ಮಡಿಕೇರಿ, ಫೆ.3 : ನಗರದ ಜನ್‍ಮಂಗಲ್ ಸಂಸ್ಥೆ ವತಿಯಿಂದ ತಾ.5 ರಂದು ಇಂಗ್ಲೀಷ್ ಭಾಷಾ ಕಲಿಕೆಯ ಉಚಿತ ತರಬೇತಿ ಶಿಬಿರ ಏರ್ಪಡಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ತರಬೇತುದಾರರಾದ ಮೋಕ್ಷಿತಾ ಪಟೇಲ್, ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಜನ್‍ಮಂಗಲ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತರಬೇತಿ ಕಾರ್ಯಾಗಾರ ನಡೆಯಲಿದ್ದು, ಉಚಿತ ಪ್ರವೇಶವಿರುತ್ತದೆ ಎಂದು ತಿಳಿಸಿದರು.

ವಿನೂತನ ವಿಧಾನದಲ್ಲಿ ಭಾಷಾ ಕಲಿಕೆಯ ಬಗ್ಗೆ ಅರಿವು ಮೂಡಿಸುವದು ಹಾಗೂ ಸ್ವಯಂ ಪ್ರೇರಿತರಾಗಿ ಕಲಿಯುವವರು ಮತ್ತು ತರಬೇತು ದಾರರನ್ನು ಒಗ್ಗೂಡಿಸಲು ಇಂಗ್ಲೀಷ್ ಕ್ಲಬ್ ಮಾದರಿಯಲ್ಲಿ ಶಿಬಿರ ನಡೆಯಲಿದೆ. ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಮತ್ತು ಆಧ್ಯಾತ್ಮವನ್ನು ಗುರಿಯಾಗಿಸಿಕೊಂಡು ಶಿಬಿರದ ಮೂಲಕ ಯುವಜನತೆಯನ್ನು ಸೆಳೆÉಯಲು ಪ್ರಯತ್ನಿಸಲಾಗುವದು. ಶಿಬಿರಾರ್ಥಿಗಳಲ್ಲಿ ಆಂಗ್ಲ ಭಾಷೆಯ ಕುಶಲತೆಯೊಂದಿಗೆ ಸ್ಪರ್ಧಾತ್ಮಕ ಕೌಶಲ್ಯ ಹಾಗೂ ಮಾನವೀಯ ಗುಣಗಳನ್ನು ಉತ್ತೇಜಿಸಲಾಗುವದು ಎಂದರು.

ಜನ್‍ಮಂಗಲ್ ಸಂಸ್ಥೆ 2010 ರಲ್ಲಿ ಗುಜರಾತಿನ ಭರೂಚ್ ಹಾಗೂ ವಡೋದರ ಎಂಬಲ್ಲಿ ಸ್ಥಾಪನೆಯಾಯಿತು. ಜನ್‍ಮಂಗಲ್ ವೀಸಾ ವಲ್ರ್ಡ್ ಮತ್ತು ಜನಮಂಗಲ್ ಕೆರಿಯರ್ ಅಕಾಡೆಮಿ ಸಂಸ್ಥೆಯು ಉಪ ಶಾಖೆಗಳಾಗಿದೆ.

ಇಂಗ್ಲೀಷ್ ಭಾಷೆಯ ಅನಿವಾರ್ಯತೆ ಬಗ್ಗೆ ಮಾತನಾಡಿದ ಸಂಸ್ಥೆಯ ಸ್ಥಾಪಕ ಗೌರವ್ ಪಟೇಲ್, ದೇಶದಲ್ಲಿ ಶೇ.85 ರಷ್ಟು ಮಂದಿ ಗ್ರಾಮೀಣರಾಗಿದ್ದು, ಇವರು ಭಾಷಾ ಕಲಿಕೆಯ ಮೂಲಕ ಮುಖ್ಯ ವಾಹಿನಿಗೆ ಬರಬೇಕಾಗಿದೆ ಎಂದರು. ಪ್ರಧಾನ ಮಂತ್ರಿಗಳು ಡಿಜಿಟಲ್ ಇಂಡಿಯಾದ ಗುರಿ ಹೊಂದಿದ್ದು, ಇದಕ್ಕೆ ಯುವ ಶಕ್ತಿ ಬಳಕೆಯಾಗಬೇಕಾಗಿದೆ ಮತ್ತು ಗ್ರಾಮಿಣ ಜನರು ಡಿಜಿಟಲೀಕರಣಕ್ಕೆ ಹೊಂದಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಗಳಾದ ಜಾರ್ಜ್ ಪ್ರಿನ್ಸ್, ಕೆ.ಹೆಚ್. ಮೊಹಮ್ಮದ್ ಅಸ್ಲಾಂ ಹಾಗೂ ಟಿ.ಕೆ. ವೈಶಾಖ್ ಉಪಸ್ಥಿತರಿದ್ದರು.