ನಾಪೋಕ್ಲು, ಫೆ. 3: ದೇವಸ್ಥಾನಗಳು ನಿರ್ಮಾಣಗೊಂಡಾಗ ಸಂಸ್ಕಾರ, ಸಂಸ್ಕøತಿ, ಧರ್ಮವನ್ನು ಕಾಪಾಡುವದರ ಮೂಲಕ ದೇಶವನ್ನು ಕಟ್ಟುವ ಕೆಲಸ ಆಗುತ್ತದೆ. ಆದರೆ ಇದರ ಜತೆಯಲ್ಲಿ ಸಾಗುವ ಮತ್ತೊಂದು ರೀತಿಯಲ್ಲಿ ಸಂಸ್ಕಾರಯುತವಾದ ಪ್ರಜೆಗಳನ್ನು ರೂಪಿಸುವಲ್ಲಿ ದೇವಾಲಯದಂತೆ ಇರುವ ಶಾಲೆಯನ್ನು ನಿರ್ಮಾಣ ಮಾಡುವಲ್ಲಿ ಆರ್ಥಿಕ ಸ್ಥಿತಿಯಲ್ಲಿರುವ ದೇವಾಲಯಗಳ ಮೂಲಕ ಶಾಲೆಗಳನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರು ಹೇಳಿದರು.

ಅವರು ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ನವೀಕರಣ ಪುನರ್‍ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಮಾರೋಪದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮಾತನಾಡಿ, ಭಾರತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇರುವ ಪ್ರತಿಯೊಂದು ದೇವಸ್ಥಾನದ ಬಗ್ಗೆ ಸ್ಥಳ ಪುರಾಣಗಳಿವೆ. ಅದೇ ರೀತಿ ಪೆರಾಜೆ ಶಾಸ್ತಾವು ದೇವಸ್ಥಾನಕ್ಕೂ ಒಂದು ವಿಶೇಷವಾದ ಪುರಾಣ ಇದೆ. ಮನಸ್ಮøತಿ ಎಂಬದು ಸಂಸ್ಕಾರದ ಜತೆಯಲ್ಲಿರುವಂತಹದು. ಆದರೆ ಮನಸ್ಮøತಿ ಅಸ್ತಿತ್ವದಲ್ಲಿಲ್ಲ. ಭಕ್ತರ ಸಂಖ್ಯೆ ಹೆಚ್ಚಳವಾದಾಗ, ಭಗವಂತನ ಶಕ್ತಿ ಹೆಚ್ಚುತ್ತದೆ. ಭಾರತ ಇತಿಹಾಸದಲ್ಲಿ ದೇವಸ್ಥಾನಗಳ ಮೂಲಕ ಸಂಸ್ಕಾರ ಕೊಡುವದು. ಆದರೆ ಸಂಸ್ಕಾರ ಕೊಡುವ ದೇವಾಲಯಗಳನ್ನು ನಾಶ ಮಾಡುವ ಹುನ್ನಾರ ನಡೆಯುತ್ತದೆ. ಇದಕ್ಕೆಲ್ಲ ಕಾರಣ ದೇವಳದ ಆಡಳಿತ ಮಂಡಳಿಯಲ್ಲಿರುವ ಕಚ್ಚಾಟಗಳು. ನಮ್ಮಲ್ಲಿರುವ ಕಚ್ಚಾಟಗಳನ್ನು ದೂರ ಮಾಡಿ, ಒಗ್ಗಟ್ಟಿನಿಂದ ಪುರಾತನದಿಂದ ಸಂಸ್ಕಾರ ಕೊಡುವ ದೇವಾಲಯಗಳನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಅಧ್ಯಕ್ಷತೆಯನ್ನು ನವೀಕರಣ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆರ್.ಡಿ. ಆನಂದ ವಹಿಸಿದ್ದರು. ಆಡಳಿತ ಮೊಕ್ತೇಸರ ನಾಗೇಶ್ ಕುಂದಲ್ಪಾಡಿ

