ನಾಪೆÇೀಕ್ಲು, ಏ. 30: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ದೊಡ್ಡಪುಲಿಕೋಟು ಮುಕ್ಕಾಟಿರ ಕುಟುಂಬದ ಪ್ರಯೋಜಕತ್ವದಲ್ಲಿ ನಡೆಯುತ್ತಿರುವ 17ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ನ ಹದಿಮೂರನೇ ದಿನದ ಪಂದ್ಯಾಟ ಮುಗಿದಿದ್ದು, ಇಂದು ಅಂದರೆ ಮೇ 1 ರಿಂದ ಎರಡನೇ ಸುತ್ತಿನ ಪಂದ್ಯಾಟಗಳು ನಡೆಯಲಿದೆ.
ಅಂತೆಯೇ ಏ. 30 ರಂದು ನಡೆದ ಪಂದ್ಯಾಟದಲ್ಲಿ ಚೋಕಿರ, ಅಮ್ಮಾಟಂಡ, ಕಾಂಗೀರ, ಮದ್ರಿರ, ಕುಟ್ಟಂಡ (ಅಮ್ಮತ್ತಿ), ಕಂಜಿತಂಡ, ಕಾಳಿಮಡ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿವೆ.
ಚೋಕಿರ ತಂಡವು ಬಾಳೆಯಡ ತಂಡವನ್ನು, ಅಮ್ಮಾಟಂಡ ತಂಡವು ಪಟ್ಟಮಡ ತಂಡವನ್ನು, ಕಾಂಗೀರ ತಂಡವು ತಾಪಂಡ ತಂಡವನ್ನು, ಮದ್ರಿರ ತಂಡವು ಚಂಗನಮಕ್ಕಡ ತಂಡವನ್ನು, ಕುಟ್ಟಂಡ (ಅಮ್ಮತ್ತಿ) ತಂಡವು ಮುಕ್ಕಾಟಿರ (ಮಾದಾಪುರ) ತಂಡವನ್ನು, ಕಂಜಿತಂಡ ತಂಡವು ಕೊಣಿಯಂಡ ತಂಡವನ್ನು, ಕಾಳಿಮಡ ತಂಡವು ಮಚ್ಚಾರಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು.
ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಬಾಳೆಯಡ ಶ್ಯಾಮ್, ಪಟ್ಟಮಡ ಪೆÇನ್ನಣ್ಣ, ತಾತಂಡ ವಿಜು, ಚಂಗನಮಕ್ಕಡ ಅನು, ಮುಕ್ಕಾಟಿರ ಸಂಜು, ಕೊಣಿಯಂಡ ಸೋಮಣ್ಣ, ಮಚ್ಚಾರಂಡ ಬೋಪಣ್ಣ ಪಡೆದರು.
ಇಂದಿನ ಪಂದ್ಯಗಳು
ಇಂದು ಅಂದರೆ ಮೇ 1 ರಂದು ಬೆಳಿಗ್ಗೆ 8.30 ಗಂಟೆಗೆ ತೊತ್ತಿಯಂಡ-ಮುಕ್ಕಾಟಿರ (ಪುಲಿಕೋಟು), 9.30ಕ್ಕೆ ಕಾಂಡಂಡ-ಪೆÇನ್ನಕಟ್ಟಿರ, 10.30ಕ್ಕೆ ಕೊಲ್ಲಿರ-ಬೈರೇಟಿರ, 11.30ಕ್ಕೆ ಪಟ್ರಪಂಡ-ಕಲ್ಮಾಡಂಡ, 12.30ಕ್ಕೆ ಚಿಂಡಮಡ-ಪರವಂಡ, 1.30ಕ್ಕೆ ಕೊಳುಮಾಡಂಡ-ಪಡಿಯೇಟಿರ, 2.30ಕ್ಕೆ ಆದೇಂಗಡ-ದಾಸಂಡ ತಂಡಗಳ ನಡುವೆ ಪಂದ್ಯಾಟ ನಡೆಯಲಿದೆ.