ನಾಪೆÇೀಕ್ಲು, ಜೂ. 17: ದೇವಟ್ ಪರಂಬು ಸ್ಮಾರಕ ವಿವಾದವನ್ನು ಎಲ್ಲರೂ ಸೇರಿ ಒಮ್ಮತದಿಂದ ಇತ್ಯರ್ಥಗೊಳಿಸಿ ಕೊಡಗಿನ ಎಲ್ಲಾ ಜಾತಿ, ಧರ್ಮದ ಜನ ಅನ್ಯೋನ್ಯವಾಗಿ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಗೆ ಲಿಖಿತ ಹೇಳಿಕೆ ನೀಡಿರುವ ಅವರು, ಇದಕ್ಕೆ ಜಿಲ್ಲೆಯ ಶಾಸಕರು, ಕೊಡವ ಸಮಾಜದ ಅಧ್ಯಕ್ಷರು, ಗೌಡ ಸಮಾಜದ ಅಧ್ಯಕ್ಷರು ಹಾಗೂ ವಿವಿಧ ಸಮಾಜಗಳ ಮುಖಂಡರು, ಸಂಘ-ಸಂಸ್ಥೆಗಳ ಮುಖಂಡರೊಂದಿಗೆ ಒಟ್ಟಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇದು ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಯತ್ನದಿಂದ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. ವಿಧಾನ ಸಭಾಧ್ಯಕ್ಷರಾಗಿಯೂ ಹಾಗೂ ಶಾಸಕರಾಗಿಯೂ ಕೊಡಗಿನ ಹಲವು ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿದ ಅವರಿಗೆ ಇದು ಕೂಡ ಸಾಧ್ಯವಿದೆ. ಈ ಸಮಸ್ಯೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕೊಡಗಿನ ಜನತೆ ಶಾಂತಿಯಿಂದ ಬಾಳಲು ಅನುವು ಮಾಡಿಕೊಡಬೇಕು ಎಂದು ಅವರು ಶಾಸಕರಲ್ಲಿ ಕೋರಿದ್ದಾರೆ.