ಕುಶಾಲನಗರ, ಫೆ. 2: ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಜನಮನ ಸಾಂಸ್ಕøತಿಕ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಶ್ರೀರಂಗಪಟ್ಟಣದ ಜೈನಬಸದಿ ಆದಿನಾಥ ಭವನದಲ್ಲಿ ಖ್ಯಾತ ಕವಿ ಶರೀಫರವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಕೊಡಗಿನ ಕವಯತ್ರಿ ಸುನೀತ ಕವನ ವಾಚಿಸುವ ಮುಖಾಂತರ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜೆಗೆರೆ ಜಯಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸ್ಥಾಯಿ ಸಮಿತಿ ಸದಸ್ಯ ಡಾ. ಬೊರೇಗೌಡ ಚಿಕ್ಕಮರಳ್ಳಿ ಮುಖ್ಯ ಅತಿಥಿಗಳಾಗಿದ್ದ ಕಾರ್ಯಕ್ರಮದಲ್ಲಿ ಎರಡು ಕವಿಗೋಷ್ಠಿಗಳು ಏಕದಿನದಲ್ಲಿ ನಡೆಯಿತು. ಮೊದಲ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ರಾಘವ್ ವಹಿಸಿದ್ದರು, ಎರಡನೇ ಕವಿಗೋಷ್ಠಿ ಯಲ್ಲಿ ಪ್ರಸಿದ್ಧ ಕವಯತ್ರಿ ಕೆ. ಶರೀಫ ಅಧ್ಯಕ್ಷತೆ ವಹಿಸಿದ್ದರು.