ವೀರಾಜಪೇಟೆ, ಮೇ 5: ಕೊಡವ ಹಾಕಿ ಉತ್ಸವದಂತೆ ಹೆಗ್ಗಡೆ ಜನಾಂಗದಲ್ಲೂ ಕ್ರೀಡಾಕೂಟವನ್ನು ಯಾವದಾದರೊಂದು ಕುಟುಂಬ ಪ್ರಾಯೋಜಕತ್ವ ವಹಿಸಿಕೊಂಡರೆ ಉತ್ತಮವಾಗುತ್ತದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಕಾಕೇರ ಸುಬ್ರಾಯ ಹೇಳಿದರು.
ಕೊಡಗು ಹೆಗ್ಗಡೆ ಸಮಾಜ ಹಾಗೂ ವಿದ್ಯಾಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಸುಬ್ರಾಯ ಅವರು ಹೆಗ್ಗೆಡೆ ಜನಾಂಗ ಸಣ್ಣ ಜನಾಂಗವಾಗಿ ರುವದರಿಂದ ಆರ್ಥಿಕ ಸಬಲತೆ ಎದುರಾಗುತ್ತಿದೆ. ಹೆಚ್ಚಿನ ಜನರು ಬೆಂಗಳೂರು, ಮೈಸೂರುಗ ಳಂತಹ ಹೊರ ಜಿಲ್ಲೆಗಳಲ್ಲಿರುವದರಿಂದ ಕ್ರೀಡಾಕೂಟಕ್ಕೂ ಕೆಲಮಟ್ಟಿಗೆ ಹಿನ್ನಡೆಯಾಗುತ್ತದೆ. ಎಲ್ಲೆ ಇದ್ದರೂ ಜನ್ಮಭೂಮಿಯ ನಂಟನ್ನು ಮರೆಯಬಾರದು. ಜನಾಂಗದ ಹಿತ ದೃಷ್ಠಿಯಿಂದ ಅದರ ಏಳಿಗೆಗಾಗಿ ಎಲ್ಲರೂ ಒಟ್ಟಾಗಿ ಕೈ ಜೋಡಿಸಬೇಕು ಎಂದು ಹೇಳಿದರು.
ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಜಿ. ಅಯ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಾಂಗದಲ್ಲಿ ಒಗ್ಗಟ್ಟು ಮೂಡಿದರೆ ಎಲ್ಲವನ್ನು ಸಾಧಿ ಸಬಹುದಾಗಿದೆ. ಅದರ ಫÀಲವಾಗಿಯೇ ಕಳೆದ 14 ವರ್ಷದಿಂದ ಉತ್ತಮವಾಗಿ ಕ್ರೀಡಾಕೂಟಗಳನ್ನು ನಡೆಸಲು ಸಾಧ್ಯವಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸುವದರಿಂದ ಮುಂದೆ ಉತ್ತಮ ಸಾಧನೆ ಮಾಡಲು ಸಹಕಾರಿಯಾಗು ತ್ತದೆ ಎಂದು ಹೇಳಿದರು.
ಇದೇ ಸಂದರ್ಭ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಡಿಞರಂಡ ವೇಣುಕುಮಾರ್, ಕಳೆದ ಬಾರಿ ಎಸ್ಎಸ್ ಎಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಚಂಗಚಂಡ ಗಗನ್, ಪಂದಿಕಂಡ ಯಮುನಾ, ಪಿ.ಯು.ಸಿ. ಯಲ್ಲಿ ಅತೀ ಹೆಚ್ಚಿನ ಅಂಕ ಪಡೆದ ಚರ್ಮಂಡ ಪೂಜಾ, ಚಂಗಚಂಡ ಪ್ರತಿಭಾ ಅವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ದಾನಿಗಳಾದ ಕಾಕೇರ ಜಿಮ್ಮ ಚಂಗಪ್ಪ, ಪಡಿಞರಂಡ ವೇಣುಕುಮಾರ್, ತೋರೆರ ಮುದ್ದಯ್ಯ, ಪೊಕ್ಕಳಿಚಂಡ ರಘು ಪೊನ್ನಪ್ಪ, ಕೊರಕುಟ್ಟಿರ ಸರ ಚಂಗಪ್ಪ, ಮತ್ತಿತರರು ಉಪಸ್ಥಿತರಿದ್ದರು. ಕ್ರೀಡಾ ಸಂಚಾಲಕ ಪಡಿಞರಂಡ ಪ್ರಭು ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ತೋರೆರ ಮುದ್ದಯ್ಯ ವಂದಿಸಿದರು.