ನಾಪೆÇೀಕ್ಲು, ಡಿ. 24: ಸತತ ಅಭ್ಯಾಸ ಮತ್ತು ಕಠಿಣ ಪರಿಶ್ರಮವಿದ್ದರೆ ಸಾಧನೆ ಸುಲಭ ಎಂದು ಮಾಜಿ ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಅಭಿಮನ್ಯು ಅಕಾಡೆಮಿ ಸ್ಥಾಪಕ ತೀತಮಾಡ ಅರ್ಜುನ್ ದೇವಯ್ಯ ಹೇಳಿದರು.

ಸ್ಥಳೀಯ ಅಂಕುರ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಬಹು ಮಂದಿ ಸಾಧನೆಯ ಬೆನ್ನೇರುವದು ಕಷ್ಟ ಎಂಬ ಕಾರಣಕ್ಕೆ ತಮ್ಮ ಪ್ರತಿಭೆಯನ್ನು ತಮ್ಮೊಳಗೆ ಚಿವುಟಿ ಹಾಕುವ ಕಾರ್ಯ ಮಾಡುತ್ತಿದ್ದಾರೆ. ಆದರೆ ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಆ ಕ್ಷೇತ್ರದಲ್ಲಿ ಅವರಿಗೆ ಉತ್ತಮ ಮಾರ್ಗದರ್ಶನ ನೀಡಿದರೆ ಸಾಧನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಯಾವದೇ ಕೆಲಸ ಮಾಡಬೇಕಾದರೂ ಅದರ ಬಗ್ಗೆ ಮನಸ್ಸು ಕೇಂದ್ರೀಕೃತವಾಗಿರಬೇಕು. ಇಲ್ಲವಾದರೆ ಕೆಲಸ ಸಾಧ್ಯವಿಲ್ಲ. ಉನ್ನತ ನೌಕರಿಗಿಂತ ಮನಸ್ಸಿಗೆ ನೆಮ್ಮದಿ ನೀಡುವ ಸೂಕ್ತವಾದ ನೌಕರಿ ಪಡೆಯಬೇಕು ಎಂದು ಹೇಳಿದರು.

ಬರೀ ಅಂಕಗಳ ಗಳಿಕೆಯಿಂದ ಉನ್ನತ ಸ್ಥಾನ ಸಾಧ್ಯವಿಲ್ಲ. ಈ ಬಗ್ಗೆ ಪೆÇೀಷಕರಲ್ಲಿ ತಪ್ಪು ಅಭಿಪ್ರಾಯ ಕಂಡು ಬರುತ್ತಿದೆ. ಮಕ್ಕಳ ಪ್ರತಿಭೆಯ ಹಾದಿಯನ್ನು ಗುರುತಿಸಿ ಮುನ್ನಡೆಸಿದರೆ ಮಾತ್ರ ಉನ್ನತ ಸ್ಥಾನ ಸಾಧ್ಯ ಎಂದರು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಶಾಲಾ ಟ್ರಸ್ಟಿ ಕರುಂಬಯ್ಯ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷ ಕೇಟೋಳಿರ ರಾಜಾ ಚರ್ಮಣ್ಣ ವಹಿಸಿದ್ದರು. ಪ್ರಾಂಶುಪಾಲೆ ಕೇಟೋಳಿರ ರತ್ನಾ ಚರ್ಮಣ್ಣ, ಹಿರಿಯ ಶಿಕ್ಷಕಿ ಬೊಳ್ಯಪಂಡ ಆಶಾ ಬೋಪಣ್ಣ, ಶಿಕ್ಷಕ ವೃಂದ ಇದ್ದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಾಂಸ್ಕøತಿಕ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.