ಗೋಣಿಕೊಪ್ಪಲು, ಫೆ. 4: ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂಬ ಬಯಕೆ ಬಹಳವಿತ್ತು. ಆದರೆ ಮನೆಯಲ್ಲಿ ಬಡತನದಿಂದಾಗಿ ಆಸೆ ಈಡೇರಲಿಲ್ಲ. ತಂದೆ, ತಾಯಿ ಕಷ್ಟದ ಜೀವನ ಸಾಗಿಸಿದ್ದರು. ಆದರೂ, ಕಷ್ಟಪಟ್ಟು ಓದಿ ಇದೀಗ ತಹಶೀಲ್ದಾರ್ ಹುದ್ದೆಗೆ ತೃಪ್ತಿ ಪಟ್ಟುಕೊಂಡಿದ್ದೇನೆ. ಮೈಸೂರಿನಲ್ಲಿ ಉದ್ಯೋಗ ದಲ್ಲಿದ್ದಾಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಜೀವದ ಆಸೆ ತ್ಯಜಿಸಿದ್ದೆ. ಆದರೆ, ವೀರಾಜಪೇಟೆಗೆ ಬಂದ ನಂತರ ಆಯುರ್ವೇದ ಚಿಕಿತ್ಸೆ ಮೂಲಕ ತನ್ನೆಲ್ಲಾ ಕಾಯಿಲೆಗಳಿಂದ ಮುಕ್ತನಾದೆ ಎಂದು ವೀರಾಜಪೇಟೆ ತಹಶೀಲ್ದಾರ್ ಎಂ.ಸಿ. ಮಹದೇವ ಸ್ವಾಮಿ ಹೇಳಿದರು.

ಮಾಕುಟ್ಟದಲ್ಲಿ ಅಲ್ಲಿನ ಮೂಲ ನಿವಾಸಿಗಳು ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರಿನ ವೈದ್ಯರು ಕೊಡಗಿಗೆ ಬಂದು ಆರೋಗ್ಯವರ್ಧಿನಿ ಕಾರ್ಯಕ್ರಮ ಹಮ್ಮಿಕೊಂಡಿರುವದು ಶ್ಲಾಘನೀಯ. ಬಾಲ್ಯದಲ್ಲಿ ಹಿರಿಯರು ಗಿಡಮೂಲಿಕೆಗಳ ಕಷಾಯ ಮಾಡಿ ಕುಡಿಸುತ್ತಿದ್ದರು. ಆಗ ಯಾವದೇ ಕಾಯಿಲೆ ಇರಲಿಲ್ಲ. ಇದೀಗ ಅಲೋಪತಿಯತ್ತ ಅಧಿಕ ಮಂದಿ ವಾಲುತ್ತಿದ್ದು, ಹಲವು ಅಡ್ಡ ಪರಿಣಾಮದಿಂದಾಗಿ ಆರೋಗ್ಯದಲ್ಲಿ ದುಷ್ಪರಿಣಾಮ ಎದುರಾಗುತ್ತಿದೆ. ಆಯುರ್ವೇದ ಚಿಕಿತ್ಸೆ ನಿಧಾನ ವಾದರೂ ಆರೋಗ್ಯಪೂರ್ಣ ವಾಗಿರುವದರಿಂದ ಸಾರ್ವಜನಿಕರಲ್ಲಿ ಅಧಿಕ ಜಾಗೃತಿ ಮೂಡಿಸುವ ಕೆಲಸ ಆಗಬೇಕೆಂದರು.

ವೀರಾಜಪೇಟೆ ಕಂದಾಯ