ಗೋಣಿಕೊಪ್ಪಲು, ಡಿ. 4: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಪ್ರೌಢ ಬಾಲಕರ ಸಿ.ಎ. ಪೂವಯ್ಯ ಜ್ಞಾಪಕಾರ್ಥ ಹಾಕಿ ಟೂರ್ನಿಯಲ್ಲಿ ಪೊನ್ನಂಪೇಟೆ ಪ್ರೌಢಶಾಲಾ ತಂಡ ಸೆಮಿಫೈನಲ್ ಪ್ರವೇಶ ಪಡೆದಿದೆ.

ಅರಮೇರಿ ಎಸ್‍ಎಂಎಸ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿದ ಪೊನ್ನಂಪೇಟೆ ತಂಡ ಸೆಮಿಫೈನಲ್‍ಗೆ ಪ್ರವೇಶ ಪಡೆಯಿತು. ಪೊನ್ನಂಪೇಟೆ ಪರ 32 ಹಾಗೂ 37ನೇ ನಿಮಿಷದಲ್ಲಿ ರಕ್ಷಿತ್, 38ರಲ್ಲಿ ಧ್ಯಾನ್ ಗೋಲು ಹೊಡೆದರು.

ಮೊದಲ ಸುತ್ತಿನ ಪಂದ್ಯದಲ್ಲಿ ಪೊನ್ನಂಪೇಟೆ ತಂಡವು ಕಾಪ್ಸ್ ತಂಡವನ್ನು 5-0 ಗೋಲುಗಳಿಂದ ಮಣಿಸಿ ಕ್ವಾರ್ಟರ್ ಫೈನಲ್‍ಗೆ ಪೊನ್ನಂಪೇಟೆ ಪ್ರವೇಶ ಪಡೆಯಿತು. ಈ ಪಂದ್ಯದಲ್ಲಿ ಧ್ಯಾನ್ 2 ಮತ್ತು 32ನೇ ನಿಮಿಷಗಳಲ್ಲಿ 2 ಗೋಲು ಹೊಡೆದರು. 17ರಲ್ಲಿ ರಕ್ಷಿತ್, 34ರಲ್ಲಿ ಆಶಿತ್ ಗೋಲು ಹೊಡೆದರು.