ಮಡಿಕೇರಿ, ಮೇ 3: ಇಲ್ಲಿಗೆ ಸಮೀಪದ 2ನೇ ಮೊಣ್ಣಂಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೂಡಿಗೆಯ ಶಕ್ತಿ ವೃದ್ಧಾಶ್ರಮಗಳಿಗೆ ಸೌತ್ ಇಂಡೋ ವೈದ್ಯಕೀಯ ಸಂಸ್ಥೆಯಿಂದ ರೂ. 1 ಲಕ್ಷ ಮೊತ್ತದ ವಿವಿಧ ಪರಿಕರಗಳನ್ನು ವಿತರಿಸಲಾಯಿತು.

2ನೇ ಮೊಣ್ಣಂಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯುತ್ ಕೊರತೆಯನ್ನು ಗಮನಿಸಿದ ಸಂಸ್ಥೆ ಶಾಲೆಗೆ ವಿದ್ಯುತ್ ಸಂಪರ್ಕದ ತಂತಿಯನ್ನು ಅಳವಡಿಸಿ ಎರಡು ಕಂಪ್ಯೂಟರನ್ನು ವಿತರಿಸಲಾಯಿತು.

ಈ ಸಂದರ್ಭ ಗಾಳಿಬೀಡು ಗ್ರಾ.ಪಂ. ಸದಸ್ಯ ಅಗೋಳಿಕಜೆ ಧನಂಜಯ, ಸಂಸ್ಥೆ ಕಾರ್ಯವನ್ನು ಶ್ಲಾಘಿಸಿ ಮಾತನಾಡಿ, ಖಾಸಗಿ ಸಂಸ್ಥೆಗಳು ಮುಂದೆ ಬಂದು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡುವದು ಉತ್ತಮ ಬೆಳವಣಿಗೆ. ತಮ್ಮ ಗ್ರಾಮದ ಶಾಲೆಗಳನ್ನು ಮಾದರಿ ಶಾಲೆಯನ್ನಾಗಿಸಿ ರೂಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯ ಸದಾನಂದ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವೆಂಕಪ್ಪ, ಅಂಗನವಾಡಿ ಶಿಕ್ಷಕಿ ಉಮಾವತಿ, ಪವನ್, ಅಚ್ಯುತ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಕೂಡಿಗೆ ವೃದ್ಧಾಶ್ರಮಕ್ಕೆ ಟಿ.ವಿ., ವೀಲ್‍ಚೇರ್, ಮಂಚ, ಹಾಸಿಗೆ ಹಾಗೂ ಇನ್ನಿತರ ವಸ್ತುಗಳನ್ನು ನೀಡಲಾಯಿತು.

ಈ ಸಂದರ್ಭ ವಾಸುದೇವ, ಗೌರಮ್ಮ, ಪ್ರಸಾದ್, ಯತೀಶ್ ಇದ್ದರು.