ಚೆಟ್ಟಳ್ಳಿ, ಮೇ 8: ಕೊಡಗಿನಲ್ಲಿ ಹಲವು ಜನಾಂಗಗಳು ಕ್ರೀಡಾಕೂಟವನ್ನು ನಡೆಸಿಕೊಂಡು ಬರುತ್ತಿದ್ದು ಇದರಿಂದ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದು ಶಾಸಕ ಅಪ್ಪಚ್ಚುರಂಜನ್ ಹೇಳಿದರು.
ಕರ್ನಾಟಕ ಆದಿವಾಸಿ ದ್ರಾವಿಡ ಮಂಡಲ ಹಾಗೂ ಕೊಡಗು ಜಿಲ್ಲೆಯ ಎಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಚೆಟ್ಟಳ್ಳಿಯ ಪೌಡಶಾಲಾ ಮೈದಾನದಲ್ಲಿ ಆದಿವಾಸಿ ಜನಾಂಗದ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಸುತ್ತಮುತ್ತಲ ಕಾಫಿ ತೋಟಗಳಲ್ಲಿ ದ್ರಾವಿಡ ಜನಾಂಗದವರೇ ಹೆಚ್ಚಾಗಿದ್ದು ಇಂತಹ ಕ್ರೀಡಾ ಕೂಟದಿಂದ ಒಟ್ಟು ಸೇರಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಓಂಕಾರಪ್ಪ, ಉಪಾಧ್ಯಕ್ಷ ಜನಾರ್ಧನ ಹಾಜರಿದ್ದರು.