ಮಡಿಕೇರಿ, ಫೆ. 5: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪರಿಶಿಷ್ಟ ಜಾತಿ-ಪಂಗಡದ ಪತ್ರಿಕೋದ್ಯಮ ಪದವಿ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ‘ವೃತ್ತಿ ಮತ್ತು ನಿರೂಪಣಾ ಕೌಶಲ್ಯ’ ತರಬೇತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಲಾಖಾ ಅಂತರ್‍ಜಾಲ ತಾಣ ತಿತಿತಿ.ಞಚಿಡಿಟಿಚಿಣಚಿಞಚಿ iಟಿಜಿoಡಿmಚಿಣioಟಿ.gov.iಟಿ ನಲ್ಲಿ ಪ್ರಕಟಿಸಲಾಗಿದೆ.

ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಪ್ರದೇಶ ಉಪಯೋಜನೆಯಡಿ 2016-17 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಗಿರಿಜನ ಸಮುದಾಯಕ್ಕೆ ಸೇರಿದ ಪತ್ರಿಕೋದ್ಯಮ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲಮೋ ಇನ್ ಜರ್ನಲಿಸಂ ಹಾಗೂ ಆಡಿಯೋ ವಿಷುಯಲ್ ವಿಷಯಗಳಲ್ಲಿ ಪದವಿ ಪಡೆದ ಅಭ್ಯರ್ಥಿಗಳಿಗೆ ವೃತ್ತಿ ಕೌಶಲ್ಯತೆ ರೂಢಿಸಿಕೊಳ್ಳಲು ‘ವೃತ್ತಿ ಮತ್ತು ನಿರೂಪಣಾ ಕೌಶಲ್ಯ’ ತರಬೇತಿ ಏರ್ಪಡಿಸಲಾಗಿದೆ.

ವೃತ್ತಿ ಮತ್ತು ನಿರೂಪಣಾ ಕೌಶಲ್ಯ’ ತರಬೇತಿಗಾಗಿ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಮೆರಿಟ್ ಆಧಾರದ ಮೇಲೆ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ. ಎಲ್ಲಾ ಸೆಮಿಸ್ಟರ್‍ಗಳ ಎಲ್ಲ ವಿಷಯಗಳ ಒಟ್ಟಾರೆ ಅಂಕಗಳನ್ನು ಗಣನೆಗೆ ತೆಗೆದುಕೊಂಡು ಶೇಕಡಾವಾರು ಅಂಕಗಳನ್ನು ನಿರ್ಧರಿಸಲಾಗಿದೆ.

ಇಲಾಖೆಯಿಂದ ಈ ಹಿಂದಿನ ವರ್ಷಗಳಲ್ಲಿ ಏರ್ಪಡಿಸಲಾದ ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಪರಿಗಣಿಸಿಲ್ಲ. ಆಯ್ಕೆಪಟ್ಟಿ ಕುರಿತು ಯಾವದೇ ಆಕ್ಷೇಪಣೆಗಳಿದ್ದಲ್ಲಿ ಲಿಖಿತ ರೂಪದಲ್ಲಿ ಇಲಾಖೆ ಕೇಂದ್ರ ಕಚೇರಿ ‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ’, ವಾರ್ತಾ ಸೌಧ, ನಂ17, ಭಗವಾನ್ ಮಹಾವೀರ್ ರಸ್ತೆ, ಬೆಂಗಳೂರು-560 001 ಇಲ್ಲಿ ಸಲ್ಲಿಸುವದು ಅಥವಾ ಞoushಚಿಟಥಿಚಿ ಣಡಿಚಿiಟಿiಟಿg2017@gmಚಿiಟ.ಛಿom ಗೆ ಮೇಲ್ ಮೂಲಕವೂ ಆಕ್ಷೇಪಣೆಗಳನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಯ ದೂರವಾಣಿ ಸಂಖ್ಯೆ 22028034 ಅನ್ನು ಸಂರ್ಪಕಿಸುವದು.