ಗೋಣಿಕೊಪ್ಪಲು, ಫೆ. 43: ಇಲ್ಲಿನ ಕಾವೇರಿ ಕಾಲೇಜು ವಾಣಿಜ್ಯ ವಿಭಾಗದ ನೇತೃತ್ವದಲ್ಲಿ ಜರುಗಿದ ಜಿಲ್ಲಾ ಮಟ್ಟದ ವಾಣಿಜ್ಯ ಮತ್ತು ವ್ಯವಸ್ಥಾಪನಾ ಹಬ್ಬ (ಸೈರಸ್)ದಲ್ಲಿ ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ತಂಡ ಅತ್ಯಧಿಕ ಅಂಕಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಶನಿವಾರಸಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ದ್ವಿತೀಯ ಸ್ಥಾನವನ್ನು ಗೆದ್ದುಕೊಂಡಿದೆ. ಅತಿಥೇಯ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ಪಾರದರ್ಶಕ ಸ್ಪರ್ಧೆಯ ನಿಟ್ಟಿನಲ್ಲಿ ಎಲ್ಲ ಸ್ಪರ್ಧೆಯಿಂದಲೂ ಹೊರಗುಳಿದಿತ್ತು.
ಕಾವೇರಿ ಕಾಲೇಜು ಆವರಣದಲ್ಲಿ ಜರುಗಿದ ‘ಮ್ಯಾಡ್ ಆಡ್ಸ್’, ಹೂ ಐಯಾಮ್?, ಮಾನವ ಸಂಪನ್ಮೂಲ, ಮಾರ್ಕೆಟಿಂಗ್, ಬೆಸ್ಟ್ ಮೇನೇಜರ್, ಹಣಕಾಸು, ನಿಧಿ ಶೋಧ, ಗುಂಪು ಚರ್ಚೆ, ಸ್ಟ್ರೆಸ್ ಇಂಟರ್‍ವ್ಯೂ ಇತ್ಯಾದಿ ಸ್ಪರ್ಧೆಗಳು ಜಿಲ್ಲೆಯ 8 ಪದವಿ ಕಾಲೇಜು ತಂಡಗಳು ಭಾಗವಹಿಸಿದ್ದವು. ಎಂಜಿಎಂ ಪದವಿ ಕಾಲೇಜು, ಕುಶಾಲನಗರ, ಮೂರ್ನಾಡು ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ, ಕಾವೇರಿ ಕಾಲೇಜು ವೀರಾಜಪೇಟೆ, ಗ್ರೀನ್ ಮೌಂಟೇನ್ ಕಾಲೇಜು, ಮಡಿಕೇರಿ, ಸಂತ ಅಂತೋಣಿ ಕಾಲೇಜು, ವೀರಾಜಪೇಟೆ, ಪ್ರಥಮ ದರ್ಜೆ ಕಾಲೇಜು ಶನಿವಾರಸಂತೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆ ತಲಾ 10 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಗೋಣಿಕೊಪ್ಪಲು ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಎ.ಸಿ. ಗಣಪತಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಕುಶಾಲನಗರ ಜ್ಞಾನಗಂಗಾ ವಸತಿ ಶಾಲೆಯ ಮುಖ್ಯಸ್ಥ ಟಿ.ಕೆ. ಸುಧೀರ್ ಉದ್ಘಾಟಿಸಿ ಶುಭಕೋರಿದರು. ಮಡಿಕೇರಿ ಜಿಲ್ಲಾ ಗ್ರಾಹಕರ ವೇದಿಕೆಯ ಸದಸ್ಯೆ ಕೆ.ಡಿ. ಪಾರ್ವತಿ, ಪೆÇನ್ನಂಪೇಟೆ ಸಿಐಟಿ ಕಾಲೇಜು ಪ್ರಾಂಶುಪಾಲ ಡಾ. ಪಿ. ಮಹಾಬಲೇಶ್ವರಪ್ಪ, ಕಾವೇರಿ ಕಾಲೇಜು ಪ್ರಾಂಶುಪಾಲ ಪೆÇ್ರ. ಪಿ.ಎ. ಪೂವಣ್ಣ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಪೆÇ್ರ. ಎಂ.ಬಿ. ಕಾವೇರಪ್ಪ, ಕೆ.ಕೆ. ಚಿತ್ರಾವತಿ ಹಾಗೂ ಎನ್.ಪಿ. ರೀತಾ ಉಪಸ್ಥಿತರಿದ್ದರು.