕ್ಷ ದೇವಜನ ನಾಣಯ್ಯ ಉದ್ಘಾಟಿಸುವರು. ಸಾಂಪ್ರದಾಯಿಕ ಅಡುಗೆ ಪ್ರದರ್ಶನವನ್ನು ಜೀ ಕನ್ನಡ ವಾಹಿನಿ ಒಗ್ಗರಣೆ ಡಬ್ಬಿ ಕಾರ್ಯಕ್ರಮದ ಮುರಳಿ ಉದ್ಘಾಟಿಸುವರು. ಮಧ್ಯಾಹ್ನ 2 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಗೌಡ ಸಮಾಜದ ಮಾಜಿ ಅಧ್ಯಕ್ಷ ಪಣಿಕಂಡ್ರ ಭೀಮಯ್ಯ ಉದ್ಘಾಟಿಸುವರು.