ಸುಂಟಿಕೊಪ್ಪ, ಫೆ. 4: ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ರೂ. 4.60 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಅಡುಗೆ ಕೊಠಡಿಯನ್ನು ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಲೋಕಾರ್ಪಣೆ ಮಾಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸುಮೇಶ್, ಬಿ.ಜೆ. ಮೇದಪ್ಪ, ಸದಸ್ಯರುಗಳಾದ ನಾಗರತ್ನ, ರಹೇನಾ ಫೈರೋಜ್, ರತ್ನಾ ಜಯನ್, ಶಾಲಾ ಮುಖ್ಯೋಪಾಧ್ಯಾಯರಾದ ಗೀತಾ, ಗುತ್ತಿಗೆದಾರರಾದ ಇಬ್ರಾಹಿಂ, ಬಿ.ಕೆ. ದೇವಿ ಪ್ರಸಾದ್ ಮತ್ತಿತರರು ಇದ್ದರು.