ವಿರಾಜಪೇಟೆ.ಫೆ:2ದಿಡ್ಡಳ್ಳಿ ಹಾಗೂ ಜಿಲ್ಲೆಯ ಇತರ ಭಾಗಗಳಲ್ಲಿ ಸರ್ಕಾರದ ಸವಲತ್ತುಗಳಿಗಾಗಿ ಗಿರಿಜನ ಸಮುದಾಯವಾಗಿ ಮತಾಂತರಗೊಳ್ಳುತ್ತಿದ್ದು ತಮಗೆ ಬೇಕಾದ ರೀತಿಯಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ನಿವೇಶನ ಪಡೆದುಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ. ನೈಜ ಗಿರಿಜನರನ್ನು ಗುರುತಿಸಿ ಸರ್ಕಾರ ಸವಲತ್ತುಗಳನ್ನು ನೀಡುವದರಲ್ಲಿ ನಮ್ಮ ಅಭ್ಯಂತರವಿಲ್ಲ ಎಂದು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಗಿರಿಜನ ಮುಖಂಡ ಎಂ.ಎಂ ಪರಮೇಶ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಮೇಶ್ ಅವರು, ದಿಡ್ಡಳ್ಳಿ ವಸತಿ ಯೋಜನೆ ಅಡಿಯಲ್ಲಿ ಗಿರಿಜನರಿಗಾಗಿ ಮೀಸಲಿಟ್ಟ ನಿವೇಶನವನ್ನು ಪಡೆದುಕೊಳ್ಳುವ ಸಲುವಾಗಿ ಕೆಲವು ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಪರೋಕ್ಷವಾಗಿ ಪ್ರಭಾವ ಬೀರಿ ನಕಲಿ ದಾಖಲೆಗಳನ್ನು ಸೃಷ್ಠಿಸುತ್ತಿರುವದರಿಂದ ನೈಜ ಗಿರಿಜನರು ಸರಕಾರದ ಎಲ್ಲ ಸೌಲಭ್ಯಗಳಿಂದ ವಂಚಿv Àರಾಗುತ್ತಿದ್ದಾರೆ. ಇಂತಹ ಯೋಜನೆಗಳಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪರೀಶೀಲನೆ ನಡೆಸುವದು ಉತ್ತಮ. ನಿವೇಶನಕ್ಕಾಗಿ ಕೆಲವರು ಮತಾಂತರಗೊಂಡು ಗುರುತಿನ ಚೀಟಿಯಲ್ಲೂ ಮೂಲ ಹೆಸರನ್ನು ಬದಲಾಯಿಸಿಕೊಂಡು ಸರ್ಕಾರವನ್ನು ವಂಚಿಸುತ್ತಿದ್ದಾರೆ. ಒಬ್ಬೊಬ್ಬರು ಎರೆಡೆರಡು ಗುರುತಿನ ಚೀಟಿಯನ್ನು ಹೊಂದಿರುವದರಿಂದ ಅಧಿಕಾರಿಗಳು ಕೂಲಂಕಶವಾಗಿ ದಾಖಲೆಗಳನ್ನು ಪರಿಶೀಲನೆಗೊಳಪಡಿಸಬೇಕು. ಅಲ್ಪಸಂಖ್ಯಾತರ ಮೀಸಲಾತಿ ಸವಲತ್ತುಗಳಲ್ಲಿಯೂ ಈ ವಂಚನೆ ಪ್ರಕರಣಗಳು ನಡೆಯುತ್ತಿವೆ ಎಂದು ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್, ತಿತಿಮತಿಯ ವಿಜಯ್ ಕಾನೂರಿನ ಪ್ರಕಾಶ್ ಹಾಜರಿದ್ದರು.