ಮಡಿಕೇರಿ, ಜೂ. 19: ಪ್ರಸಕ್ತ (2016-17) ಸಾಲಿಗೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ 16 ರಿಂದ 35 ವರ್ಷದೊಳಗಿನ ಯುವಕ-ಯುವತಿಯರಿಗಾಗಿ ರಿವರ್ ರ್ಯಾಫ್ಟಿಂಗ್, ವೈಟ್‍ವಾಟರ್ ರ್ಯಾಫ್ಟಿಂಗ್, ಟ್ರಕ್ಕಿಂಗ್, ಪ್ರಕೃತಿ ಅಧ್ಯಯನ ಶಿಬಿರ, ಓರಿಯಂಟೇಷನ್, ಬೇಸಿಕ್ ಹಾಗೂ ಅಡ್ವಾನ್ಸ್ ತರಬೇತಿ ಶಿಬಿರಗಳನ್ನು ಜಲಸಾಹಸ ಹಾಗೂ ಭೂ ಸಾಹಸ ಕ್ರೀಡೆಗಳಲ್ಲಿ ಜುಲೈ-2016 ರಿಂದ ಸೆಪ್ಟೆಂಬರ್-2016 ರವರೆಗೆ ಹಮ್ಮಿಕೊಳ್ಳಲಾಗಿದೆ.ಕೊಡಗು ಜಿಲ್ಲೆಯಿಂದ ಭೂ ಸಾಹಸ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿಗಳನ್ನು ಕಚೇರಿಯಿಂದ ಪಡೆದು ತಾ. 24 ರೊಳಗಾಗಿ ಕಚೇರಿ ವೇಳೆಯಲ್ಲಿ ಸಲ್ಲಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08272-228985 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ತಿಳಿಸಿದ್ದಾರೆ.