ನಾಪೆÇೀಕ್ಲು, ಮೇ. 3: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ದೊಡ್ಡ ಪುಲಿಕೋಟು ಮುಕ್ಕಾಟಿರ ಕುಟುಂಬದ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ 17ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್‍ನ ಹದಿನಾರನೇ ದಿನದ ಪಂದ್ಯಾಟದಲ್ಲಿ ಮುಕ್ಕಾಟಿರ, ಕರವಂಡ, ಬೊಳ್ಳಚೆಟ್ಟಿರ, ಕಡೇಮಾಡ, ಕಾಣತಂಡ, ಮಂದನೆರವಂಡ, ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿವೆ.

ಪೂಳಂಡ ಮತ್ತು ಮುಕ್ಕಾಟಿರ (ಭೇತ್ರಿ) ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಮುಕ್ಕಾಟಿರ ತಂಡ 4 ವಿಕೆಟ್ ನಷ್ಟಕ್ಕೆ 67 ರನ್‍ಗಳಿಸಿ ಪೂಳಂಡ ತಂಡಕ್ಕೆ ಸವಾಲೊಡ್ಡಿತು. ಅದನ್ನು ಬೆನ್ನಟ್ಟಿದ ಪೂಳಂಡ ತಂಡ 6 ವಿಕೆಟ್ ನಷ್ಟಕ್ಕೆ 65 ರನ್‍ಗಳಿಸಿ ಸೋಲನ್ನೊಪ್ಪಿ ಕೊಂಡಿತು. ಕರವಂಡ ಮತ್ತು ಬಲ್ಲಚಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕರವಂಡ ತಂಡ 1 ವಿಕೆಟ್ ನಷ್ಟಕ್ಕೆ 37 ರನ್‍ಗಳಿಸಿತು. ಅದನ್ನು ಬೆನ್ನಟ್ಟಿದ ಬಲ್ಲಚಂಡ ತಂಡ 6 ವಿಕೆಟ್ ನಷ್ಟಕ್ಕೆ 33 ರನ್‍ಗಳಿಸಿ ಸೋಲನು ಭವಿಸಿತು. ಕನ್ನಿಗಂಡ ಮತ್ತು ಬೊಳ್ಳಚೆಟ್ಟಿರ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಬೊಳ್ಳಚೆಟ್ಟಿರ ತಂಡ 2 ವಿಕೆಟ್ ನಷ್ಟಕ್ಕೆ 73 ರನ್‍ಗಳಿಸಿ ಕನ್ನಿಗಂಡ ತಂಡಕ್ಕೆ ಸವಾಲೊಡ್ಡಿತು. ಅದನ್ನು ಬೆನ್ನಟ್ಟಿದ ಕನ್ನಿಗಂಡ ತಂಡ 3 ವಿಕೆಟ್ ನಷ್ಟಕ್ಕೆ 73 ರನ್‍ಗಳಿಸಿ ಪರಾಭವಗೊಂಡಿತು. ಹೊಟ್ಟೇಂಗಡ ಮತ್ತು ಕಡೇಮಾಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕಡೇಮಾಡ ತಂಡ 1 ವಿಕೆಟ್ ನಷ್ಟಕ್ಕೆ 66 ರನ್‍ಗಳಿಸಿತು. ಅದನ್ನು ಬೆನ್ನಟ್ಟಿದ ಹೊಟ್ಟೇಂಗಡ ತಂಡ 2 ವಿಕೆಟ್ ನಷ್ಟಕ್ಕೆ 55 ರನ್‍ಗಳಿಸಿ ಸೋಲೊಪ್ಪಿಕೊಂಡಿತು. ಅರಮಣ ಮಾಡ ಮತ್ತು ಕಾಣತಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕಾಣತಂಡ ತಂಡ 7 ವಿಕೆಟ್ ನಷ್ಟಕ್ಕೆ 61 ರನ್‍ಗಳಿಸಿತು. ಅದನ್ನು ಬೆನ್ನಟ್ಟಿದ ಅರಮಣಮಾಡ ತಂಡ 7 ವಿಕೆಟ್ ನಷ್ಟಕ್ಕೆ 28 ರನ್‍ಗಳಿಸಿ ಸೋಲನುಭವಿಸಿತು. ಮಂಡಂಗಡ ಮತ್ತು ಮಂದನೆರವಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಮಂದನೆರವಂಡ ತಂಡ 1 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿತು. ಅದನ್ನು ಬೆನ್ನಟ್ಟಿದ ಮಂಡಂಗಡ ತಂಡ 1 ವಿಕೆಟ್ ನಷ್ಟಕ್ಕೆ 68 ರನ್‍ಗಳಿಸಿ ಸೋಲೊಪ್ಪಿಕೊಂಡಿತು.

ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪೂಳಂಡ ಅಭಿಷೇಕ್, ಬಲ್ಲಚಂಡ ಚಂದನ್, ಕನ್ನಿಗಂಡ ಪಳಂಗಪ್ಪ, ಹೊಟ್ಟೇಂಗಡ ದರ್ಶನ್, ಅರಮಣಮಾಡ ದಿಲೀಪ್, ಮಂಡಂಗಡ ಡಿಂಚು ಪಡೆದರು.

ತೀರ್ಪುಗಾರರಾಗಿ ಪೆÇರ್ಕೊಂಡ ಸುನಿಲ್, ನೆರವಂಡ ಸಂಪನ್. ವೀಕ್ಷಕ ವಿವರಣೆಗಾರರಾಗಿ ಮಣವಟ್ಟಿರ ದಯಾ ಕುಟ್ಟಪ್ಪ, ಕರವಂಡ ಅಪ್ಪಣ್ಣ. ತಾಂತ್ರಿಕ ವಿಭಾಗದಲ್ಲಿ ಚೆರುಮಂದಂಡ ಆಕಾಶ್ ಗಣಪತಿ, ಬೊಳ್ಯಪಂಡ ದಿಲನ್ ಕಾರ್ಯನಿರ್ವಹಿಸಿದರು.