*ಗೋಣಿಕೊಪ್ಪಲು, ಫೆ. 5: ಮಾರುಕಟ್ಟೆ ಸಮೀಪದ ವಾಣಿಜ್ಯ ಕಟ್ಟಡವನ್ನು ಕಾನೂನು ಉಲ್ಲಂಘಿಸಿ ಕೆಡವಿ ಹಾಕಿದ ಗ್ರಾ.ಪಂ. ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಒತ್ತಾಯಿಸಿದ್ದಾರೆ.ಆರ್.ಎಂ.ಸಿ. ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾ.ಪಂ. ಸದಸ್ಯರುಗಳಾದ ಮಂಜುಳ ಹಾಗೂ ಮುರುಘ ಕಾನೂನು ಉಲ್ಲಂಘಿಸಿ ವಾಣಿಜ್ಯ ಕಟ್ಟಡವನ್ನು ಕೆಡವಿ ಹಾಕಿ ಪಂಚಾಯ್ತಿಗೆ ನಷ್ಟ ತಂದಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇವರ ಬಗ್ಗೆ ಪಂಚಾಯಿತಿ ವತಿಯಿಂದ ದೂರು ದಾಖಲಿಸಿದ್ದು ತನಿಖೆಗೆ ಆಗ್ರಹಿಸಲಾಗಿದೆ ಎಂದು ತಿಳಿಸಿದರು.
ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಕಟ್ಟಡವನ್ನು ಕೆಡವಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಜಿ.ಪಂ. ಅನುದಾನದ 20 ಲಕ್ಷವನ್ನು ಬಳಕೆ ಮಾಡುವಂತೆ ತೀರ್ಮಾನಿಸಲಾಯಿತು.
ಮಂಜುಳ ಹಾಗೂ ಮುರುಘÀ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡದೆ ಏಕ ನಿರ್ಧಾರ ಕೈಗೊಂಡು ಕಾನೂನು ಉಲ್ಲಂಘಿಸಿದ್ದಾರೆ. 1996ರಲ್ಲಿ ನಿರ್ಮಿಸಿದ ಕಟ್ಟಡವನ್ನು ಕೆಡವಿ ಹಾಕಿದ ಇವರುಗಳು ಇತ್ತಿಚಿನ ದಿನಗಳಲ್ಲಿ ಕಟ್ಟಿದ ಕಟ್ಟಡಗಳನ್ನು ಸಹ ಕೆಡವಿ ಹಾಕುವದರಲ್ಲಿ ಯಾವದೇ ಸಂಶಯವಿಲ್ಲ. ಅಧ್ಯಕ್ಷರನ್ನು ಕಡೆಗಣಿಸಿ ಈ ರೀತಿಯ ವರ್ತನೆ ಮಾಡಿದ ಮುರುಘÀ ಹಾಗೂ ಮಂಜುಳ ಅವರ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಈ ಸಂದರ್ಭ ಆಗ್ರಹಿಸಿದರು. ಪಂಚಾಯಿತಿಗೆ ಈ ಕಟ್ಟಡದಿಂದ 20 ಸಾವಿರ ವರಮಾನ ತಿಂಗಳಿಗೆ ಲಭ್ಯವಾಗುತ್ತಿತ್ತು. ಸದಸ್ಯರುಗಳಾದ ಮುರುಘ ಹಾಗೂ ಮಂಜುಳಾ ಕಟ್ಟಡ ಕೆಡವಿ ಪಂಚಾಯಿತಿಗೆ ನಷ್ಟ ತಂದಿದ್ದಾರೆ. ಕಟ್ಟಡ ಕೆಡವುವ ಸಂದರ್ಭ ಕಟ್ಟಡದಲ್ಲಿದ್ದ ಬೆಲೆಬಾಳುವ ವಸ್ತುಗಳು ಕಾಣೆಯಾಗಿವೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಸರ್ವ ಸದಸ್ಯರ ನಿರ್ಣಯಕ್ಕೆ ಬದ್ಧರಾಗಿರಬೇಕಾದ ಸದಸ್ಯರುಗಳು ಕಾನೂನು ಉಲ್ಲಂಘಿಸಿ ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದಾರೆ. ಇಂತಹವರು ಜನಪ್ರತಿನಿಧಿಯಾಗಿರಲು ಅರ್ಹತೆ ಇಲ್ಲ ಎಂದರು.
ಕಟ್ಟಡ ಕೆÀಡವುದರ ಹಿಂದೆ ಸ್ವಾರ್ಥ ಅಡಗಿದೆ. ಕಾನೂನು ತಿಳಿಯದೆ ಈ ರೀತಿ ವರ್ತಿಸುವದು ಸಭ್ಯರ ಲಕ್ಷಣವಲ್ಲ. ಸಭೆಗೆ ಹಾಗೂ ಅಧ್ಯಕ್ಷರಿಗೆ ಗೌರವ ನೀಡದ ಸದಸ್ಯರುಗಳ ವರ್ತನೆ ಸಾರ್ವಜನಿಕರ ಹಿತದೃಷ್ಟಿಯಿಂದ ಒಳಿತಲ್ಲ ಎಂದು ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಹೇಳಿದರು.
ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ಮಾತನಾಡಿ ಕಟ್ಟಡ ಕೆಡವುದರ ಬಗ್ಗೆ ನನಗೆ ಮಾಹಿತಿ ನೀಡಿಲ್ಲ. ಅಧ್ಯಕ್ಷರ ಸ್ಥಾನಕ್ಕೆ ಅಗೌರವ ತರುವ ಕಾರ್ಯ ಈ ಸದಸ್ಯರಿಂದ ನಡೆದಿದೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಈಗಾಗಲೇ ಇವರ ಮೇಲೆ ದೂರು ದಾಖಲಿಸಿದ್ದೇವೆ. ತನಿಖೆ ನಡೆಯಬೇಕಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸದಸ್ಯರುಗಳಾದ ಕೆ.ಪಿ. ಬೋಪಣ್ಣ, ರತಿ ಅಚ್ಚಪ್ಪ, ನಗರ ಬಿ.ಜೆ.ಪಿ. ಅಧ್ಯಕ್ಷ ಗಾಂಧಿ ದೇವಯ್ಯ, ತಾಲೂಕು ಉಪಾಧ್ಯಕ್ಷ ಕಾವೇರಿ ಮಂದಣ್ಣ ಉಪಸ್ಥಿತರಿದ್ದರು.