ಪೊನ್ನಂಪೇಟೆ, ಆ. 25: ವಿಶೇಷ ಮಕ್ಕಳ ಬಗ್ಗೆ ಕೇವಲ ಅನುಕಂಪ ಹೊಂದಿದ್ದರೆ ಅವರ ಬದುಕು ಹಸನಾಗುವದಿಲ್ಲ. ಅವರ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಸಾಮಾಜಿಕ ಹೊಣೆಗಾರಿಕೆ ಎಲ್ಲಾ ಪ್ರಜ್ಞಾವಂತ ನಾಗರಿಕರಿಗಿದೆ.

ಆದ್ದರಿಂದ ವಿಶೇಷ ಮಕ್ಕಳ ಬಗ್ಗೆ ಅನುಕಂಪಕ್ಕಿಂತ ಸಮಾಜದ ಕಾಳಜಿ ಅತಿ ಮುಖ್ಯ ಎಂದು ಪೊನ್ನಂಪೇಟೆಯ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಚೀರಂಡ ಜ್ಯೋತಿ ಪೊನ್ನಪ್ಪ ಹೇಳಿದ್ದಾರೆ.

ಗೋಣಿಕೊಪ್ಪಲು ಸಮೀಪದ ದೇವರಪುರದಲ್ಲಿರುವ ಅಮೃತವಾಣಿ ವಿಶೇಷ ಮಕ್ಕಳ ಶಾಲೆಯಲ್ಲಿ 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ನಿಮ್ಮೊಂದಿಗೆ ನಾವು’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದÀರು.

ಕಾರ್ಯಕ್ರಮದ ಭಾಗವಾಗಿ ಶಾಲೆಯ ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಇದೇ ಸಂದರ್ಭ ವಿಶೇಷ ಶಾಲೆಯ ಮಕ್ಕಳಿಗೆ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಪುಸ್ತಕ, ಪೆನ್ನು ಸೇರಿದಂತೆ ವಿವಿಧ ಕ್ರೀಡಾ ಪರಿಕರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆ.ಫಾದರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಮೃತವಾಣಿ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಲೀನ, ಪೊನ್ನಂಪೇಟೆಯ ಯುವಶಕ್ತಿ ಯುವಕ ಸಂಘದ ಅಧ್ಯಕ್ಷÀ ರಾಮಕೃಷ್ಣ, ಸಲಹೆಗಾ ನಂದುನು ಮುತ್ತಣ್ಣ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು, ಶಾಲಾ ಶಿಕ್ಷಕರು ಹಾಜರಿದ್ದರು.