ಸುಂಟಿಕೊಪ್ಪ, ಆ. 19: ಗ್ರಾಮೀಣ ಪ್ರದೇಶಗಳಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನತೆಯ ಸಹಕಾರದಿಂದ ರಾಷ್ಟ್ರಮಟ್ಟದಲ್ಲಿ ಕರ್ಣಾಟಕ ಬ್ಯಾಂಕ್ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಕರ್ಣಾಟಕ ಬ್ಯಾಂಕ್‍ನ ಆಡಳಿತ ನಿರ್ದೇಶಕ ಪಿ. ಜಯರಾಮ್ ಭಟ್ ಹೇಳಿದರು.
ಮಾದಾಪುರ ರಸ್ತೆಯಲ್ಲಿರುವ ಸುಂಟಿಕೊಪ್ಪ ಶಾಖೆಯ ನೂತನ ಸ್ವಂತ ಕಟ್ಟಡದ (ಎಟಿಎಂ) ಸೌಲಭ್ಯದೊಂದಿಗೆ ಉದ್ಘಾಟಿಸಿ ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಮಂಟಪದಲ್ಲಿ ಗ್ರಾಹಕರ ಸಮಾವೇಶ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕರ್ಣಾಟಕ ಬ್ಯಾಂಕ್ ಕಳೆದ 58 ವರ್ಷಗಳ ಹಿಂದೆ ಗ್ರಾಮೀಣಾ ಪ್ರದೇಶಗಳಲ್ಲಿ ಕಾರ್ಯಾ ಚರಿಸುತ್ತಿರುವಂತೆ ಊರಿನ ಮುತ್ಸದಿ, ದಾನಿಗಳಾದ ಮಂಜುನಾಥಯ್ಯ ಅವರ ಕನಸ್ಸಿನಂತೆ ಸುಂಟಿಕೊಪ್ಪದಲ್ಲಿ ಕರ್ಣಾಟಕ ಬ್ಯಾಂಕಿನ 14ನೇ ಶಾಖೆಯನ್ನು ಅಂದಿನ ದಿನಗಳಲ್ಲಿ ತೆರೆಯಲಾಗಿದ್ದು ಇಂದು ಕರ್ಣಾಟಕ ಬ್ಯಾಂಕ್ ದೇಶವ್ಯಾಪಿ 733 ಶಾಖೆಗಳನ್ನು ಹೊಂದಿದ್ದು ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ 456 ಶಾಖೆಗಳನ್ನು ಹೊಂದಿ ಗುರಿ ಸಾಧಿಸಿದೆ. ಗ್ರಾಮೀಣ ಭಾಗದ ಜನತೆಯು ನಿರಖು ಠೇವಣಿಗಳನ್ನು ಹೂಡುವ ಮೂಲಕ ಗ್ರಾಹಕರು ಉಳಿತಾಯ ಖಾತೆಗಳನ್ನು ಇಡಲಾಗಿದ್ದು ಕರ್ಣಾಟಕ ಬ್ಯಾಂಕ್‍ಗೆ ಗ್ರಾಮೀಣ ಆದಾಯ ದೊರೆಯುತ್ತಿದೆ ಎಂದರು. ಕರ್ಣಾಟಕ ಬ್ಯಾಂಕಿನ ಮುಖ್ಯ ಮಹಾ ಪ್ರಬಂಧಕರು ಎಂ.ಎಸ್. ಮಹಾಬಲೇಶ್ ಭಟ್ ಬ್ಯಾಂಕ್ ಸ್ಥಾಪನೆ, ನಡೆದು ಬಂದ ಸಾಧನೆಯ ಹಾದಿ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿ.ಎಲ್. ರಮೇಶ್, ಕೆ.ಡಿ. ರಾಮಯ್ಯ, ಎಂ.ಎ. ವಸಂತ್, ಬ್ಯಾಂಕಿನ ಸವಲತ್ತುಗಳು ಹಾಗೂ ಸೇವೆಯ ಬಗ್ಗೆ ಪ್ರಸಂಶೆಯ ನುಡಿಗಳನ್ನಾಡಿದರು.
ಸಮಾರಂಭದ ವೇದಿಕೆಯಲ್ಲಿ ಉಪಮಹಾ ಪ್ರಬಂಭಕ ಮುರಳೀಧರ್ ಕೃಷ್ಣರಾವ್, ಬೆಂಗಳೂರು ವಲಯ ಉಪ ಮಹಾಪ್ರಬಂಧಕ ಗೋಕುಲ ದಾಸ ಪೈ, ಎಕೌಂಟ್ಸ್ ವಿಭಾಗದ ಸಹಾಯಕ ಮಹಾಪ್ರಬಂಧಕ ಕೆ.ಆರ್. ಜಗದೀಶ್ ಮೈಸೂರು ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಬಿ.ಎಸ್. ರಾಮಚಂದ್ರ ಮುಖ್ಯ ವ್ಯವಸ್ಥಾಪಕರಾದ ಡಿ.ಇ. ರವಿಕುಮಾರ್, ಎ.ಎ. ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.
ಕಟ್ಟಡ ಗುತ್ತಿಗೆದಾರ, ವಿನ್ಯಾಸಕರನ್ನು, ಸಹಕರಿಸಿದವರನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸ ಲಾಯಿತು. ಪ್ರಥಮ ಖಾತೆದಾರರಾದ ಕೊರಗಪ್ಪ ಸೇರಿದಂತೆ ಇನ್ನಿತರರ ಖಾತೆದಾರರನ್ನು ಸನ್ಮಾನಿಸಲಾಯಿತು. ಮೋಹನ್ ಪ್ರಾರ್ಥಿಸಿ, ಬಿ.ಎಸ್. ರಾಮಚಂದ್ರ ಸ್ವಾಗತಿಸಿ, ಸುಂಟಿಕೊಪ್ಪ ಶಾಖಾಧಿಕಾರಿ ನಾಗಭೂಷಣ್ ವಂದಿಸಿದರು.