(ಮೊದಲ ಪುಟದಿಂದ) ಸಮಾರೋಪ ಭಾಷಣ ಮಾಡಿ, ದೇವಳದ ಅಭಿವೃದ್ಧಿಗೆ ಶ್ರಮಿಸಿದ ಎಲ್ಲ ಸಮಿತಿಗಳಿಗೆ, ಸಹಕರಿಸಿದ ಊರವರಿಗೆ, ಪರವೂರವರಿಗೆ ಕೃತಜ್ಞತೆ ಅರ್ಪಿಸಿ, ದೇವಳದ ಇಡೀ ವ್ಯವಸ್ಥೆಗೆ ಧನಾತ್ಮಕ ಚಿಂತನೆಯೇ ಊರಿನ ಜನರ ಐಕ್ಯತೆಗೆ ಕಾರಣವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಅರಂತೋಡು ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ಶ್ರೀಪಾದ ಕನ್‍ಸ್ಟ್ರಕ್ಷನ್‍ನ ಶ್ಯಾಂಪ್ರಸಾದ್ ಅಡ್ಡಂತಡ್ಕ, ಪೆರಾಜೆ ಕೃಷಿಕ ಸುಬ್ರಮಣ್ಯ ಮೂಲೆಮಜಲು ಭಾಗವಹಿಸಿದ್ದÀರು. ವೇದಿಕೆಯಲ್ಲಿ ದೇವತಕ್ಕರು ರಾಜಗೋಪಾಲ ರಾಮಕಜೆ, ಆಡಳಿತ ಕಾರ್ಯದರ್ಶಿ ವಿಶ್ವನಾಥ ಕುಂಬಳಚೇರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆರ್.ಡಿ ಆನಂದ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ನಿಡ್ಯಮಲೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರವೀಣ್ ಬಂಗಾರಕೋಡಿ, ಕಾರ್ಯದರ್ಶಿ ತಿಲೋತ್ತಮ ಅಡ್ಕ, ಆರ್ಥಿಕ ಸಮಿತಿ ಅಧ್ಯಕ್ಷ ಜ್ಞಾನೇಶ್ ಎನ್.ಎ, ಕಾರ್ಯದರ್ಶಿ ತೇಜಪ್ರಸಾದ್ ಎ.ಎಸ್, ಕೋಶಾಧಿಕಾರಿ ಹರಿಶ್ಚಂದ್ರ ಮುಡ್ಕಜೆ, ಸಭಾಕಾರ್ಯಕ್ರಮದ ಸಂಚಾಲಕ ಪುರುಷೋತ್ತಮ ಕಿರ್ಲಾಯ, ದೇವತಕ್ಕ ಮುಖ್ಯಸ್ಥರು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇವತಕ್ಕ ರಾಜಗೋಪಾಲ ರಾಮಕಜೆ ಮತ್ತು ಈ ಹಿಂದೆ ಆಡಳಿತ ಮಾಡಿದ ಮಾಜಿ ಮೊಕ್ತೇಸರರನ್ನು ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರನ್ನು, ದೇವಳದ ಕಲ್ಲುಕೆತ್ತನೆಯ ಶಿಲ್ಪಿ ಹರೀಶ್ ಮಂಗಳೂರು, ದೇವಳಕ್ಕೆ ಧಾನವಾಗಿ ಮರ ನೀಡಿದ ಸೀತಾರಾಮ ಕುಂದಲ್ಪಾಡಿ, ಸತ್ಯವತಿ ರಾಮಕೃಷ್ಣ ಪುತ್ತುರಾಯ, ಸದಾಶಿವ ಅಂಜಿಕಾರು ಮತ್ತಿತರನ್ನು ಸನ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವದ ಅಂಗವಾಗಿ ಹೊರತಂದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮದ ಸಂಚಾಲಕ ದೊಡ್ಡಣ್ಣ ಬರೆಮೇಲು ಸ್ವಾಗತಿಸಿದರು. ಉಪನ್ಯಾಸಕ ಪ್ರಸನ್ನ ನಿಡ್ಯಮಲೆ ಹಾಗೂ ಮನೋಜ್ ನಿಡ್ಯಮಲೆ, ಶಿಕ್ಷಕಿ ರೇಖಾ ಅಡ್ಕ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಹಾಸ್ಯ ಸಂಜೆ ಮತ್ತು ದೇವರ ನೃತ್ಯ ಬಲಿ, ಕಟ್ಟೆಪೂಜೆ, ದೇವರ ಭೂತಬಲಿ ನಡೆಯಿತು.

-ದುಗ್ಗಳ ಸದಾನಂದ