ಸಿದ್ದಾಪುರ, ಫೆ. 3 ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ವಾರ್ಷಿಕೊತ್ಸವ ಅಂಗವಾಗಿ ಸಿದ್ದಾಪುರದಲ್ಲಿ ಪೊಂಗಲ್ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.ಸೆಂಟಿನರಿ ಹಾಲ್ ಸಭಾಂಗಣದಲ್ಲಿ ಕೊಡಗು ಕಾವೇರಿ ತಮಿಳು ಸಂಘದ ಜಿಲ್ಲಾಧ್ಯಕ್ಷ ತಿರುಮಲ ರಾಜ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮವನ್ನು ಎಂ ಎಲ್ ಸಿ ಸುನೀಲ್ ಸುಬ್ರಮಣಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ತಮಿಳು ಸಂಘಟನೆಯನ್ನು ಕಟ್ಟಿ ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ ಸರಕಾರಗಳ ಸೌಲಭ್ಯ ಪಡೆದುಕೊಂಡು ಸಂಘದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಕರೆ ನೀಡಿದರು,

ರಾಜ್ಯ ಕಾಂಗ್ರೆಸ್ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಪ್ರಕಾಶಂ ಮಾತನಾಡಿ ತಮಿಳು ಬಾಂಧವರು ಜಿಲ್ಲೆಯಲ್ಲಿ ನೆಲಸಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾg.É ರಾಜ್ಯ ಸರಕಾರ ಕಾರ್ಮಿಕ ಕಲ್ಯಾಣ ಇಲಾಖೆಯ ಮೂಲಕ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಪ್ರಯೋಜನ ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿ, ತಾಲೂಕು ಪಂಚಾಯಿತಿ ಸದಸ್ಯರಾದ ರವೀಂದ್ರ, ಜೆನೀಶ್, ಎಸ್‍ಎನ್‍ಡಿಪಿ ಜಿಲ್ಲಾಧ್ಯಕ್ಷ ಕೆ.ಎನ್ ವಾಸು, ಕುಶಾಲನಗರದ ಎಸ್‍ಎಲ್‍ಎನ್ ಗ್ರೂಪ್‍ನ ಪ್ರಮುಖ ಶಾತಪ್ಪನ್, ಅಖಿಲ ಭಾರತ ತಮಿಳು ಸಂಘದ ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ ಸುಂದರಂ, ಕರ್ನಾಟಕ ತಮಿಳು ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ ಪುಗಳೆಂದಿ, ಬೆಂಗಳೂರು ತಮಿಳು ಸಂಘದ ಸಹ ಕಾರ್ಯದರ್ಶಿ ಅಮುದ ಪಾಂಡ್ಯನ್, ಮೈಸೂರು ತಮಿಳು ಸಂಘದ ಸಹ ಕಾರ್ಯದರ್ಶಿ ಅಮುದ ಪ್ರಸಾದ್, ಗುಂಡ್ಲುಪೇಟೆ ತಮಿಳು ಸಂಘದ ಕಾರ್ಯದರ್ಶಿ ವಿ ಬಾಲಕೃಷ್ಣನ್, ಚಾಮರಾಜನಗರ ತಮಿಳು ಸಂಘದ ಅಧ್ಯಕ್ಷ ಟಿ.ಎನ್ ಚಿನ್ನಸ್ವಾಮಿ, ಉಪಾಧ್ಯಕ್ಷ ಜಗದೀಶ್, ದಾವಣಗೆರೆ ತಮಿಳು ಸಂಘದ ಅಧ್ಯಕ್ಷ ನಟರಾಜನ್, ಶಿವಮೊಗ್ಗ ತಮಿಳು ಸಂಘದ ಕಾರ್ಯದರ್ಶಿ ದಂಡಪಾನಿ, ಹುಬ್ಬಳ್ಳಿ ತಮಿಳು ಸಂಘದ ಅಧ್ಯಕ್ಷ ಧನಂಜಯನ್, ಹೊಸಪೇಟೆ ತಮಿಳು ಸಂಘದ ಅಧ್ಯಕ್ಷ ಅಳಗಿರಿಸ್ವಾಮಿ, ಹಾಸನ ತಮಿಳು ಸಂಘದ ಅಧ್ಯಕ್ಷ ದೇವಸೇನಾದಿಪತಿ, ಹನೂರು ತಮಿಳು ಸಂಘದ ಅಧ್ಯಕ್ಷ ಅರಸಪ್ಪನ್, ಕೊಡಗು ತಮಿಳು ಸಂಘದ ಉಪಾಧ್ಯಕ್ಷ ಮೈಕಲ್ ಪಾಲಿಬೆಟ್ಟ, ಕಾರ್ಯದರ್ಶಿ ಮೋಹನ್ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ತಮಿಳು ಸಂಘದ ಪ್ರಮುಖರು ಪಾಲ್ಗೊಂಡಿದ್ದರು. ಪೊಂಗಲ್ ವಾರ್ಷಿಕೋತ್ಸವ ಅಂಗವಾಗಿ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.