ಕೂಡಿಗೆ, ಫೆ. 4: ಕೂಡಿಗೆಯ ಆಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ನರ್ಸರಿ ವಿದ್ಯಾರ್ಥಿಗಳಿಗೆ ಆಂಜೆಲಾ ಬ್ಲೂಮ್ಸ್ ಡೇ ಸಮಾರಂಭವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾದ್ಯಾಯಿನಿ ವೀಣಾ ವಿಜಯ್ ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಬೆಳವಣಿಗೆಯ ಅರಿವು ನರ್ಸರಿ ಹಂತದಿಂದಲೇ ಪ್ರಾರಂಭಗೊಂಡಾಗ ಅದರ ಪ್ರಯೋಜನವು ಕೊನೆಯ ತನಕ ತನ್ನ ಬದುಕಿಗೆ ಅಳವಡಿಸಿಕೊಳ್ಳಲು ಉತ್ತಮ ವಾಗಿರುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ಸಂತ ಜೋಸೆಫ್ರ ಶಾಲೆಯ ಮಾರ್ಗರೇಟ್ ನವಿಲ್ ಮಾತನಾಡುತ್ತಾ, ವಿದ್ಯಾರ್ಥಿಗಳ ಮನಸ್ಸನ್ನು ಅರಿಯುವದರ ಮೂಲಕ ಅವರ ಪ್ರತಿಭೆಯನ್ನು ಗುರುತಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಯಾಗುತ್ತವೆ ಎಂದರು.
ಶಾಲಾ ಸಂಚಾಲಕಿ ರೆನಿತ, ಶಾಲಾ ಶಿಕ್ಷಕ ರಕ್ಷಕ ಸಮಿತಿಯ ಉಪಾಧ್ಯಕ್ಷ ಯದುಕುಮಾರ್ ಮಾತನಾಡಿದರು. ಮಾರ್ಗರೇಟ್ ನವಿಲ್ ಮಿಮಿಕ್ರಿ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಪೂಜಾ ಕುಣಿತ, ವೀರಗಾಸೆ ನೃತ್ಯ, ಯಕ್ಷಗಾನ ಹಾಗೂಬಿದಿರಿನ ನೃತ್ಯ (ಮಿಜೋರಾಂ ಸಾಂಪ್ರದಾಯಿಕ ನೃತ್ಯ) ಆಕರ್ಷಕವಾಗಿ ಮೂಡಿಬಂದವು.
ಮುಖ್ಯ ಅತಿಥಿಗಳು ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಬಹುಮಾನ ವಿತರಿಸಿದರು. ಈ ಸಂದರ್ಭ ಪೋಷಕರು ಮತ್ತು ಪೋಷಕ ರಕ್ಷಕ ಸಂಘದ ವಿನುತಾ, ಸುಧಾ ಮುಮ್ತಾಜ್, ಜಗದೀಶ್, ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.