ಸಿದ್ದಾಪುರ, ಫೆ. 2: ಸಮೀಪದ ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬ ಶಾವಲಿ ಉರೂಸ್ ಕಾರ್ಯಕ್ರಮ ಇಂದಿನಿಂದ ತಾ. 6ರ ವರೆಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಸಿ.ಎಂ ಅಬ್ದುಲ್ ಜಬ್ಬಾರ್ ತಿಳಿಸಿದ್ದಾರೆ.

ಸಿದ್ದಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಊರೂಸ್ ಕಾರ್ಯಕ್ರಮವನ್ನು ಸಮಿತಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಧ್ವಜಾರೋಹಣ ನೆರವೇರಿಸಲಿದ್ದು, ಪಾಲಿಬೆಟ್ಟ ಜುಮಾ ಮಸೀದಿಯ ಖತೀಬ್ ಅಲ್ ಹಾಫಿಳ್ ಫತಾಹ್ ಸಖಾಫಿ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಮುಹ್‍ಸಿನ್ ಸೈದಲವಿ ಕೋಯ ಅಲ್‍ಬುಖಾರಿ ಮೌಲಿದ್ ಪಾರಾಯಣ ಮತ್ತು ದಿಕ್ರ್ ಮಜ್ಲಿಸ್‍ಗೆ ನೇತೃತ್ವ ವಹಿಸಲಿದ್ದಾರೆ. 4 ದಿನಗಳ ಕಾರ್ಯಕ್ರಮದಲ್ಲಿ ಪ್ರತಿ ದಿನ ಧಾರ್ಮಿಕ ಗುರುಗಳಿಂದ ಉಪನ್ಯಾಸ ಹಾಗೂ ತಾ. 6ರಂದು ಅನ್ನದಾನ ಮತ್ತು ಸಂಜೆ 7.30ಕ್ಕೆ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಶ್ರೀ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಭೋಧ ಸ್ವರೂಪಾನಂದಾಜಿ, ಪಾಲಿಬೆಟ್ಟ ಲೋಡ್ರ್ಸ್ ಚರ್ಚ್‍ನ ಚಾಲ್ರ್ಸ್ ನೋರೋನ್ಹಾ, ಅಬ್ದುಲ್ ರಶೀದ್ ಸಖಾಫಿ ಕಕ್ಕಿಂಜೆ ಸೇರಿದಂತೆ ಧಾರ್ಮಿಕ ನೇತಾರರು ಮತ್ತು ರಾಜಕೀಯ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಕೆ.ಹೆಚ್ ಅಬೂಬಕರ್ ಮತ್ತು ರಶೀದ್ ಇದ್ದರು.