ವೀರಾಜಪೇಟೆ, ಫೆ. 4: ವಿದ್ಯಾರ್ಥಿ ನಿತಿನ್ ಎಂಬಾತನಿಗೆ ಸರ್ಕಾರ “ಹೊಯ್ಸಳ ಶೌರ್ಯ ಪ್ರಶಸ್ತಿ” ನೀಡಿದ ಹಿನ್ನೆಲೆ ವೀರಾಜಪೇಟೆ ಕೊಡವ ಸಮಾಜದಿಂದ ಅಧ್ಯಕ್ಷ ವಾಂಚೀರ ನಾಣಯ್ಯ ಅವರು ನಿತಿನ್ಗೆ ರೂ. 4 ಸಾವಿರ ನಗದು ನೀಡಿ ಸನ್ಮಾನಿಸಿದರು.9ನೇ ತರಗತಿಯ ವಿದ್ಯಾರ್ಥಿ ನಿತಿನ್ ಕಡಂಗದಲ್ಲಿ ಫುಟ್ಬಾಲ್ ಪಂದ್ಯಾಟ ನೋಡಲು ಬಂದಿದ್ದ ಸಂದರ್ಭ ಕಡಂಗ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಸಲಾವುದ್ದೀನ್ ಹಾಗೂ ಸೋಫಿಯನ್ ಕೆರೆಗೆ ಬಿದ್ದು ಮುಳುಗುತ್ತಿದ್ದವರನ್ನು ಈಜು ಬಾರದ ನಿತಿನ್ ಅತೀ ಸಾಹಸದಿಂದ ರಕ್ಷಿಸಿದನೆಂದು ನವೆಂಬರ್ 14 ರಂದು ಸರಕಾರ ಪ್ರಶಸ್ತಿ ನೀಡಿ ಗೌರವಿಸಿತ್ತು.
ಈ ಹಿನ್ನೆಲೆ ಕೊಡವ ಸಮಾಜದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ 23 ವಿದ್ಯಾರ್ಥಿಗಳಿಗೆ ದತ್ತಿನಿಧಿ ಹಾಗೂ 40 ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯನ್ನು ವಿತರಿಸಲಾಯಿತು.