ಮಡಿಕೇರಿ, ನ. 20: ನಮ್ಮ ದೇಶ ಭವ್ಯ ಪರಂಪರೆ, ಆಚಾರ-ವಿಚಾರಗಳನ್ನು ಹೊಂದಿದ್ದು, ನಮ್ಮ ಪ್ರಾಚೀನ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಗುರು-ಶಿಷ್ಯ ಪರಂಪರೆಯಂತಹ ಕಾರ್ಯಕ್ರಮಗಳು ಅವಶ್ಯಕ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಲ್.ಎನ್. ಕುಳ್ಳಯ್ಯ ತಿಳಿಸಿದರು.

ತಿತಿಮತಿ ಗಿರಿಜನ ವಿವಿಧೋದ್ದೇಶ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಏರ್ಪಡಿಸ ಲಾಗಿದ್ದ ಗುರು-ಶಿಷ್ಯ ಪರಂಪರೆ ಯೋಜನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರ ಪ್ರದೇಶಗಳಿಗೆ ಹೋಲಿಸಿದರೆ ನಮ್ಮ ಹಳ್ಳಿಗಾಡಿನಲ್ಲಿ ಅನೇಕ ಕಲೆಗಳು ಇಂದಿಗೂ ಜೀವಂತವಾಗಿದೆ. ನಮ್ಮ ಹಳ್ಳಿಗಳಲ್ಲಿ ಉತ್ತಮ ಪರಿಸರ ಪ್ರಕೃತಿ ಹವಾಮಾನ ಕಲೆಗೆ ಪ್ರೋತ್ಸಾಹ ಕೊಡಲು ಪೂರಕವಾದ ವಾತಾವರಣವಿದೆ ಎಂದರು.

ಮುಖ್ಯ ಅತಿಥಿ ವೆಂಕಟೇಶ್ ಮಾತನಾಡಿ, ಗಿರಿಜನರಲ್ಲಿ ವಿಶಿಷ್ಟವಾದ ಸಂಸ್ಕøತಿ ಇದ್ದು ಅವುಗಳನ್ನು ದಾಖಲೀಕರಣ ಮಾಡಬೇಕು. ಹಾಗಾದಾಗ ಮಾತ್ರ ಮುಂದಿನ ಪೀಳಿಗೆಗೆ ಹಾಗೂ ಮುಂದಿನ ಸಮಾಜಕ್ಕೆ ಸಂಸ್ಕøತಿಯನ್ನು ಪರಿಚಯಿಸಲು ಸಾಧ್ಯ ಎಂದರು.

ಸಭಾಧ್ಯಕ್ಷತೆ ವಹಿಸಿದ ಗಿರಿಜನ ಮುಖಂಡ ಹಾಗೂ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಜೆ.ಕೆ. ರಾಮು ಮಾತನಾಡಿ, ಹಿಂದೆ ಬಳಸುತ್ತಿದ್ದ ಆಹಾರ ಪದ್ಧತಿಯಾಗಲಿ, ಮೂಲ ಸಂಸ್ಕøತಿಯಾಗಲಿ ಇಂದು ಮರೆಯಾಗುತ್ತಿದೆ. ನಿಜವಾದ ಸಂಸ್ಕøತಿ ಕಲೆ ಉಳಿಯಬೇಕು. ಇಂದು ಗಿರಿಜನರಲ್ಲಿ ಬೆಟ್ಟಕುರುಬ, ಜೇನುಕುರುಬ, ಯರವ, ಪಶಿರು ಮುಂತಾದ ಜನಾಂಗದವರಲ್ಲಿ ಇರುವ ಸಂಸ್ಕøತಿ ಅದ್ಭುತ. ಸಿನಿಮಾ ರಂಗದಲ್ಲಿ ನಮ್ಮ ಸಂಸ್ಕøತಿಯನ್ನು ನಕಲು ಮಾಡಲಾಗುತ್ತಿದ್ದು, ಇದರಿಂದಾಗಿ ಮೂಲ ಸಂಸ್ಕøತಿಗೆ ಧಕ್ಕೆಯಾಗುತ್ತಿದೆ ಎಂದರು.

ಪ್ರಾಸ್ತಾವಿಕ ನುಡಿಯಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್ ನಮ್ಮಲ್ಲಿ ಬೇರೂರಿರುವ ಸಂಸ್ಕøತಿಯನ್ನು ಪರಿಚಯಿಸಲೆಂದು ಗುರು-ಶಿಷ್ಯ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶಾಂತಮ್ಮ ಇಂದಿರಾ, ಜೆ.ಸಿ. ರಾಜು, ಜೆ.ಕೆ. ರಾಜು ದೇವರಪುರ ಗ್ರಾಮ ಪಂಚಾಯಿತಿ ಸದಸ್ಯ ರಾಜು ಇದ್ದರು.